ಮಳೆಹನಿ
ಸೋಜಿಗ
ಕಡಲ ತಡಿಯಲ್ಲಿ ಹೂವಿನ
ಪಕಳೆಗಳನ್ನು ಸುರಿದು
ಕಡಲು ಪನ್ನೀರಾಗುವ
ಸೋಜಿಗಕ್ಕಾಗಿ ಕಾದಿದ್ದೇನೆ
ಪಕಳೆಗಳನ್ನು ಸುರಿದು
ಕಡಲು ಪನ್ನೀರಾಗುವ
ಸೋಜಿಗಕ್ಕಾಗಿ ಕಾದಿದ್ದೇನೆ
ಮಳೆಸುಖ
ಮುಂಗಾರು ಮೋಡದ ಉಯ್ಯಾಲೆ ಕಟ್ಟಿ ಮಳೆಗಾಗಿ ಕಾತರಿಸಿದ್ದೇನೆ
ಮಲ್ಲಿಗೆ ದಂಡೆಯ ಚಿಂತೆ ಬಿಡು
ಮಣ್ಣಿನ ಘಮಲಿನ ಮಣಿ ಪೋಣಿಸುವೆದಾಹ
ಕಡಲ ಅಲೆಗಳು ಆದರೂ
ತೀರಕ್ಕೆ ಅದೆಂಥ ದಾಹ
ಕೆನ್ನೆಯ ಮೇಲೆ ಒಡೆದ ಬೆವರ
ಹನಿಗಳನ್ನೆಲ್ಲ ನಿನ್ನ ಬೆರಳ ತುದಿ
ಹೀರಿಕೊಂಡಂತೆ!
ಚಂದ್ರಮನಿಗೆ..

ಹಾಲಲ್ಲಿ ಕರಗಲಾರೆ ಎನ್ನುವ ಸಿಹಿ ಜೇನೇ
ನೀರಲ್ಲಿ ಬೆರೆಯಲಾರೆ ಎನ್ನುವ ಸಕ್ಕರೆಯೇ
ನನ್ನದೆಯ ಆಕಾಶದಲ್ಲೇ ಬಚ್ಚಿಟ್ಟುಕೊಂಡು
ಕಣ್ತಪ್ಪಿಸುವ ಚಂದ್ರಮನೇ...
ಅಲೆಗಳ ಮುಂದೆ

ಚಿಪ್ಪಿನೊಳಗಿಂದ ಮುತ್ತು ಅರಳುವುದೆಂದು
ಕಡಲ ಮುಂದೆ ಬೊಗಸೆ ಹಿಡಿದು
ಕಾಯುವುದು ಬಲುಕಷ್ಟ
ಅಲೆಗಳು ತರುವ ಉಪ್ಪು ನೀರು
ಅಂಗೈಯ ನೆರಿಗೆಗಳ
ಲೆಕ್ಕ ಕೇಳುವುದಿಲ್ಲ...