ಪೋಸ್ಟ್‌ಗಳು

ನವೆಂಬರ್ 7, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಫೋಟೋಗ್ರಫಿ ಕಲಿಸಲು ಅಡ್ವೋಕೇಟ್...!!

ಇಮೇಜ್
(ವಿ.ಕೆ.ಮೂರ್ತಿ ಅಂದ ಕೂಡಲೇ ಕಾಗಜ್ ಕೆ ಫೂಲ್, ಪ್ಯಾಸಾ, ಪಾಕೀಜಾ... ಇವರ ಕಟ್ಟಾ ದೋಸ್ತ್ ಗುರುದತ್... ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಡೀ ಇಂಡಿಯಾಕ್ಕೆ ಮೊಟ್ಟಮೊದಲ ಸಿನೆಮಾಸ್ಕೋಪ್ ಸಿನೆಮಾ (ಕಾಗಜ್ ಕೆ ಫೂಲ್) ಕೊಟ್ಟವರು, ಕಪ್ಪು-ಬಿಳುಪು ಫೋಟೋಗ್ರಫಿಗೆ ಹೊಸ ಭಾಷ್ಯ ಬರೆದವರು, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾದವರು... ವೆಂಕಟರಾಮ ಕೃಷ್ಣಮೂರ್ತಿ ಅವರೊಂದಿಗೆ ಕೆಲ ಕಾಲ ಕಳೆದರೆ ಹೇಗೆ? ತುಂಬ ಭಯದಿಂದಲೇ ನಮ್ ಟೀಮ್ ಅವರ ಮನೆಗೆ ಭೇಟಿ ಕೊಟ್ಟಿತು. ನಮಗೆ ನಿಜಕ್ಕೂ ಅಚ್ಚರಿ. ಯಾವ ಗತ್ತು-ಗೈರತ್ತೂ ಇಲ್ಲದೇ ಚಿಕ್ಕ ಮಗುವಿನಂತೆ ನಮ್ಮ ಅವರು ಮಾತನಾಡಿದ್ದು ಬರೋಬ್ಬರಿ ಒಂದೂವರೆ ತಾಸು...! ವಾಯಲಿನ್ ಕಲಿತದ್ದು, ನಟನಾಗಬೇಕು ಅಂದುಕೊಂಡಿದ್ದು, ಫೋಟೋಗ್ರಫಿ ಶುರು ಮಾಡಿದ್ದು, ಮುಂಬೈ ಸಿನೆಮಾ ಜಗತ್ತಿನ ಬಾಗಿಲು ತಟ್ಟಿದ್ದು, ಗುರುದತ್ ಜೊತೆ ಸೇರ್ಕೊಂಡು ಮಾಸ್ಟರ್ ಪೀಸ್ ಗಳನ್ನು ಕೊಟ್ಟಿದ್ದು... ಎಲ್ಲವನ್ನೂ ಅವರು ಮಾತನಾಡಿದರು. ಇಷ್ಷಾದರೂ ಅವರ ಜೊತೆ ಇನ್ನೂ ಮಾತನಾಡಬೇಕು ಎಂಬ ಆಸೆ ನಮಗೆ. ಕೊನೆಗೆ ಅವರೇ ನಮ್ಮನ್ನೆಲ್ಲ ನಿಲ್ಲಿಸಿ ಫೋಟೋ ತೆಗಿದಿದ್ದು... ಹೀಗೆ ಕಳೆದ ಕೆಲ ಆಪ್ತ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಈ ಅಂತರಂಗದ ಮಾತುಕತೆಯ ಮೊದಲ ಭಾಗ ಇದು...) ಆ್ಯಕ್ಟರ್ ಆಗಲು ಹೊರಟು... ನನಗೆ ನಾಟಕವೆಂದರೆ ಬಹಳ ಇಷ್ಟ. ಆಗಿನ ಕಾಲಕ್ಕೆ ನಾನು ವೃತ್ತಿಪರ ನಾಟಕ ಕಂಪೆನಿಗೆ ಹೊರಟು ಹೋಗಿದ್ದೆ. ಆಗಿನ...