ಪೋಸ್ಟ್‌ಗಳು

ಜೂನ್ 9, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಗ್ನಿ ಮತ್ತು ಮಳೆಗೂ ಮುನ್ನ ಅಘೋರಿ ಭೇಟಿ ಮಾಡಿದ್ದ ಕಾರ್ನಾಡರು!

ಇಮೇಜ್
ಹಿರಿಯರಾದ ಧಾರವಾಡದ ಸುರೇಶ್ ಕುಲಕರ್ಣಿ   ಅವರು ಗಿರೀಶ್ ಕಾರ್ನಾಡ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದವರು . ಉತ್ಸವ ಸೇರಿದಂತೆ ಕಾರ್ನಾಡರ   ಅನೇಕ ಸಿನೆಮಾಗಳಲ್ಲಿ ಜೊತೆಗಿದ್ದು ಕೆಲಸ ಮಾಡಿದವರು . ಕಾರ್ನಾಡರ ವೇವ್ಲೆಂಗ್ತ್ ಏನೆಂಬುದು ಕುಲಕರ್ಣಿ ಅವರಿಗೆ ಚೆನ್ನಾಗಿ ಗೊತ್ತಿತ್ತು . ಕೆಲ ಸಮಯದ ಹಿಂದೆ ಅವರನ್ನು ಧಾರವಾಡದಲ್ಲಿ ಭೇಟಿಯಾಗಿದ್ದಾಗ ಕಾರ್ನಾಡರ ಬಗ್ಗೆ ಅವರು ಅನೇಕ ರಸವತ್ತಾದ ಸಂಗತಿಗಳನ್ನು ಹೇಳಿದ್ದರು . ಹಿಂದಿ ಚಿತ್ರರಂಗದ ಬಗ್ಗೆ , ಗಾಯಕರ ಬಗ್ಗೆ ಅಥೆಂಟಿಕ್ ಆಗಿ ಮಾತನಾಡುವ ಸುರೇಶ್ ಕುಲಕರ್ಣಿ ಅವರ ನೆನಪಿನ ಶಕ್ತಿ ಮಾತ್ರ ನಿಜಕ್ಕೂ ಅದ್ಭುತ . ಕಾರ್ನಾಡರ ಜೊತೆಗಿನ ಒಡನಾಟದ ಪ್ರತಿ ಕ್ಷಣವನ್ನೂ ಅವರು ಕರಾರುವಕ್ಕಾಗಿ ದಾಖಲಿಸಬಲ್ಲವರು ಕುಲಕರ್ಣಿ . ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುವುದು ಈಗ ಸೂಕ್ತ ಎಂದು ಭಾವಿಸಿದ್ದೇನೆ . ಕಾರ್ನಾಡರು ಅಗ್ನಿ ಮತ್ತು ಮಳೆ ನಾಟಕವನ್ನು ಬರೆಯುತ್ತಿದ್ದ ಸಮಯವದು . ಒಂದು ದಿನ ಸುರೇಶ್ ಕುಲಕರ್ಣಿ ಅವರ ಮನೆಗೆ ಬಂದ ಗಿರೀಶ್ ಕಾರ್ನಾಡರು , “ನಿಮಗೆ ಯಾರಾದರೂ ಅಘೋರಿಗಳು ಗೊತ್ತಾ ಸುರೇಶ್ ?” ಎಂದು ಕೇಳಿದರು . “ಹಾಂ , ಗೊತ್ತಲ್ಲ ? ಇಲ್ಲೇ ಧಾರವಾಡದಾಗ ಅದಾರ್ರೀ , ನನ್ ಕ್ಲೋಸ್ ಫ್ರೆಂಡ್ ಅದಾನ್ರೀ ಒಬ್ಬಾಂವ” ಅಂತಂದರು . “ಏಯ್ , ಅವ್ರೂ ಗೊತ್ತೇನ್ರೀ...