ಪ್ರಕೃತಿ ನೀಡುವ ಪ್ರತಿ ಹನಿಗೂ ಬೊಗಸೆಯೊಡ್ಡುವ ವಿಜ್ಞಾನಿ..!
ಪರಿಶುದ್ಧ ನೀರು , ಗಾಳಿ , ಶುಭ್ರ ವಾತಾವರಣ ಮತ್ತು ಪರಿಶುದ್ಧ ಮನಸ್ಸು ಇವುಗಳ ಬ ಗ್ಗೆ ಯೋ ಚಿಸುವುದೇ ಕ್ಲೀಷೆ ಅನ್ನಿಸುವಂತಹ ದಿನಗಳಿವು. ಕೆರೆಯನ್ನೇ ಮುಚ್ಚಿ ಮನೆಗಳನ್ನು ನಿ ರ್ಮಿ ಸುವ , ಬೆಟ್ಟವನ್ನೇ ಕಡಿದು ಬಂಗಲೆ ಕಟ್ಟುವವರ ನಡುವೆ ಇಂಥವರೂ ಇದ್ದಾರೆಯೇ ಎಂಬ ಅಚ್ಚರಿ ಕಾಡುತ್ತದೆ. ಯಾವ ಘೊಷಣೆಯೂ ಇಲ್ಲದೆ ಒಂದು ಸುಸ್ಥಿರ ಬದುಕಿಗೆ ಬೇಕಾದ ಎ ಲ್ಲವನ್ನೂ ಅಳವಡಿಸಿಕೊಂಡು , ಆಸ್ವಾದಿಸುತ್ತ ಬದುಕುವವರೂ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಸಾಕ್ಷಿ ಈ ವಿಜ್ಞಾನಿ. ಇವರ ಮನೆ , ಮನೆ ಕಟ್ಟಿಸಬೇಕೆನ್ನುವವರಿಗೊಂದು ಮಾದರಿ. ಒಬ್ಬ ಮನುಷ್ಯ ಪ್ರಕೃತಿಯನ್ನು ನಂಬುತ್ತಾ ಅದರೊಂದಿಗೇ ಲೀನವಾಗಿ ಹೇಗೆ ಜೀವಿಸಬಹುದು ಎಂಬುದಕ್ಕೆ ಈ ವಿಜ್ಞಾನಿಯ ಬದುಕೇ ಪಾಠ. *** ವಿಜ್ಞಾನಿ ಶ್ರೀ ಎ.ಆರ್.ಶಿವಕುಮಾರ್ ಒಂದೇ ಒಂದು ಹನಿ ನೀರು ಅವರ ಮನೆಯಿಂದ ಆಚೆ ಹೋ ಗುವುದಿಲ್ಲ. ಜಲಮಂಡಳಿಯ ಸಂಪರ್ಕವೂ ಅವರ ಮನೆಗೆ ಇಲ್ಲ. ಪ್ಲಾಸ್ಟಿಕ್ ಬಿಟ್ಟರೆ ಒಂದು ಸಣ್ಣ ಕಸ , ವೇಸ್ಟ್ ಪೇಪರ್ ಕೂಡ ಮನೆಯಿಂದ ಆಚೆ ಹಾಕುವುದಿಲ್ಲ. ಅವರು ಬಳ ಸೋದು ಕೇವಲ ಶೇ. 25 ಬೆಸ್ಕಾಂ ವಿದ್ಯುತ್. ಉಳಿದಿದ್ದೆಲ್ಲ ಸೂರ್ಯನ ಬೆಳಕೇ. ಕುಡಿಯುವ ನೀರಿನ ಸಂಸ್ಕರಣೆಗೆ ದುಬಾರಿ ಮಷಿನ್ ಇಲ್ಲ. ಬೆಳಕೂ ಅಷ್ಟೇ ; ದಿನದ ಯಾವುದೇ ಹೊತ್ತಿನಲ್ಲಿ ಮನೆಯ ಪ್ರತಿ ಮೂಲೆಯಲ್ಲೂ ಅದರ ತೋ ರಣ , ಬೆಳದಿಂಗಳು ಕೂಡ. ಅವರೇ ಟೊಂಕಕಟ್ಟಿ ಕಟ್ಟಿದ ಮನೆಗೆ ಈಗ ಬರೋ ಬ್ಬರಿ ಇಪ್ಪತ್ತು ವರ್ಷ. ...