ಪೋಸ್ಟ್‌ಗಳು

ಆಗಸ್ಟ್ 1, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮತ್ತೆ ಮಗುವಾಗಬೇಕು.....

ಇಮೇಜ್
ಹೊರಗೆ ನಿರಾಭರಣ ಬಯಲಿತ್ತು ಒಳಗೆ ಚಳಿಯ ಕನಲಿತ್ತು ಕದಡಿದ ಕಾವಳಕ್ಕಂಜದೇ ಬಾನಿಗಂಟಿದ್ದ ನಕ್ಷತ್ರಗಳೆಡೆಗೆ ಬೊಟ್ಟು ತೋರಿಸಿ ಮಗ್ಗಿ ಹೇಳಿದವಳು ನೀನು ತಾರೆಗಳ ಊರಿನಿಂದ ಹೊರಟ ಚೆಂಬೆಳಕು ನಿನ್ನ ಕೋಣೆಗುಂಟ ನಿಲುಕಲಿಲ್ಲ. ಬೆಣ್ಣೆಯಂಥ ಕೈಯ ತುಂಬ ಮದರಂಗಿಯ ಚುಕ್ಕೆ ಇಟ್ಟು ರಾಣಿಯ ಕಥೆ ಬಿಚ್ಚಿದವಳು ಬೇರು ಬಿಡುವ ಬಣ್ಣದ ಕೆಳಗೆ ನಾಳೆಗಳ ಗಂಟು ಕಟ್ಟಿದವಳು ಹರಡಿಕೊಂಡ ಕನಸ ರಾಶಿ ನಿನ್ನ ಬೆರಳ ತುದಿಯಲ್ಲಿ ಜೀವನ್ಮುಖಿಯಾಗಲಿಲ್ಲ. ಸುಕ್ಕುಗಟ್ಟಿದ ಹಾಳೆಯ ತುಂಬ ಊರ ತೇರಿನ ಚಿತ್ರ ಬಿಡಿಸಿ ನನ್ನ ಪೋಕರಿ ಕಣ್ಣುಗಳಲ್ಲಿ ಹಬ್ಬದ ಬಾಷ್ಯ ಬರೆದವಳು ನಿನ್ನ ಕಣ್ಣಂಚಿನಲ್ಲಿ ಹೊರಟ ಸಂಕಟಗಳ ಮೆರವಣಿಗೆಗೆ ಮತಾಪುಗಳ ಸ್ವಾಗತವಿರಲಿಲ್ಲ ಹಿತ್ತಿಲ ಬಿದಿರ ಕಡ್ಡಿಗಳನ್ನು ಪೋಣಿಸಿ ಆಕಾಶಬುಟ್ಟಿ ಕಟ್ಟಿ ನನ್ನ ಕಣ್ಣಲ್ಲಿ ದೀಪಗಳ ತೊಟ್ಟಿಲು ಕಟ್ಟಿದವಳು ನೀನು ಹೊಸಮಳೆ ಬಿದ್ದ ನೆಲದಲ್ಲಿ ಕವಿತಿದ್ದ ಹಳೆ ಗರುಕೆಯ ಬುಡದಲ್ಲಿ ಜೀವರಸದ ಆಸೆ ಕಂಡವಳು ನೀನು ಹರಿಸಿದ ಬೆವರ ಹನಿಗಳು ಜೀವಸೆಲೆಯಾಗಲಿಲ್ಲ ಹರಿಯುವ ತೊರೆಯ ತಟದಲ್ಲಿ ಅರಳಿದ ಕೇದಗೆ ನೀನು ಹೂವಿನೆಸಳಿನ ಗಂಧ ನೀನು ನಿನ್ನ ಅಂತರಂಗದ ಕಂಪಿನಲ್ಲಿ ನಾನು ಮತ್ತೆ ಮಗುವಾಗಬೇಕು ಅಳಸಿ ಹೋದ ಚಿತ್ರಗಳಿಗೆಲ್ಲ ಜೀವ ತುಂಬಬೇಕು.