ಬ್ರಾಂಡ್ ಬೆಂಗಳೂರಿಗೆ ನವಚೈತನ್ಯ: ದಕ್ಷಿಣ ಭಾರತದ ಮೊದಲ ಡಬ್ಬಲ್ ಡೆಕ್ಕರ್ ರಸ್ತೆ

 -ಚಂದ್ರಮುಖಿ


ವಿಶ್ವದ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ. ಇದು ಸಿಲಿಕಾನ್ ಸಿಟಿ, ಗಾರ್ಡನ್ ನಗರಿ, ಮಾಹಿತಿ ತಂತ್ರಜ್ಞಾನದ ತೊಟ್ಟಿಲು. ವರ್ಷದ ಬಹುತೇಕ ತಿಂಗಳು ಇಲ್ಲಿರುವುದು ಸಹನೀಯ ಹವಾಮಾನ. ಅರ್ಧಕ್ಕರ್ಧ ನಗರವನ್ನು ಸುತ್ತುವರಿದಿರುವ ಮೆಟ್ರೊ ರೈಲು, ವರ್ತುಲ ರಸ್ತೆಗಳು, ಎಕ್ಸಪ್ರೆಸ್ ಹೈವೆ, ವಿಶ್ವದರ್ಜೆಯ ಅಂತಾರಾಷ್ಟಿçà ವಿಮಾನ ನಿಲ್ದಾಣ... ಹೀಗೆ ಇಲ್ಲಿ ಜಗತ್ತಿನ ಅನೇಕ ನಗರಿಗಳಿಗೆ ಹೆಗಲೆಣೆಯಾಗಿ ನಿಲ್ಲುವ ಮೂಲಸೌಕರ್ಯಗಳು. ಬಹುಷಃ ಬೆಂಗಳೂರೆA ಸುಂದರಿಯನ್ನು ಇಷ್ಟಪಡದೇ ಇರಲು ಕಾರಣಗಳು ವಿರಳ!

ನಮ್ಮ ದೇಶದ ಅನೇಕ ನಗರಗಳ ಜೊತೆಗೆ ಪೈಪೆÇÃಟಿಗೆ ನಿಲ್ಲುವ ಇಂತಹ ವಿಶ್ವಮಟ್ಟದ ಶಹರಿಗೆ ಇನ್ನೊಂದು ಸೌಲಭ್ಯ ಈಗ ಸೇರ್ಪಡೆಯಾಗುತ್ತಿದೆ. ಅದು ಡಬ್ಬಲ್ ಡೆಕ್ಕರ್ ರಸ್ತೆ. ಅರ್ಥಾತ್ ರೋಡ್ ಕಮ್ ರೈಲು ರಸ್ತೆ. ಮೇಲ್ಭಾಗದಲ್ಲಿ ಮೆಟ್ರೋ ಹಳದಿ ರೈಲು ಮಾರ್ಗ. ಕೆಳಗೆ ಇಕ್ಕೆಲೆಗಳಲ್ಲಿ ಎಲವೇಟೆಡ್ ರಸ್ತೆಗಳು. ನೆಲಮಟ್ಟದಲ್ಲಿಯೂ ಎಡ-ಬಲ ಭಾಗಗಳಲ್ಲಿ ಎರಡು ರಸ್ತೆಗಳು. ಯಾವುದೇ ಅಡೆ-ತಡೆಗಳಿಲ್ಲದೆ ಸುಗಮ ಸಂಚಾರ.

ಇದು ಸಾಧ್ಯವಾಗಿರುವುದು ದಕ್ಷಿಣ ಬೆಂಗಳೂರಿನ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ. ಇದರ ಒಟ್ಟು ಉದ್ದ . ಕಿ.ಮೀ. ರೈಲು ಮತ್ತು ವಾಹನ ಸಂಚಾರ ಸುಲಲೀತ. ಇಂತಹ ಡಬಲ್ ಡೆಕ್ಕರ್ ರಸ್ತೆ ಸೌಲಭ್ಯ ಹೊಂದುತ್ತಿರುವ ದಕ್ಷಿಣ ಭಾರತದ ಮೊದಲ ನಗರ ಬೆಂಗಳೂರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಂತಾರಾಷ್ಟಿçà ಗುಣಮಟ್ಟದ ರಸ್ತೆಗಳು, ಫ್ಲೆöÊಓವರ್ಗಳನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರವನ್ನು ವಿಶ್ವದರ್ಜೆಗೆ ಏರಿಸಬೇಕು ಎಂಬ ಸಂಕಲ್ಪ ರಾಜ್ಯದ ಸಿದ್ದರಾಮಯ್ಯ ಸರ್ಕಾರದ್ದು. ಅದಕ್ಕೆ ಬಹುದೊಡ್ಡ ಮೈಲಿಗಲ್ಲಾಗಿದೆ ಬ್ರಾಂಡ್ ಬೆಂಗಳೂರು ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿರುವ ಪ್ರತಿಷ್ಠಿತ ಡಬ್ಬಲ್ ಡೆಕ್ಕರ್ ರಸ್ತೆ.

ಬೆಂಗಳೂರು ಎಂತಹ ಸಿಲಿಕಾನ್ ಸಿಟಿಯಾದರೂ ಇಲ್ಲಿನ ಟ್ರಾಫಿಕ್ ಜಂಜಾಟದ ಬಗ್ಗೆ ಹಿಡಿಶಾಪ ಹಾಕುವವರು ಇನ್ನು ಮುಂದೆ ನಿಟ್ಟುಸಿರು ಬಿಡುವಂತಾಗಿದೆ. ನಗರದ ಅನೇಕ ಜಂಕ್ಷನ್ಗಳು ಯಾವತ್ತೂ ವಾಹನ ದಟ್ಟಣೆಯಿಂದ ತುಂಬಿ ಹೋಗುತ್ತಿದ್ದವು. ಇದರಿಂದಾಗಿ ಮೂರು-ನಾಲ್ಕು ಕಿ.ಮೀ. ಕ್ರಮಿಸಲು ಬರೋಬ್ಬರಿ ೩೫ರಿಂದ ೪೫ ನಿಮಿಷಗಳು ಬೇಕಾಗಿತ್ತು. ಬೆಳಿಗ್ಗೆ ಆಫೀಸಿಗೆ ಹೋಗುವ ಧಾವಂತದಲ್ಲಿ ಇದ್ದವರ ಕಷ್ಟ ಹೇಳ ತೀರದು. ಒಂದಡಿಯೂ ಮುಂದಕ್ಕೆ ಚಲಿಸದ ಹಾಗೆ ವಾಹನಗಳು ತಾಸುಗಟ್ಟಳೆ ನಿಂತು ಬಿಡುವ ಪ್ರಕರಣಗಳು ಹೊಸದೇನೂ ಅಲ್ಲ. ಅಂತಹ ಜಂಕ್ಷನ್ಗಳಲ್ಲಿ ಒಂದೆAದರೆ ಸಿಲ್ಕ್ ಬೋರ್ಡ್ ಜಂಕ್ಷನ್.

ಇಲ್ಲಿ ಪೀಕ್ ಹವರ್ಗಳಲ್ಲಿ ಕನಿಷ್ಠ ಹದಿನೈದು ಸಾವಿರಕ್ಕೂ ಹೆಚ್ಚು ವಾಹನಗಳು ಹಾದು ಹೋಗುತ್ತವೆ ಎಂದು ಅಂದಾಜು ಮಾಡಲಾಗಿದೆ. ಯಾಕೆಂದರೆ ಬೆಂಗಳೂರಿನಲ್ಲಿಯೇ ಅತ್ಯಂತ ಪ್ರಮುಖ ಜಂಕ್ಷನ್. ಅನೇಕ ಐಟಿ ಹಬ್ಗಳಿಗೆ ಇದು ರಾಜಮಾರ್ಗ. ಎಚ್.ಎಸ್.ಆರ್ ಬಡಾವಣೆ, ಎಲೆಕ್ಟಾçನಿಕ್ ಸಿಟಿ, ಬೆಳ್ಳಂದೂರು, ಹೊಸೂರು ರಸ್ತೆ (ರಾಷ್ಟಿçà ಹೆದ್ದಾರಿ-೪೪), ಮಹದೇವಪುರ, ಕನಕಪುರ ಮೊದಲಾದ ಕಡೆಗಳಿಗೆ ಇದು ಲಿಂಕ್ ಜಂಕ್ಷನ್. ಇದನ್ನು ಸರಾಗಗೊಳಿಸಿಬಿಟ್ಟರೆ ಬಹಳ ದೊಡ್ಡಬಾಟಲ್ನೆಕ್ ಒಂದನ್ನು ಶಾಶ್ವತ ನಿವಾರಣೆ ಮಾಡಿದಂತಾಗುತ್ತದೆ. ಬಹುಷಃ ಡಬ್ಬಲ್ ಡೆಕ್ಕರ್ ರಸ್ತೆ ನಿರ್ಮಾಣ ಸಮಸ್ಯೆಯನ್ನು ನೀರು ಕುಡಿದಷ್ಟು ಸಲೀಸಾಗಿ ಪರಿಹರಿಸಿದಂತಾಗಿದೆ.

ಉಫ್! ಇದೊಂದು ನಿಜಕ್ಕೂ ಬಹುದೊಡ್ಡ ರಿಲೀಫ್. ಇಂತಹುದೊAದು ಪರಿಕಲ್ಪನೆಯನ್ನು ಜಾರಿಗೆ ತಂದ ಸರ್ಕಾರಕ್ಕೆ, ಅಧಿಕಾರಿಗಳಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಪ್ರತಿ ದಿನ ರಸ್ತೆಯಲ್ಲಿ ಕಚೇರಿಗೆ ಓಡಾಡುವ ನನಗೆ ಜೀವ ಕೈಗೆ ಬಂದAತಾಗುತ್ತಿತ್ತು. ಎಷ್ಟೇ ಬೇಗ ಹೊರಟರೂ ಬೆಳ್ಳಂದೂರು ತಲುಪುವ ಹೊತ್ತಿಗೆ ಲೇಟ್ ಆಗುತ್ತಿತ್ತು. ಇದನ್ನು ದಾಟಿ ಹೋಗಲು ಕನಿಷ್ಠ ಐವತ್ತು ನಿಮಿಷ ಬೇಕು. ಡಬಲ್ ಡೆಕ್ಕರ್ ರಸ್ತೆ ನನ್ನ ಜೀವನದ ಬಹುಮೂಲ್ಯ ಸಮಯವನ್ನು ಉಳಿಸಲಿದೆ. ಬಿಗ್ ಥ್ಯಾಂಕ್ಸ್

ಎನ್ನುತ್ತಾರೆ ಪ್ರತಿದಿನ ಬನಶಂಕರಿಯಿA ಬೆಳ್ಳಂದೂರು ಐಟಿ ಪಾರ್ಕ್ಗೆ ಕೆಲಸಕ್ಕೆ ತೆರಳುವ ಮಹೇಂದ್ರ ಕುಮಾರ್. ಇದು ಅವರೊಬ್ಬರ ಅಭಿಪ್ರಾಯವೂ ಅಲ್ಲ, ಅವರೊಬ್ಬರ ಅನುಭವವೂ ಅಲ್ಲ. ಸಾವಿರಾರು ಮಂದಿ ದಿನವೂ ಇಂತಹ ಕಹಿ ಅನುಭವಗಳಿಗೆ ಮುಖಾಮುಖಿಯಾಗುತ್ತಿದ್ದಾರೆ ಎಂಬುದು ಸತ್ಯ. ಜನರ ಸಂಕಷ್ಟಗಳಿಗೆ ಕೊನೆ ಹಾಡಲೆಂದೇ ನಿರ್ಮಾಣವಾಗಿರುವುದು ಡಬಲ್ ಡೆಕ್ಕರ್ ರಸ್ತೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾವೇ ಕಾರು ಚಲಾಯಿಸಿಕೊಂಡು ಹೋಗುವ ಮೂಲಕ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ರಸ್ತೆಯಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ್ದಾರೆ.

.೩೬ ಕಿ.ಮೀ. ಮಾರ್ಗದಲ್ಲಿ ನಾಲ್ಕು ಮೆಟ್ರೋ ನಿಲ್ದಾಣಗಳು ಇವೆ. ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಿಲ್ದಾಣಗಳು. ಡಬಲ್ ಡೆಕ್ಕರ್ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಅವಕಾಶವಿರುವುದಿಲ್ಲ. ಅದೇನಿದ್ದರೂ ಕೆಳಗಿನ ಮಾರ್ಗದಲ್ಲಿ ಸಂಚರಿಸುವವರಿಗೆ ಮಾತ್ರ. ಫ್ಲೆöÊಓವರ್ನಲ್ಲಿ ಮೂರು ಯೂ-ಟರ್ನ್ಗಳಿರುತ್ತವೆ. ಅವು ಕೇವಲ ತುರ್ತು ಅಗತ್ಯಗಳಿಗೆ ಮಾತ್ರ. ಅವುಗಳನ್ನು ಸದ್ಯ ಮುಚ್ಚಲಾಗಿದೆ. ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಎಷ್ಟರ ಮಟ್ಟಿಗೆ ಇರುತ್ತದೆ, ರಾತ್ರಿ ವೇಳೆ ವಾಹನಗಳ ಸಂಚಾರ ಎಷ್ಟಿರುತ್ತದೆ, ಸುರಕ್ಷತೆಗೆ ಕ್ರಮಗಳೇನು ಎಂಬುದನ್ನು ಟ್ರಾಫಿಕ್ ÉÇಲೀಸರು ಅಧ್ಯಯನ ನಡೆಸಿದ್ದಾರೆ. ಸದ್ಯಕ್ಕೆ ಮಾರ್ಗದಲ್ಲಿನ ವೇಗ ಮಿತಿಯನ್ನು  ೪೦ ಕಿ.ಮೀ.ಗೆ ನಿಗದಿ ಮಾಡಲಾಗಿದೆ.

ಇದೆಲ್ಲಕ್ಕೆ ಮಾದರಿಯಾಗಿದ್ದು ನಾಗಪುರದಲ್ಲಿ ನಿರ್ಮಿಸಲಾಗಿರುವ ಡಬ್ಬಲ್ ಡೆಕ್ಕರ್ ರಸ್ತೆ. ಅದನ್ನು ಭಾರತೀಯ ರಾಷ್ಟಿçà ಹೆದ್ದಾರಿ ಪ್ರಾಧಿಕಾರ (ಓಊಂI) ಮತ್ತು ಮಹಾರಾಷ್ಟç ಮೆಟ್ರೊ ರೈಲು ನಿಗಮ (ಒಒಖಅಐ) ಜಂಟಿಯಾಗಿ ಇದನ್ನು ನಿರ್ಮಿಸಿದ್ದು ೨೦೨೨ರ ಅಕ್ಟೋಬರ್ ತಿಂಗಳಲ್ಲಿ ಇದರ ಉದ್ಘಾಟನೆಯಾಗಿದೆ. ನಾಗಪುರದ ವಾರ್ಧಾ ಹೆದ್ದಾರಿಯಲ್ಲಿ ಇದನ್ನು ನಿರ್ಮಿಸಲಾಗಿದ್ದು ಇದನ್ನು ಡಬಲ್ ಡೆಕ್ಕರ್ ವಯಾಡಕ್ಟ್ ಎಂದು ಕರೆಯಲಾಗುತ್ತದೆ. .೧೪ ಕಿ.ಮೀ. ಇದರ ಒಟ್ಟು ಉದ್ದ. ಅತ್ಯಂತ ಉದ್ದದ ಡಬಲ್ ಡೆಕ್ಕರ್ ವಯಾಡಕ್ಟ್ ಎಂಬ ಕಾರಣಕ್ಕೆ ಅದು ಗಿನ್ನೆಸ್ ದಾಖಲೆಗೂ ಪಾತ್ರವಾಗಿದೆ.

ಇದನ್ನು ಗಮನಿಸಿದ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿಯೂ ಇಂತಹ ಮಾದರಿಯನ್ನು ಜಾರಿಗೆ ತರುವ ಸಲುವಾಗಿ ನಾಗಪುರಕ್ಕೆ ಉನ್ನತ ಮಟ್ಟದ ತಂಡವನ್ನು ಕಳಿಸಿ ಅಧ್ಯಯನವನ್ನು ಮಾಡಿದೆ. ಬಿಬಿಎಂಪಿ ಮತ್ತು ಮೆಟ್ರೋ ಅಧಿಕಾರಿಗಳು ಅಧ್ಯಯನವನ್ನು ನಡೆಸಿ ಸರ್ಕಾರಕ್ಕೆ ವಿಸ್ತç ವರದಿಯನ್ನು ಸಲ್ಲಿಸಿತ್ತು. ಬಳಿಕ ಡಿ.ಕೆ.ಶಿವಕುಮಾರ್ ಅವರೂ ನಾಗಪುರಕ್ಕೆ ಭೇಟಿ ನೀಡಿ ಡಬಲ್ ಡೆಕ್ಕರ್ ವಯಾಡಕ್ಟ್ ಪರಿಶೀಲನೆ ನಡೆಸಿದ್ದರು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರು ಬಿಎಂಆರ್ಸಿಎಲ್ ಮುಖ್ಯಸ್ಥರಾಗಿದ್ದ ಕರೋಲಾ ಜೊತೆ ಇದರ ಡಬ್ಬಲ್ ಡೆಕ್ಕರ್ ರಸ್ತೆಯ ರೂಪÀÅರೇಷೆಯನ್ನು ಚರ್ಚಿಸಿದ್ದರು. ಇವೆಲ್ಲ ಪ್ರಯತ್ನದ ಫಲವಾಗಿ ಇಂದು ದಕ್ಷಿಣ ಭಾರತದ ಮೊಟ್ಟ ಮೊದಲ ಡಬಲ್ ಡೆಕ್ಕರ್ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನಾಗಪುರದ ಡಬ್ಬಲ್ ಡೆಕ್ಕರ್ ರಸ್ತೆಗಿಂತ ಹೆಚ್ಚು ಉದ್ದದ ರಸ್ತೆ ಎಂಬ ಕೀರ್ತಿಗೂ ಭಾಜನವಾಗಿರುವುದು ವಿಶೇಷ.

ಈಗಾಗಲೇ ಕಾಮಗಾರಿ ಆರಂಭವಾಗಿರುವ ಮೆಟ್ರೋ ಮಾರ್ಗಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಮೆಟ್ರೋ ಯೋಜನೆಯನ್ನು ರೂಪಿಸುವ ಸಂದರ್ಭದಲ್ಲಿ ಇದೇ ರೀತಿಯ ಡಬ್ಬಲ್ ಡೆಕ್ಕರ್ ರಸ್ತೆ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಮುಂಬರುವ ವರ್ಷಗಳಲ್ಲಿ ನಗರದಲ್ಲಿ ನೂರು ಕಿ.ಮೀ. ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣ ಮಾಡಬೇಕು ಎಂಬುದು ಸರ್ಕಾರದ ಯೋಜನೆ. ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂ ಚರ್ಚೆ ಮಾಡಿದ್ದೇನೆ ಎಂದು ಬೆಂಗಳೂರು ನಗರದ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾದ ಚಿಂತನೆಯನ್ನು ಹೊಂದಿರುವ ಡಿ.ಕೆ.ಶಿವಕುಮಾರ್ ಅವರು ವಿವರಿಸಿದ್ದಾರೆ.

ಬೆಂಗಳೂರನ್ನು ಇನ್ನೊಂದು ಸಿಂಗಾಪುರವನ್ನಾಗಿ ಮಾಡಬೇಕು ಎಂಬುದು ಹಳೆಯ ಘೋಷಣೆ. ಅಂತಹ ಘೋಷಣೆ ಹೊರಬಿದ್ದು ಅನೇಕ ವರ್ಷಗಳು ಸರಿದು ಹೋಗಿವೆ. ಸರ್ಕಾರಗಳೂ ಬದಲಾಗಿವೆ, ಒಂದು ಕೈಯಿಂದ ಇನ್ನೊಂದಕ್ಕೆ ಅಧಿಕಾರವೂ ಬದಲಾಗಿದೆ. ಹೊಸ ಚಿಂತನೆಯ ಸರ್ಕಾರ, ಮಂತ್ರಿಗಳು, ಅಧಿಕಾರಿಗಳು ಬಂದಿದ್ದಾರೆ. ಬೆಂಗಳೂರು ಕೂಡ ನಾಲ್ಕೂ ದಿಕ್ಕಿನಲ್ಲಿ ಬೆಳೆಯುತ್ತ ಸಾಗಿದೆ. ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ರೂಪಿಸಿರುವುದುಬ್ರಾಂಡ್ ಬೆಂಗಳೂರು ಪರಿಕಲ್ಪನೆ. ಇಲ್ಲಿನ ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಮತ್ತು ನಗರದ ಪ್ಲಾನಿಂಗ್ನಲ್ಲಿ ಅಂತಾರಾಷ್ಟಿçà ಗುಣಮಟ್ಟ ಅಳವಡಿಸಿಕೊಳ್ಳಬೇಕು ಎಂಬುದು ಇದರ ಹಿಂದಿನ ಉದ್ದೇಶ. ಜೊತೆಗೆಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಇದರ ಹಿಂದಿನ ಜೀವದ್ರವ್ಯ. ಅದು ಸಾಧ್ಯವಾದಾಗ ಎಲ್ಲ ಅಭಿವೃದ್ಧಿಯೂ, ನಗರದ ಬೆಳವಣಿಗೆಯೂ ಸಹನೀಯವಾಗುತ್ತದೆ, ಜನಮುಖಿಯೂ ಆಗುತ್ತದೆ. ಇಂತಹ ಹೊತ್ತಿನಲ್ಲಿ ಬೆಂಗಳೂರು ನಗರಾಭಿವೃದ್ಧಿಯ ಹೊಣೆ ಹೊತ್ತಿರುವ ಡಿ.ಕೆ.ಶಿವಕುಮಾರ್ ಅದರ ಆಳ-ಅಗಲದ ಅರಿವಿದೆ. ಅದಕ್ಕೆ ತಕ್ಕ ಮೈಲಿಗಲ್ಲಿನಂತಿರುವುದು ಡಬ್ಬಲ್ ಡೆಕ್ಕರ್ ರಸ್ತೆ.

   ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ಇರುವ ಡಬ್ಬಲ್ ಡೆಕ್ಕರ್ ರಸ್ತೆಯ ಅಂತರ .೩೬ ಕಿ.ಮೀ.

 ಇದಕ್ಕೆ ತಗಲಿರುವ ವೆಚ್ಚ ಸುಮಾರು ೪೪೯ ಕೋಟಿ ರೂ. ಬಿಬಿಎಂಪಿ ಮತ್ತು ಬಿಎಂಆರ್ಸಿಎಲ್ ಜಂಟಿಯಾಗಿ ವೆಚ್ಚವನ್ನು ಭರಿಸಿದೆ.

RAMP . .೧೦ ಕಿ.ಮೀ., ್ಯಾಂಪ್ ಬಿ ೨೫೦ ಮೀಟರ್RAMP ಸಿ. ೪೯೦ ಮೀ., RAMP ಸಿ. .೧೪ ಕಿ.ಮೀ.

    ಡಬ್ಬಲ್ ಡೆಕ್ಕರ್ ರಸ್ತೆಯಲ್ಲಿ ಸಿಗ್ನಲ್ಗಾಗಿ ಕಾಯುವ ಪ್ರಮೇಯವೂ ಇಲ್ಲ.

    ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಲೂಪ್ ಮತ್ತು ಇಳಿಜಾರಿನ ಮೂಲಕ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.

    ಇದೇ ಮಾರ್ಗದ ಜಯದೇವ ಮೆಟ್ರೋ ನಿಲ್ದಾಣ ಐಕಾನಿಕ್ ಇಂಟರ್ಚೇAಜ್ ನಿಲ್ದಾಣವಾಗಲಿದೆ. ರೋಡ್ ಅಂಡರ್ಪಾಸ್, ರೋಡ್ ಫ್ಲೆöÊಓವರ್, ರಸ್ತೆ, ಹಳದಿ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್, ಕಾನ್ಕಾರ್ಸ್ ಮತ್ತು ಗುಲಾಬಿ ಮಾರ್ಗದ ಪ್ಲಾಟ್ಫಾರ್ಮ್ ಇರುವುದು ಇದರ ವಿಶೇಷ.

    ರಸ್ತೆಯಲ್ಲಿ ಮುಂದೆ ಸಾಗಿ ಎಡಕ್ಕೆ ತಿರುಗಿದರೆ ಎಚ್.ಎಸ್.ಆರ್., ಕೊರಮಂಗಲಕ್ಕೆ ತೆರಳಬಹುದು, ನೇರವಾಗಿ ಕ್ರಮಿಸಿದರೆ ಬೊಮ್ಮನಹಳ್ಳಿ-ಕೂಡ್ಲುಗೇಟ್ಗೆ ಹೋಗಬಹುದು.

 ಸುರಂಗ ಮಾರ್ಗದಲ್ಲೂ ಡಬ್ಬಲ್ ಡೆಕ್ಕರ್!

ಇಂತಹುದೊAದು ಡಬ್ಬಲ್ ಡೆಕ್ಕರ್ ರಸ್ತೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿದೆ. ಇದೇ ಮಾದರಿಯಲ್ಲಿ ಇನ್ನಷ್ಟು ರಸ್ತೆಗಳನ್ನು ನಿರ್ಮಾಣ ಮಾಡುವ ಚಿಂತನೆಯ ಜೊತೆಗೆ ಟನೆಲ್ ಮಾರ್ಗದಲ್ಲಿಯೂ ಮಾದರಿಯನ್ನು ಅನುಸರಿಸಲು ಸಾಧ್ಯವೇ ಎಂದು ಅಧಿಕಾರಿಗಳು ಯೋಚಿಸಿದ್ದಾರೆ.

ಅಂದರೆ ಹೆಬ್ಬಾಳ ಮತ್ತು ಅರಮನೆ ಮೈದಾನದ ನಡುವೆ (ಮೇಖ್ರಿ ಸರ್ಕಲ್) ಸುರಂಗ ಮಾರ್ಗವನ್ನು ನಿರ್ಮಿಸಲು ಈಗಾಗಲೇ ಬಿಬಿಎಂಪಿ ಉದ್ದೇಶಿಸಿದೆ. ಇಲ್ಲಿಯೂ ಡಬ್ಬಲ್ ಡೆಕ್ಕರ್ ರಸ್ತೆ ನಿರ್ಮಿಸಿದರೆ ಹೇಗೆ ಎಂಬುದು ಯೋಚನೆ.  ಇದರ ಅಂತರ ಸುಮಾರು ಮೂರು ಕಿ.ಮೀ. ಇಲ್ಲಿನ ಟನಲ್ ರಸ್ತೆಗೆ ಬಹುರಾಷ್ಟಿçà ಸಂಸ್ಥೆ ಅಲ್ಟಿನೋಕ್ ಕನ್ಸಲ್ಟಿಂಗ್ ಎಂಜಿನಿಯರಿAಗ್ ವಿನ್ಯಾಸವನ್ನು ರೂಪಿಸಿ ಬಿಬಿಎಂಪಿಗೆ ಡಿಪಿಆರ್ನ್ನು ಸಲ್ಲಿಸಿದ್ದಾಗಿದೆ.

ಟನಲ್ ರಸ್ತೆಯ ಕೆಳಸ್ಥರದಲ್ಲಿ ಮೂರು ಮಾರ್ಗಗಳಿದ್ದರೆ ಮೇಲ್ಸ್ಥರದಲ್ಲಿ ಎರಡು ಮಾರ್ಗಗಳಿರುತ್ತವೆ. ಇಂತಹ ಮಾರ್ಗಗಳನ್ನು ಜಾರಿಗೆ ತಂದರೆ ಮರಗಳನ್ನು ಕಡಿದು ಉರುಳಿಸುವ ಪ್ರಮೇಯ ಉದ್ಭವಿಸುವುದಿಲ್ಲ. ಖರ್ಚೂ ಕೂಡ ಕಡಿಮೆ. ಭವಿಷ್ಯದ ದೃಷ್ಟಿಯಿಂದ ಇದು ಹೆಚ್ಚು ಉಪಯುಕ್ತ ಎನ್ನುತ್ತಾರೆ ಅಧಿಕಾರಿಗಳು. ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿದೆ.

ವಿದೇಶಗಳಲ್ಲಿ ಇಂತಹ ಡಬಲ್ ಡೆಕ್ಕರ್ ಟನಲ್ ರಸ್ತೆಗಳು ಜಾರಿಗೆ ಬಂದಿವೆ. ಬೆಂಗಳೂರಿನಲ್ಲಿಯೂ ಇದು ಸಾಧ್ಯವಾದರೆ ಭಾರತದಲ್ಲಿಯೇ ಪ್ರಥಮವನ್ನು ಸಾಧಿಸಿದ ಹೆಗ್ಗಳಿಕೆ ನಮ್ಮದಾಗಲಿದೆ ಎಂಬುದು ನಿಶ್ಚಿತ.

 ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ .೩೬ ಕಿ.ಮೀ. ಉದ್ದದ ಡಬ್ಬಲ್ ಡೆಕ್ಕರ್ ರಸ್ತೆಗೆ ೪೫೦ ಕೋಟಿ ರೂ. ವೆಚ್ಚವಾಗಿದೆ. ಇದರ ಗುಣಮಟ್ಟ ವಿಶ್ವದರ್ಜೆಯದ್ದು. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ರಸ್ತೆಗಳನ್ನು ನಿರ್ಮಿಸುವ ಯೋಜನೆ ನಮ್ಮ ಮುಂದೆ ಇದೆ.”

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ


ಡಬ್ಬಲ್ ಡೆಕ್ಕರ್ ಸಾಧ್ಯತೆ ಇರುವ ನಾಲ್ಕು ಕಾರಿಡಾರ್ಗಳು

ಮುಂದಿನ ಎರಡು ಹಂತಗಳಲ್ಲಿ ನಾಲ್ಕು ಕಾರಿಡಾರ್ಗಳ ಉದ್ದಕ್ಕೆ ಮೆಟ್ರೋ ಮತ್ತು ಫ್ಲೆöÊಓವರ್ಗಳನ್ನು ನಿರ್ಮಾಣ ಮಾಡುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾಪÉÇÃðರೇಶನ್ ಲಿ. (ಬಿಎಂಆರ್ಸಿಎಲ್) ಅಧ್ಯಯನವನ್ನು ನಡೆಸುತ್ತಿದೆ. ನಾಲ್ಕು ಕಾರಿಡಾರ್ಗಳೆಂದರೆ:

    ಜೆಪಿ ನಗರ ನಾಲ್ಕನೇ ಹಂತದಿA ಹೆಬ್ಬಾಳ ವರೆಗಿನ ಕಾರಿಡಾರ್- (೨೯. ಕಿ.ಮೀ.)

    ಹೊಸಹಳ್ಳಿಯಿಂದ ಕಡಬಗೆರೆ ವರೆಗಿನ ಕಾರಿಡಾರ್- (೧೧.೪೫ ಕಿ.ಮೀ.)

    ಸರ್ಜಾಪುರದಿಂದ ಇಬ್ಬಲೂರು ವರೆಗಿನ ಕಾರಿಡಾರ್- (೧೪ ಕಿ.ಮೀ)

    ಅಗರದಿಂದ ಕೋರಮಂಗಲ ಮೂರನೇ ಬ್ಲಾಕ್ ವರೆಗಿನ ಕಾರಿಡಾರ್- (.೪೫ ಕಿ.ಮೀ.)

ಕೋಟ್ಸ್:

ಜಯನಗರ ಒಂಭತ್ತನೇ ಬ್ಲಾಕ್ನಲ್ಲಿ ನಮ್ಮದು ಮಳಿಗೆ ಇದೆ. ರಾತ್ರಿ ಅಂಗಡಿ ಕ್ಲೋಸ್ ಮಾಡಿ ವರ್ತೂರಿನಲ್ಲಿರುವ ಮನೆಗೆ ಹೋಗುತ್ತೇವೆ. ಪ್ರತಿ ದಿನ ರಾತ್ರಿ ಮನೆಗೆ ಹೋಗಿ ತಲುಪುವ ತನಕ ನಮಗೆ ಆತಂಕ. ಈಗ ಡಬ್ಬಲ್ ಡೆಕ್ಕರ್ ರಸ್ತೆ ಮಾಡಿರುವುದರಿಂದ ಬಹಳ ದೊಡ್ಡ ರಿಲೀಫ್ ಆಗಿದೆ. ಟ್ರಾಫಿಕ್ ಜಂಜಾಟವಿಲ್ಲದೆ, ಯಾವ ಟೆನ್ಷನ್ ಇಲ್ಲದೆ ಆರಾಮವಾಗಿ ಮನೆಗೆ ತಲುಪಬಹುದು.”

-ಷಣ್ಮುಗಪ್ಪ ಮತ್ತು ನಳಿನಾ, ದಂಪತಿ

 

ರಾಗಿಗುಡ್ಡದಿಂದ ಬೊಮ್ಮನಹಳ್ಳಿ-ಕೂಡ್ಲುಗೇಟ್ ಕಡೆಗೆ ಹೋಗಲು ಕನಿಷ್ಠ ಇಪ್ಪತ್ತರಿಂದ ೨೫ ನಿಮಿಷ ಬೇಕಾಗುತ್ತಿತ್ತು. ಈಗ ಡಬ್ಬಲ್ ಡೆಕ್ಕರ್ ರಸ್ತೆಯಲ್ಲಿ ಕೇವಲ ೪೦ ಕಿ.ಮೀ. ಸ್ಪೀಡ್ನಲ್ಲಿ ಪ್ರಯಾಣ ಮಾಡಿ ಐದೇ ನಿಮಿಷದಲ್ಲಿ ನಾಲ್ಕು ಕಿ.ಮೀ. ಕ್ರಮಿಸಿದ್ದೇವೆ. ರಸ್ತೆ ಮಾಡಿರುವ ಸರ್ಕಾರಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.

-ಕೆ.ಸುಮಂತ್ ಗೌಡ, ಸಾಫ್ಟ್ವೇರ್ ಎಂಜಿನಿಯರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ