ಪೋಸ್ಟ್‌ಗಳು

ಅಕ್ಟೋಬರ್ 30, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹರಳುಗಟ್ಟಿದ ನೀಲಾಕಾಶ

ಇಮೇಜ್
ಬೆಳಕಿನ ಬಳ್ಳಿಯ ಹಿಡಿದು ಜಂಬ ಪಡುವ ಶಂಖಪುಷ್ಪದ ಹೂವು ಕತ್ತಲ ಕಿಬ್ಬೊಟ್ಟೆಯೊಳಗೆ ಕರಗುವ ಬಣ್ಣಗಳಿಗೆ ಜೀವ ತುಂಬಲಾಗದೆ ಚಿಪ್ಪಿನೊಳಗೆ ನೆರಿಗೆಯಾಗುತ್ತದೆ ಹೊಸ ಮೊಳಕೆಗೆ ಶಾಖವಾಗುತ್ತದೆ ಇಲ್ಲೇ ತೀರದಲ್ಲಿ ಮನೆ ಇವಳದು ಕಡಲ ಗರ್ಭದಿಂದ ಉಕ್ಕಿ ಬಂದ ಅಲೆಗಳ ಸದ್ದಿಗೆ ಬಹು ಬಿನ್ನಾಣಗಿತ್ತಿಯ ಬೈಗಿಗೆ ಕಾವಳದ ಹಂಗಿಗೆ ಬಯಕೆಯು ಬೆಂಕಿಯಾಗಿ ಮತ್ತೆ ಬಸಿರಾಗುತ್ತಾಳೆ ನಾಳೆ ಮತ್ತೊಂದು ಬೆಳಗು ಮೊಳಕೆಯೊಡೆದರೆ ಅದರೊಳಗೊಂದು ಬೆರಗು ನೀಲಾಕಾಶವೇ ಹರಳುಗಟ್ಟಿ ಕಾಂಬ ಕಣ್ಣಿಗೆ ಈಕಿ ಜಂಬದ ಹೂವು...!