ಗುರುಗೆ ಅಮ್ಮನೇ ಲಾಸ್ಟ್ ವರ್ಡ್...
(ವಿ.ಕೆ.ಮೂರ್ತಿ ಸಂದರ್ಶನದ ಕೊನೆಯ ಕಂತು)
ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಬೇಕು ಎಂಬ ಮಹದಾಸೆ ನನಗಿತ್ತು. ಆದರೆ ಯಾವ ನಿರ್ದೇಶಕರೂ ಆಸಕ್ತಿ ವಹಿಸಲಿಲ್ಲ. ಕೊನೆಯಲ್ಲಿ ನನಗೊಂದು ಪಾತ್ರ ಅಂತ ಕೊಟ್ಟವರು ರಾಜೇಂದ್ರ ಸಿಂಗ್ ಬಾಬು ಅವರು. ಅವರ 'ಹೂವು ಹಣ್ಣು' ಚಿತ್ರದಲ್ಲಿ ಅಭಿನಯ ಮಾಡಿದೆ. ಅದನ್ನು ಬಿಟ್ಟರೆ ಬೇರೆ ಯಾರೂ ನನ್ನನ್ನು ಕರೆಯಲಿಲ್ಲ. ನನ್ನ ಸಂದರ್ಶನಕ್ಕೆ ಬಂದ ಅನೇಕರು ಇಂತಹ ಪ್ರಶ್ನೆಗಳನ್ನೇ ಕೇಳಿದ್ದಾರೆ. ನೀವು ಈ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿ ಅಂತ ಹೇಳುತ್ತಿದ್ದೆ. ನೀವೆ ಒಂದು ಸಿನೆಮಾ ನಿರ್ದೇಶನ ಮಾಡಿ ಎಂದು ಕೆಲವರು ನನಗೆ ಆಫರ್ ಕೊಟ್ಟಿದ್ದಿದೆ. ಆದರೆ, ನಾನು ಆ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ.
ಕ್ಯಾಮರಾಮನ್ ಹೆಚ್ಚು ಕ್ರಿಯೇಟಿವ್...
ಒಂದು ವಿಷಯ ನಿಮಗೆ ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ಒಬ್ಬ ನಿರ್ದೇಶಕನಿಗಿಂತ ಒಬ್ಬ ಕ್ಯಾಮೆರಾಮನ್ ಹೆಚ್ಚು ಕ್ರಿಯೇಟಿವ್ ಆಗಿರುತ್ತಾನೆ. ಆತ ಶೂಟಿಂಗ್ ಮಾಡುವಾಗ ಅತ್ಯಂತ ಡೆಡಿಕೇಟ್ ಆಗಿ, ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ 9.30ಕ್ಕೆ ಸ್ಟುಡಿಯೋಗೆ ಶೂಟಿಂಗ್ ಮಾಡೋಕೆ ಅಂತ ಎಂಟರ್ ಆದ್ರೆ ಸಂಜೆ 6.30 ತನಕ ಅವನ ಮನಸ್ಸು, ದೇಹ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಒಂದು ನಿಮಿಷವೂ ಪುರುಸೊತ್ತು ಇರುವುದಿಲ್ಲ. ಮೋಸ್ಟ್ ಹಾರ್ಡ್ ವರ್ಕಿಂಗ್ ಪರ್ಸನ್ ಅಂದ್ರೆ ಕ್ಯಾಮರಾಮನ್. ಇದೆಲ್ಲರ ಜೊತೆಗೆ ಕ್ಯಾಮರಾಮನ್ ಒಂದು ಸನ್ನಿವೇಶದ ಬಗೆಗಿನ ನಿರ್ಧಾರವನ್ನು...