ಕದ ತೆರೆದ ಆಕಾಶ -ಎರಡು ಪ್ರಮುಖ ವಿಮರ್ಶೆಗಳು...

ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾದ ನನ್ನ ಕಥಾ ಸಂಕಲನ "ಕದ ತೆರೆದ ಆಕಾಶ" ಕೃತಿಯ ಬಗ್ಗೆ ಪತ್ರಕರ್ತ ಹಾಗೂ ಕಥೆಗಾರರೂ ಆದ ಡಾ. ಜಗದೀಶ್ ಕೊಪ್ಪ ಮತ್ತು ಡಾ.ವೆಂಕಟರಮಣ ಗೌಡ ಅವರು ಬರೆದಿರುವ ಎರಡು ಪ್ರಮುಖ ವಿಮರ್ಶೆಗಳು ಇಲ್ಲಿವೆ..... ಮಂಜುನಾಥ್ ಚಾಂದ್ ರವರ ಚಂದನೆಯ ಕಥೆಗಳು.... -ಡಾ.ಜಗದೀಶ್ ಕೊಪ್ಪ, ಹುಬ್ಬಳ್ಳಿ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಗೂ ಕಥೆಗಾರ ಮಂಜುನಾಥ್ ಚಾಂದ್ ರವರ ಪ್ರಥಮ ಕಥಾ ಸಂಕಲನವಾದ “ ಕದ ತೆರೆದ ಆಕಾಶ ” ಕೃತಿಯು ಹಲವು ಕಾರಣಕ್ಕಾಗಿ ವಿಶಿಷ್ಟ ಕಥಾ ಸಂಕಲನವಾಗಿದೆ . ಕುದುರೆಗಿಂತ ಅದರ ಲದ್ದಿ ಬಿರುಸು ಎನ್ನುವ ಗಾದೆಯಂತೆ ಇವೊತ್ತಿನ ಪತ್ರಿಕೋದ್ಯಮದಲ್ಲಿ ಸುದ್ದಿಗಿಂತ ಸದ್ದು ಮಾಡಿದ ಮತ್ತು ಮಾಡುತ್ತಿರುವ ಪತ್ರಕರ್ತರೆ ಹೆಚ್ಚು . ಆದರೆ , ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಚಾಂದ್...