‘ಜಂಟಲ್ಮನ್’ ರಾಜಕಾರಣಿ, ಆಕರ್ಷಕ ವ್ಯಕ್ತಿತ್ವದ -ಕೃಷ್ಣ ನಿರ್ಗಮನ

 -ಮಂಜುನಾಥ್ ಚಾಂದ್


ಕರ್ನಾಟಕದ ರಾಜಕೀಯ ಕ್ಷಿತಿಜದಿಂದಜಂಟಲ್ಮನ್ ರಾಜಕಾರಣಿಯೊಬ್ಬರು ಮರೆಯಾಗಿದ್ದಾರೆ. ರಾಜಕಾರಣಿ ಎಂದರೆ ಅವರಿಗೊಂದು ಹಣೆಪಟ್ಟಿ ಹಚ್ಚುವ, ಮೂಗುಮುರಿದು ದೂರ ಸರಿಯುವ, ಅನುಮಾನದ ಕಣ್ಣಿನಿಂದಲೇ ನೋಡುವ, ಕಟಕಿಯಾಡುವ ಕಾಲದಲ್ಲಿ ರಾಜಕಾರಣವನ್ನು, ಅಧಿಕಾರವನ್ನು ಅತ್ಯಂತ ಗೌರವ ಮೂಡಿಸುವ ರೀತಿಯಲ್ಲಿ, ಡಿಮ್ಲಾಮೆಟಿಕ್ ಆಗಿ ನಿಭಾಯಿಸಿದ ಒಬ್ಬ ಮುತ್ಸದ್ಧಿ ಇದ್ದರೆ ಅದು ಎಸ್.ಎಂ.ಕೃಷ್ಣ.

ಅವರು ಯಾವತ್ತೂ ಸಂಯಮ ಮೀರಿ ನಡೆದವರಲ್ಲ, ಯಾವ ಅಬದ್ಧ ಮಾತೂ ಅವರ ಮತಿಯ ಮಂಟಪವನ್ನು ದಾಟಿ ಹೊರಬಂದ ಉದಾಹರಣೆಯಿಲ್ಲ. ರಾಜಕೀಯದಲ್ಲಿ ಎಂತಹ ವಿರೋಧಿಗಳಿದ್ದರೂ ಹದ್ದುಮೀರಿ ವರ್ತಿಸಿದವರಲ್ಲ. ಮೌನದ ಮೂಲಕವೇ ಅವರನ್ನು ಕಟ್ಟಿಹಾಕಿದವರು. ಎಂದೆAದಿಗೂ ಕೆಟ್ಟ ಭಾಷೆ ಬಳಸಿದವರಲ್ಲ. ಸೇಡಿನ ರಾಜಕಾರಣ ಅವರ ಪಟ್ಟಿಯಲ್ಲೇ ಇರಲಿಲ್ಲ. ತಮ್ಮ ಪ್ರಬುದ್ಧ ಮಾತು, ನಡೆ, ಎದುರಿದ್ದವರನ್ನೂ ಗೌರವಿಸುವ ಹೆಚ್ಚುಗಾರಿಕೆಯ ಮೂಲಕ ಎಸ್.ಎಂ.ಕೃಷ್ಣ ಅವರು ಸಾರ್ವಜನಿಕ ಬದುಕಿಗೆ ಹೊಸ ಭಾಷ್ಯವನ್ನು ಬರೆದವರು. ಐವತ್ತೊಂದು ವರ್ಷಗಳಷ್ಟು ಸುದೀರ್ಘ ಕಾಲ ಸಾರ್ವಜನಿಕ ಬದುಕಿನ ಎಲ್ಲ ಮಜಲುಗಳನ್ನು ನೋಡಿದ ಅವರನ್ನು ಒಬ್ಬರಾಜಕಾರಣಿ ಎಂದು ಕರೆಯಲಾಗದ ರೀತಿಯಲ್ಲಿ ಎಲ್ಲವನ್ನೂ ನಿಭಾಯಿಸಿದರು.

ರಾಜಕಾರಣವೆಂದರೆ ಕೇವಲರಾಜಕೀಯ ಮಾಡುವುದಲ್ಲ, ಎದುರು ಪಾಳಯವನ್ನು ಮೀರಿ, ಮೇಲುಗೈ ಸಾಧಿಸಿ, ಪೈಪೋಟಿ ನಡೆಸಿ ಕಾರ್ಯ ಸಾಧಿಸುವುದಲ್ಲ ಎಂಬುದನ್ನು ಪ್ರತಿ ಹಂತದಲ್ಲಿಯೂ ಸಾಬೀತುಪಡಿಸಿದವರು ಎಸ್ಎಂಕೆ. ಪ್ರೌಢಿಮೆ, ವಿದ್ವತ್ತು, ಅನುಭವಕ್ಕೆ ಎರಕ ಹೊಯ್ದಂತೆ ಅವರ ಸಂಯಮ ಮತ್ತು ಒಟ್ಟು ನಡವಳಿಕೆಯಿತ್ತು. ಸ್ಥಳೀಯ ರಾಜಕೀಯದಿಂದ ಆರಂಭಿಸಿ ಅಂತಾರಾಷ್ಟಿçà ವೇದಿಕೆಗಳ ತನಕ ಅದನ್ನು ಅವರು ಪದೇ ಪದೇ ತೋರಿಸಿಕೊಟ್ಟವರು. ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡಿದಾಗಲೂ ಇಡೀ ಜಗತ್ತಿನ ವಿದ್ಯಮಾನಗಳನ್ನು ಅತ್ಯಂತ ಕರಾರುವಕ್ಕಾಗಿ ಮಂಡಿಸಿದವರು. ನಮ್ಮ ಭಾರತದ ಚಿತ್ರಣವನ್ನು ಜಗತ್ತಿನ ಮುಂದೆ ಬಿಂಬಿಸುವಾಗಲೂ ಅಷ್ಟೇ ಸ್ಪಷ್ಟತೆ ಅವರಲ್ಲಿತ್ತು. ರಾಜಕಾರಣದಲ್ಲಿ, ಆಡಳಿತದಲ್ಲಿ ಕೃಷ್ಣ ಅವರು ಹಾಕಿಕೊಟ್ಟ ಪರಂಪರೆ ನಿಜಕ್ಕೂ ಅನುಕರಣೀಯ. ಅದು ಮುಂಬರುವ ಪೀಳಿಗೆಗೆ ಮಾದರಿ ಎಂದರೆ ತಪ್ಪಲ್ಲ.

ಎಸ್.ಎಂ.ಕೃಷ್ಣ ಅವರು ಅಮೆರಿಕದಲ್ಲಿ ಉನ್ನತ ಮಟ್ಟದ ಕಾನೂನು ವಿದ್ಯಾಭ್ಯಾಸವನ್ನು ಮುಗಿಸಿ ಬಂದ ಸಂದರ್ಭ. ಅಂದರೆ ಅದು ೧೯೬೨ರ ಅವಧಿ. ಆಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆದಿದ್ದವು. ಅಮೆರಿಕದಿಂದ ಉನ್ನತ ಶಿಕ್ಷಣ ಪಡೆದು ಶೂಟು-ಬೂಟು ಧರಿಸಿ ಊರಿಗೆ ಬಂದ ಯುವಕನ ಮೇಲೆ ಎಲ್ಲರ ಗಮನ ಬೀಳುತ್ತದೆ. ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂಬ ಒತ್ತಡ ಶುರುವಾಗುತ್ತದೆ. ಮತ್ತೆ ಅಮೆರಿಕಕ್ಕೆ ಮರಳಿ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಡಾಕ್ಟರೇಟ್ ತರಗತಿಗಳಿಗೆ ಹಾಜರಾಗುವ ಉದ್ದೇಶದೊಂದಿಗೆ ಬಂದಿದ್ದ ಕೃಷ್ಣ ಅವರು ಇದಕ್ಕೆ ಸುತಾರಾಂ ಒಪ್ಪುವುದಿಲ್ಲ. ಅದಕ್ಕೆ ಕಾರಣವೂ ಇತ್ತು, ಕಾಲದಲ್ಲಿ ಮದ್ದೂರು ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿಯಾಗಿದ್ದವರು ಎಚ್.ಕೆ.ವೀರಣ್ಣ ಗೌಡರು. ಅವರು ನಿಜಲಿಂಗಪ್ಪ ಸರ್ಕಾರದಲ್ಲಿ ಮಂತ್ರಿ ಕೂಡ ಆಗಿದ್ದರು. ಸ್ವಾತಂತ್ರö್ಯ ಹೋರಾಟಗಾರರು ಎಂಬ ಹೆಗ್ಗಳಿಕೆ. ಅಪಾರವಾದ ಜನಬಳಗವನ್ನು ಅವರು ಹೊಂದಿದ್ದರು. ಹೇಳಿಕೇಳಿ ಅಂತಹ ದಿಗ್ಗಜರ ವಿರುದ್ಧ ಕಣಕ್ಕಿಳಿಯುವುದುಂಟೆ ಎಂದು ಕೃಷ್ಣ ಹಿಂಜರಿಯುತ್ತಾರೆ. ಆದರೆ ಅವರು ಚುನಾವಣೆಗೆ ನಿಲ್ಲುವುದು ಅನಿವಾರ್ಯವೇ ಆಗುತ್ತದೆ. ಮದ್ದೂರಿನ ಯುವಜನತೆ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರೇ ಮದ್ದೂರಿಗೆ ಬಂದು ಕೃಷ್ಣ ವಿರುದ್ಧ ಪ್ರಚಾರ ಮಾಡುತ್ತಾರೆ. ಅಚ್ಚರಿ ಎನ್ನುವಂತೆ ಕೃಷ್ಣ ಅವರು ಗೆದ್ದೇಬಿಡುತ್ತಾರೆ. ಹೀಗೆ ದಿಗ್ಗಜರನ್ನು ಮಣಿಸಿ ಅವರು ಶಾಸನಸಭೆಯನ್ನು ಪ್ರವೇಶ ಮಾಡುತ್ತಾರೆ.

ಅಲ್ಲಿಂದ ಮುಂದಿನದೆಲ್ಲ ಇತಿಹಾಸ. ಅವರು ಅಂದು ಮತ್ತೆ ಜಾರ್ಜ್ ವಾಷಿಂಗ್ಟನ್ ವಿವಿಗೆ ಮರಳದೇ ಇದ್ದುದು ನಾಡಿನ ಭಾಗ್ಯವೇ ಆಯಿತು. ಮೂಲಕ ನಾಡಿಗೆ ಒಬ್ಬ ಸಜ್ಜನ ರಾಜಕಾರಣಿ, ಉತ್ತಮ ಆಡಳಿತಗಾರ, ಎಲ್ಲಕ್ಕಿಂತ ಮುಖ್ಯವಾಗಿಅತ್ಯುತ್ತಮ ಸ್ಟೇಟ್ಸ್ಮನ್ ದಕ್ಕಿದಂತಾಯಿತು. ಕೃಷ್ಣ ಅವರು ರಾಜಕೀಯಕ್ಕೆ ಬರುವ ಹೊತ್ತಿಗೆ ಅವರಿಗೆ ಏರು ಯೌವನ. ಅಷ್ಟರಲ್ಲಾಗಲೇ ಅವರು ಕಾನೂನಿನ ಉನ್ನತ ವ್ಯಾಸಂಗ ಮಾಡಿದ್ದರು. ಅಮೆರಿಕದ ಅಧ್ಯಕ್ಷ ಜಾನ್.ಎಫ್.ಕೆನಡಿ ಅವರ ಅಧ್ಯಕ್ಷೀಯ ಚುನಾವಣೆಯನ್ನು ತೀರಾ ಹತ್ತಿರದಿಂದ ಕಂಡಿದ್ದರು. ವಿದ್ವತ್ತೂ ಇತ್ತು. ಅನುಭವವೂ ಇತ್ತು. ಅದಕ್ಕೆ ತಕ್ಕಂತೆ ಪ್ರಭುದ್ಧತೆಯೂ ಇತ್ತು. ಹಾಗಾಗಿ ಅವರ ರಾಜಕೀಯದ ಪ್ರತಿ ಹೆಜ್ಜೆಯೂ ಗಟ್ಟಿತನದಿಂದ ಕೂಡಿತ್ತು.

ತಮ್ಮ ಮೂವತ್ತನೇ ವಯಸ್ಸಿಗೇ ರಾಜಕಾರಣದ ಆಖಾಡವನ್ನು ಹೊಕ್ಕಿದ್ದರಿಂದ ಒಂದೊAದೇ ಮೆಟ್ಟಿಲನ್ನು ಏರುತ್ತ ಉನ್ನತ ಹುದ್ದೆಗಳಲ್ಲಿ ವೀರಾಜಮಾನರಾಗಲು ಸಾಧ್ಯವಾಯಿತು. ಅವರು ಮಂತ್ರಿಯಾದರು, ಸಂಸದರಾದರು, ಕೇಂದ್ರ ಸಂಪುಟವನ್ನು ಸೇರಿದರು, ಒಂದು ರಾಷ್ಟಿçà ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ ಹುದ್ದೆಗಳನ್ನು ಅಲಂಕರಿಸಿದರು. ೧೯೬೧ರಲ್ಲಿ ಕೆನಡಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೃಷ್ಣ ಅವರು ೪೮ ವರ್ಷಗಳ ಬಳಿಕ (೨೦೦೯ರಲ್ಲಿ) ದೇಶದ ವಿದೇಶಾಂಗ ಸಚಿವರಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಶ್ವೇತಭವನದಲ್ಲಿಯೇ ಭೇಟಿ ಮಾಡಿದ್ದು ವಿಶೇಷ. ಅವರು ಏರಿದ ಎತ್ತರಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇಕಿಲ್ಲ ಅನಿಸುತ್ತದೆ.

ವರನಟ ಡಾ.ರಾಜ್ಕುಮಾರ್ ಅಪಹರಣ, ಭೀಕರ ಬರಗಾಲ, ಕಾವೇರಿ ನದಿ ನೀರಿನ ತಂಟೆ, ವಿಠಲೇನಹಳ್ಳಿ ಗೋಲಿಬಾರ್, ತೆಂಗು ಬೆಳೆಗಾರರ ನೀರಾ ಹೋರಾಟ, ಕಂಬಾಲಪಲ್ಲಿ ದಲಿತರ ಸಜೀವ ದಹನ, ಜನತಾದಳ ನಾಯಕ ನಾಗಪ್ಪ ಅಪಹರಣ, ಕರೀಂಲಾಲ್ ತೆಲಗಿಯ ಛಾಪಾ ಕಾಗದ ಹಗರಣ... ಇವು ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಎದುರಿಸಿದ ಸವಾಲುಗಳ ಸಾಲು ಸಾಲು. ಸಂಕಷ್ಟಗಳ ಸಾಲಿನಲ್ಲಿ ಯಾರಾದರೂ ಕಂಗೆಟ್ಟು ಹೋಗುವ ಕಾಲಘಟ್ಟವದು. ಹಾಗಿದ್ದೂ ಅವರು ದೃತಿಗೆಡಲಿಲ್ಲ, ಸಿಟ್ಟು ಸೆಡವು ತೋರಿಸಲಿಲ್ಲ, ಸಂಯಮ ಮೀರಿ ಮಾತನಾಡಲಿಲ್ಲ. ಅಷ್ಟೂ ಸವಾಲುಗಳನ್ನು ಎದುರಿಸಿ ಆಡಳಿತಯಂತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದು ಮಾತ್ರವಲ್ಲದೆ ಅನೇಕ ಜನಪರ ಕಾರ್ಯಗಳನ್ನು ಜಾರಿಗೆ ತಂದರು.

ಬರಗಾಲವನ್ನು ವೈಜ್ಞಾನಿಕ ರೀತಿಯಲ್ಲಿ ಎದುರಿಸಲು ಬಂಜರು ಭೂಮಿ ಅಭಿವೃದ್ಧಿ ಜಲ ಸಂವರ್ಧನಾ ಯೋಜನೆ, ಜಲಾನಯನ ಪ್ರದೇಶ ಅಭಿವೃದ್ಧಿ, ಮೋಡ ಬಿತ್ತನೆ ಪ್ರಯೋಗಗಳನ್ನು ಜಾರಿಗೆ ತಂದರು. ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟು ವಿಷಮ ಸ್ವರೂಪ ಪಡೆದಾಗ ಬೆಂಗಳೂರಿನಿA ಕೆಆರ್ಎಸ್ ಜಲಾಶಯದ ತನಕ ಪಾದಯಾತ್ರೆ ಹೊರಟರು, ವಿಠಲೇನಹಳ್ಳಿ ಗೋಲಿಬಾರ್ ಪ್ರಕರಣದ ತನಿಖೆಗೆ ಆದೇಶಿಸಿ ಸಮರ್ಥವಾಗಿ ನಿಭಾಯಿಸಿದರು, ತೆಲಗಿ ಛಾಪಾಕಾಗದ ಹಗರಣವನ್ನು ಸಿಬಿಐಗೆ ಒಪ್ಪಿಸಿದರು, ರಾಜ್ಕುಮಾರ್ ಅಪಹರಣ ಪ್ರಕರಣ ನೂರೆಂಟು ದಿನಗಳ ಕಾಲ ಕಗ್ಗಂಟಾಗಿ ಕಾಡಿದರೂ ಕಂಗೆಡಲಿಲ್ಲ, ಇಂತಹ ಹೊತ್ತಿನಲ್ಲೇ ರಾಜ್ಯದ ಲಕ್ಷಾಂತರ ಮಕ್ಕಳಿಗೆ ಅನುಕೂಲವಾಗುವ, ದೇಶದಲ್ಲಿಯೇ ಮಾದರಿಯಾದ ಮಧ್ಯಾಹ್ನದ ಬಿಸಿಯೂಟವನ್ನು ಜಾರಿಗೆ ತಂದರು, ಮರಳಿ ಬಾ ಶಾಲೆಗೆ, ಕೂಲಿಯಿಂದ ಶಾಲೆಗೆ, ಮಧ್ಯಂತರ ಶಾಲೆಗೆ ಕಾರ್ಯಕ್ರಮಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದವು, ವೈದ್ಯಕೀಯ, ಎಂಜಿನಿಯರಿAಗ್, ವೈದ್ಯಕೀಯ ಸೇರಿ ನಾನಾ ವೃತ್ತಿಪರ ಕೋರ್ಸ್ಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇಕಡ ಐದರಷ್ಟು ಸೀಟು ಮೀಸಲಿಟ್ಟರು, ಮಹಿಳಾ ಸಬಲೀಕರಣಕ್ಕಾಗಿ ದೇಶದಲ್ಲಿಯೇ ಕ್ರಾಂತಿಕಾರಿಯಾದ ಸ್ತಿçÃಶಕ್ತಿ ಯೋಜನೆಯನ್ನು ಜಾರಿಗೆ ತಂದರು, ರೈತರ ಶೋಷಣೆಗೆ ಕಡಿವಾಣ ಹಾಕುವ ಭೂಮಿ ಯೋಜನೆಯನ್ನು ಅನುಷ್ಠಾನಕ್ಕೆ ತಂದರು, ಕರ್ನಾಟಕವನ್ನು ಮಾಹಿತಿ ತಂತ್ರಜ್ಞಾನದ ಕೇಂದ್ರವನ್ನಾಗಿ ಮಾಡಲು, ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿನೊಂದಿಗೆ ರಾಜಧಾನಿಯ ಮೂಲ ಸೌಕರ್ಯಗಳನ್ನು ಅಗ್ರಶ್ರೇಯಾಂಕಕ್ಕೆ ಏರಿಸಲು ದಿಟ್ಟ ಹೆಜ್ಜೆಗಳನ್ನು ಇಟ್ಟರು, ಮೆಟ್ರೊಪಾಲಿಟನ್ ಸಿಟಿಗೆ ಮೆಟ್ರೋ ರೈಲು ಬೇಕೇಬೇಕು ಎಂದು ಪಣತೊಟ್ಟು ಅದಕ್ಕೆ ಬುನಾದಿ ಹಾಕಿದರು... ಇಷ್ಟೆಲ್ಲವೂ ಕೃಷ್ಣ ಅವರ ಆಡಳಿತ ವೈಖರಿಗೆ, ವಿಭಿನ್ನ ದೃಷ್ಟಿಕೋನಕ್ಕೆ ಸಾಕ್ಷಿ.

೧೯೬೨ರಿಂದ ಮೊನ್ನೆ ಮೊನ್ನೆ ೨೦೨೩ರಲ್ಲಿ ನಿವೃತ್ತಿ ಘೋಷಿಸುವ ವರೆಗಿನ ೬೧ ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನುಸೇಡು-ದ್ವೇಷ ರಹಿತವಾಗಿ ಪೂರ್ಣಗೊಳಿಸಿ ಕೃಷ್ಣ ನಿರ್ಗಮಿಸಿದ್ದಾರೆಅವರ ಕಾಯ ಅಳಿದಿದೆ, ಕಾಯಕ ಶಾಶ್ವತವಾಗಿ ಉಳಿದಿದೆ

 

"ವರನಟ ರಾಜ್ಕುಮಾರ್ ಅಪಹರಣ ಆದ ದಿನದಿಂದ ಸತತ ನೂರೆಂಟು ದಿನಗಳ ಕಾಲ ಸರಿಯಾಗಿ ನಿದ್ದೆಯನ್ನೇ ಮಾಡಲಿಲ್ಲ. ಅವರು ಮರಳಿ ಬಂದ ಮೇಲೆಯೇ ನಾನು ನೆಮ್ಮದಿಯಿಂದ ನಿದ್ರೆöಮಾಡಿದೆ."

-ಎಸ್.ಎಂ.ಕೃಷ್ಣ



ಕೃಷ್ಣಪಥ

ಎಸ್.ಎಂ.ಕೃಷ್ಣ ಜೀವನದ ಮೈಲಿಗಲ್ಲುಗಳು

ಜನನ: ಮೇ . ೧೯೩೨. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಎಸ್.ಸಿ.ಮಲ್ಲಯ್ಯ ಅವರ ಮಗನಾಗಿ.

ಶಿಕ್ಷಣ: ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಹೈಸ್ಕೂಲು ವರೆಗೆ, ಮಹಾರಾಜಾ ಕಾಲೇಜಿನಲ್ಲಿ ಬಿ.. ಪದವಿ, ಬೆಂಗಳೂರಿನ ಕಾನೂನು ವಿವಿಯಿಂದ ಕಾನೂನು ಪದವಿ, ಅಮೆರಿಕದ ಡಲ್ಲಾಸ್ ಮೆಥೋಡಿಸ್ಟ್ ವಿವಿಯಿಂದ ಮಾಸ್ಟರ್ಸ್ ಆಫ್ ಲಾ.

ವೃತ್ತಿಜೀವನ: ವಾಷಿಂಗ್ಟನ್ ಡಿ.ಸಿ. ಜಾರ್ಜ್ ವಾಷಿಂಗ್ಟನ್ ಆಫ್ ಲಾ ಸ್ಕೂಲ್ನಲ್ಲಿ ಸ್ಕಾಲರ್ ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕ.

ರಾಜಕೀಯಕ್ಕೆ: ಕೃಷ್ಣ ಅವರ ರಾಜಕೀಯ ಜೀವನ ಆರಂಭವಾಗಿದ್ದು ೧೯೬೨ರಲ್ಲಿ. ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಎಚ್.ಕೆ.ವೀರಣ್ಣ ಗೌಡರನ್ನು ಸೋಲಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆ.

ಲೋಕಸಭೆಗೆ: ೧೯೬೭ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಸೋಲು. ೧೯೬೮ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ ಸಂಸತ್ ಪ್ರವೇಶ. ೧೯೭೧ರಲ್ಲಿಯೂ ಮರು ಆಯ್ಕೆ.

ರಾಜ್ಯ ರಾಜಕೀಯಕ್ಕೆ: ೧೯೭೨ರಲ್ಲಿ ಎಂಪಿ ಸ್ಥಾನಕ್ಕೆ ರಾಜೀನಾಮೆ. ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ. ದೇವರಾಜು ಅರಸು ಮಂತ್ರಿ ಮಂಡಲದಲ್ಲಿ ಮೊದಲ ಬಾರಿಗೆ ವಾಣಿಜ್ಯ, ಕೈಗಾರಿಕೆ ಮಂತ್ರಿ.

ಕೇAದ್ರ ಸಚಿವ: ೧೯೮೦ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ೩ನೇ ಬಾರಿ ಆಯ್ಕೆ. ೧೯೮೩ರಲ್ಲಿ ಇಂದಿರಾ ಗಾಂಧಿ ಸಂಪುಟದಲ್ಲಿ ಕೈಗಾರಿಕೆ ಖಾತೆ ರಾಜ್ಯ ಸಚಿವ. ೧೯೮೪ರ ಮಂಡ್ಯ ಎಂಪಿ ಚುನಾವಣೆಯಲ್ಲಿ ಸೋಲು.

ಅಸೆಂಬ್ಲಿ ಸ್ಪೀಕರ್: ೧೯೮೫ರಲ್ಲಿ ಮದ್ದೂರು ವಿಧಾಸಭಾ ಕ್ಷೇತ್ರ ಆಯ್ಕೆ. ೧೯೮೯ರಿಂದ ೧೯೯೩ರ ತನಕ ವಿಧಾನಸಭೆ ಸ್ಪೀಕರ್.

ಉಪಮುಖ್ಯಮಂತ್ರಿ: ೧೯೯೨ರಿಂದ ೧೯೯೪ರ ತನಕ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಉಪಮುಖ್ಯಮಂತ್ರಿ.

ರಾಜ್ಯಸಭೆಗೆ: ೧೯೯೬ರಿಂದ ೧೯೯೯ರ ತನಕ ರಾಜ್ಯಸಭಾ ಸದಸ್ಯರಾಗಿ ಸೇವೆ.

ರಾಜ್ಯ ಕಾಂಗ್ರೆಸ್ ಸಾರಥ್ಯ: ೧೯೯೯ರಲ್ಲಿ ರಾಜ್ಯ ರಾಜಕೀಯಕ್ಕೆ ವಾಪಸ್. ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡರು.

ಮುಖ್ಯಮಂತ್ರಿ: ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದ ಅವರಿಗೆ ಮುಖ್ಯಮಂತ್ರಿ(೧೯೯೯-೨೦೦೪) ಪಟ್ಟ.  

ರಾಜ್ಯಪಾಲ: ೨೦೦೪ರ ಕೊನೆಯಲ್ಲಿ ಮಹಾರಾಷ್ಟç ರಾಜ್ಯಪಾಲರಾಗಿ ನೇಮಕ. ನಾಲ್ಕು ವರ್ಷಗಳ ಕಾಲ ಸೇವೆ.

ವಿದೇಶಾಂಗ ಸಚಿವ: ರಾಜ್ಯಸಭಾ ಸದಸ್ಯರಾಗಿ ಮತ್ತೆ ಸಂಸತ್ ಪ್ರವೇಶ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿದೇಶಾಂಗ ಸಚಿವ.

ಕಾಂಗ್ರೆಸ್ಗೆ ಗುಡ್ಬೈ: ೪೬ ವರ್ಷಗಳಷ್ಟು ಸುದೀರ್ಘ ಕಾಲವಿದ್ದ ಕಾಂಗ್ರೆಸ್ಗೆ ಕೃಷ್ಣ ಅವರು ಗುಡ್ಬೈ ಹೇಳಿದ್ದು ೨೦೧೭ರ ಜನವರಿಯಲ್ಲಿ.

ಬಿಜೆಪಿ ಸೇರ್ಪಡೆ: ಕಾಂಗ್ರೆಸ್ ತೊರೆದ ಮೂರು ತಿಂಗಳಲ್ಲಿಯೇ ೨೦೧೭ರ ಮಾರ್ಚ್ನಲ್ಲಿ ಬಿಜೆಪಿ ಸೇರ್ಪಡೆ.

ರಾಜಕೀಯ ನಿವೃತ್ತಿ: ೫೧ ವರ್ಷಗಳ ಕಾಲ ರಾಜಕೀಯ ಜೀವನ ನಡೆಸಿ ೨೦೨೩ರಲ್ಲಿ ರಾಜಕೀಯ ನಿವೃತ್ತಿ ಘೋಷಣೆ.

ಪದ್ಮ ವಿಭೂಷಣ: ೨೦೨೩ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಬೆಂಗಳೂರು ಮತ್ತು ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್

 

ಪತ್ನಿ: ಪ್ರೇಮಾ ಇಬ್ಬರು ಪುತ್ರಿಯರು: ಶಾಂಭವಿ ಮತ್ತು ಮಾಳವಿಕ

 


ಜಾನ್.ಎಫ್.ಕೆನಡಿ ಪತ್ರ

ಅಮೆರಿಕದ ೩೫ನೇ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಅಧ್ಯಕ್ಷೀಯ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಸಂಬA ಕೆನಡಿ ಅವರು ಕೃಷ್ಣ ಅವರಿಗೆ ಪತ್ರವನ್ನು ಬರೆದು ತಮ್ಮ ಚುನಾವಣೆಯಲ್ಲಿ ಸಹಾಯ ಮಾಡಿದ್ದಕ್ಕೆ ಕೃತಜ್ಞತೆಯನ್ನು ಸಮರ್ಪಿಸಿರುವುದು ಗಮನಾರ್ಹ ಸಂಗತಿ. ೧೯೬೧ರಲ್ಲಿ ಚುನಾವಣೆ ನಡೆದಿತ್ತು. ಸಂದರ್ಭದಲ್ಲಿ ಕೃಷ್ಣ ಅವರು ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಡಾಕ್ಟರೇಟ್ ತರಗತಿಗಳಿಗೆ ಪಾಠ ಮಾಡುತ್ತಿದ್ದರು.

 

"ಎಸ್.ಎಂ.ಕೃಷ್ಣ ಅವರು ಯಾರ ವಿರುದ್ಧ ದ್ವೇಷ ಸಾಧಿಸಲಿಲ್ಲ. ಸೇಡಿನ ರಾಜಕಾರಣ ಅವರ ಶಬ್ಧಕೋಶದಲ್ಲಿಯೇ ಇರಲಿಲ್ಲ. ಎಲ್ಲರನ್ನೂ ಪ್ರೀತಿಸುತ್ತಲೇ, ಗೌರವಿಸುತ್ತಲೇ ಜೀವನ ಸಾಗಿಸಿದವರು."

-ಸಿದ್ದರಾಮಯ್ಯ, ಮುಖ್ಯಮಂತ್ರಿ

"ನಾವಿಬ್ಬರೂ ಒಂದೇ ಕಾಲದಲ್ಲಿ ರಾಜಕೀಯ ಆರಂಭಿಸಿದವರು. ನನ್ನ ದೀರ್ಘಕಾಲದ ಸ್ನೇಹಿತ. ಅವರದ್ದು ವಿಭಿನ್ನ ಆಡಳಿತದ ದೃಷ್ಟಿಕೋನ."

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ