ಕರ್ನಾಟಕದ ಸುವರ್ಣ ಘಳಿಗೆ ಸವೆದ ಹಾದಿಯ ನೆನೆದು...

ದೇಶಕ್ಕೆ ಮಾದರಿಯಾದ ಕರ್ನಾಟಕದ ಬಹುತ್ವ

-ಚಂದ್ರಮುಖಿ

೧೮೫೮ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಒಂದು ಮಹತ್ವದ ಚರ್ಚೆ ನಡೆಯುತ್ತದೆ. ಕಂಪನಿ ಸರ್ಕಾರವನ್ನು ಕೊನೆಗೊಳಿಸುವುದು ಹೇಗೆ, ಅದಕ್ಕೆ ಪರ್ಯಾಯ ಮಾರ್ಗಗಳು ಯಾವುವು? ಎಂಬ ಪ್ರಶ್ನೆಗಳು ಚರ್ಚೆಯ ಕೇಂದ್ರ ಬಿಂದುವಾಗಿದ್ದವು. ಭಾರತದಲ್ಲಿ ಎಂಥಾ ಸರ್ಕಾರ ರಚನೆಯಾಗಬೇಕು ಎಂಬ ವಿಚಾರವನ್ನು ಮುಂದಿಟ್ಟುಕೊAಡು ಮಸೂದೆ ಮಂಡನೆಯಾಗಿತ್ತು. ಆಗ ಅಂದಿನ ವಾಣಿಜ್ಯ ಮಂಡಳಿಯ ಅಧ್ಯಕ್ಷ ಹಾಗೂ ವಾಗ್ಮಿ ಜಾನ್ ರೈಟ್ ಅವರು ಒಂದು ಮಹತ್ವದ ಪ್ರಸ್ತಾಪವನ್ನು ಮುಂದಿಡುತ್ತಾರೆ; ‘ಭಾರತದ ಪ್ರಾಂತ್ಯಗಳನ್ನು ರಚನೆ ಮಾಡುವುದಿದ್ದರೆ ಅದಕ್ಕೆ ಭಾಷೆಯೇ ಆಧಾರವಾಗಬೇಕು. ಅದೇ ಸರಿಯಾದ ಕ್ರಮ. ಮುಂದಿನ ದಿನಗಳಲ್ಲಿ ಹಾಗೆ ಮಾಡುವುದಾದರೆ ಇಂಡಿಯಾದಲ್ಲಿ ಐದು ಪ್ರಾಂತ್ಯಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ!’

ಪ್ರಾಕೃತಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಅಖಂಡವಾಗಿದ್ದ ಭಾರತದಲ್ಲಿ ಭಾಷೆಗೆ ಎಷ್ಟು ಮಹತ್ವವಿದೆ ಎಂಬುದನ್ನು ಬ್ರಿಟಿಷರು ಅಂದೇ ಮನಗಂಡಿದ್ದರು ಎಂಬುದಕ್ಕೆ ಇದು ಬಹುದೊಡ್ಡ ಸಾಕ್ಷಿ. ಬ್ರೆöÊಟ್ ಅಂದು ಆಡಿದ ಸ್ಪಷ್ಟ ನುಡಿಯಿಂದಾಗಿ ಬ್ರಿಟಿಷರ ನಿಲುವಿನಲ್ಲಿಯೂ ಬದಲಾವಣೆಯಾಯಿತು. ೧೯ನೇ ಶತಮಾನದ ಕೊನೆಯ ಭಾಗದಲ್ಲಿ ಬ್ರಿಟಿಷರು ಪ್ರಾಂತ್ಯಗಳನ್ನು ಪುನಾರಚಿಸುವ ಯೋಚನೆ ಮಾಡಿದಾಗ ಮುಂಚೂಣಿಗೆ ಬಂದಿದ್ದು ಭಾಷೆಯೇ. ಬಿಹಾರ, ಒರಿಸ್ಸಾ, ಸಿಂಧ್ ಪ್ರಾಂತ್ಯಗಳ ರಚನೆಯ ಹಿಂದೆ ಪ್ರಮುಖವಾಗಿದ್ದುದು ಭಾಷೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಹುಷಃ ಭಾಷಾವಾರು ಪ್ರಾಂತ್ಯಗಳ ರಚನೆಗೆ ಇದು ಮುನ್ನುಡಿ ಬರೆಯಿತು. ಹರಿದು ಹಂಚಿಹೋಗಿದ್ದ ಭಾಷಾವಾರು ಪ್ರದೇಶಗಳ ಜನರಲ್ಲಿಭಾಷಾವಾರು ಪ್ರಾಂತ್ಯಗಳ ರಚನೆಯಾಗಬೇಕುಎಂಬ ಬಲವಾದ ಭಾವನೆ ಮೊಳೆಯಲು ಶುರುವಾಯಿತು. ಒಂದೊAದು ಭಾಷಾ ವಿಭಾಗದವರೂ ಕೂಡ ಪ್ರತ್ಯೇಕ ಪ್ರಾಂತ್ಯದ ಕನಸನ್ನು ಕಂಡರು. ಅದು ಕ್ರಮೇಣ ಚಳವಳಿಯ ಸ್ವರೂಪ ಪಡೆಯಿತು.

ಸರಿಸುಮಾರು ಇದೇ ಹೊತ್ತಿನಲ್ಲಿ ಇಂತಹ ಭಾಷಾ ಕಳಕಳಿ ಕರ್ನಾಟಕದಲ್ಲಿಯೂ ಬಲಗೊಳ್ಳಲು ಶುರುವಾಗಿತ್ತು. ‘ಕರ್ನಾಟಕ ಏಕೀಕರಣ ಧ್ವನಿಗೆ ಜೀವಬಂದಿತ್ತು. ೧೮೯೦ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯೊಂದಿಗೆ ಮೊದಲ್ಗೊಂಡ ಭಾಷಾ ಚಳವಳಿ ಸತತ ೬೫ ವರ್ಷಗಳ ಕಾಲ ನಿರಂತರವಾಗಿ ನಡೆಯಿತು. ಒಂದು ಕಡೆಯಲ್ಲಿ ಸ್ವಾತಂತ್ರ್ಯ ಚಳವಳಿ ಇನ್ನೊಂದು ಕಡೆ ಕರ್ನಾಟಕ ಏಕೀಕರಣ ಚಳುವಳಿ ಏಕಪ್ರಕಾರದಲ್ಲಿ ಸಾಗಿತ್ತು. ದೇಶಕ್ಕೆ ಸ್ವಾತಂತ್ರö್ಯ ಬಂದರೂ ಭಾಷಾ ಚಳವಳಿ ಮಾತ್ರ ನಿಂತಿರಲಿಲ್ಲ. ನಿಜವಾಗಿ ನಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳು ಯಾವುವು ಎನ್ನುವ ಬಗ್ಗೆ ನಿಖರತೆ ಇರಲಿಲ್ಲ. ಅದಕ್ಕಾಗಿ ಧಾರ್ ಮತ್ತು ಫಝಲ್ ಸಮಿತಿಗಳು ನೇಮಕವಾಗಿ ಕರ್ನಾಟಕ ಏಕೀಕರಣಕ್ಕೆ ೧೯೫೬ರಲ್ಲಿ ನೆಹರೂ ಸರ್ಕಾರ ಮಾನ್ಯ ಮಾಡಿದರೂ ಮೈಸೂರು ರಾಜ್ಯ ಎಂದು ನಾಮಕರಣವಾಯಿತೇ ವಿನಃ ಕರ್ನಾಟಕ ಹೆಸರು ದಕ್ಕದೇ ಹೋಯಿತು. ಮೈಸೂರು ಮಹಾರಾಜರ ಪ್ರಭಾವಳಿಯಿಂದ ಈಚೆಗೆ ಬರಲು ಆಡಳಿತದ ಚುಕ್ಕಾಣಿ ಹಿಡಿದವರಿಗೂ ಸಾಧ್ಯವಾಗಲಿಲ್ಲ. ಒಂದು ಭಾಗದ ಜನರಿಗೂ ಹೆಸರಿನ ಮೇಲೆ ವಿಶೇಷವಾದ ಆಸ್ಥೆ ಇದ್ದುದೂ ಇನ್ನೊಂದು ಕಾರಣ.

ಮುಂಬೈ, ಹೈದರಾಬಾದ್‌ನಂತೆ ಮೈಸೂರು ಒಂದು ಪ್ರಾಂತ್ಯವನ್ನು ಸೂಚಿಸುತ್ತದೆಯೇ ಹೊರತು ಅದಕ್ಕೊಂದು ಸಮಷ್ಟಿ ರೂಪ ಇಲ್ಲ ಎನ್ನುವುದು ಬಹುಜನರ ಅಭಿಪ್ರಾಯವಾಗಿತ್ತು. ಚೂರುಚೂರಾಗಿದ್ದ ಪ್ರಾಂತ್ಯಗಳನ್ನೆಲ್ಲ ಒಂದು ಚೌಕಟ್ಟಿನೊಳಕ್ಕೆ ತಂದು ಪೆÇÃಣಿಸುವ ಹೊತ್ತಿಗೆ ಅಮೂಲ್ಯವಾದ ಆರು ದಶಕಗಳೇ ಕಳೆದು ಹೋಗಿದ್ದವು. ಅಷ್ಟಾಗಿಯೂ ಅಸಮಾಧಾನದ ಎಳೆಯೊಂದು ಉಳಿದುಬಿಟ್ಟಿತು. ಬಳ್ಳಾರಿ, ರಾಯಚೂರು, ದಕ್ಷಿಣ ಕನ್ನಡದ ಭಾಗಗಳ ಜನರ ಮನಸ್ಸಿನಲ್ಲಿ ನಾವುಎಲ್ಲರೊಳಗೊಂದಾಗಿಲ್ಲಎಂಬ ಭಾವನೆಯೇ ಸ್ಥಿರವಾಗಿತ್ತು. ಅಲ್ಲಿಂದ ಶುರುವಾಗಿದ್ದೇ ಇನ್ನೊಂದು ಹೋರಾಟ. ವಿಶಾಲ ಮೈಸೂರು ರಾಜ್ಯಕ್ಕೆ ಹೊಸ ನಾಮಕರಣ ಮಾಡುವ ಹೋರಾಟ. ಏಕೀಕರಣಗೊಳ್ಳುವುದಕ್ಕೂ ಮೊದಲಿನಿಂದಲೂ ಕುವೆಂಪು, ಆಲೂರು ವೆಂಕಟರಾಯರು, ಬಿ.ಎಂ.ಶ್ರೀ ಅವರಂತಹ ದಿಗ್ಗಜರು ನಾಡು ಅಖಂಡ ಕರ್ನಾಟಕವಾಗಬೇಕು ಎಂಬ ಕನಸನ್ನು ಕಂಡÀರು. ಕನ್ನಡ ಹೋರಾಟಗಾರರು, ಲೇಖಕರು, ಕೆಲವು ರಾಜಕಾರಣಿಗಳು ಇಂತಹ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಅವರೆಲ್ಲರೂ ಕಂಡ ಕನಸು ನನಸಾಗಲು ಬರೋಬ್ಬರಿ ಹದಿನೇಳು ವರ್ಷಗಳೇ ಬೇಕಾದವು. ಅದರ ಫಲವಾಗಿ ಅಖಂಡ ಕರ್ನಾಟಕಕ್ಕೆ ಅರ್ಥಪೂರ್ಣ ಹೆಸರು ದಕ್ಕಿದ್ದು ೧೯೭೩ರಲ್ಲಿ. ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ವರ್ಷದ ನವೆಂಬರ್ ಒಂದರAದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಅಧಿಕೃತವಾಗಿ ಘೋಷಿಸಲಾಯಿತು.

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡಎಂಬ ಘೋಷ ವಾಕ್ಯ ಅಂದು ಮೊಳಗಿತ್ತು. ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಒಂದು ರಾಜ್ಯಕ್ಕೆ ಅಖಂಡ ಸ್ವರೂಪವೇನೂ ದಕ್ಕುವುದಿಲ್ಲ. ಕನ್ನಡ ನುಡಿ ಮತ್ತು ಸಂಸ್ಕೃತಿಯ ಬಂಧದಲ್ಲಿ ಕರ್ನಾಟಕದ ಬಹುತ್ವವನ್ನು ಕಟ್ಟುವ ಮಹತ್ವದ ಕಾರ್ಯವನ್ನು ಆಗುಮಾಡಬೇಕಿತ್ತು. ಬಾಹ್ಯ ಒತ್ತಡಗಳ ನಡುವೆ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿತ್ತು. ಇಲ್ಲಿರುವ ಅಮೂಲ್ಯವಾದ ಪ್ರಾಕೃತಿಕ ಸಂಪತ್ತನ್ನು ಕಾಪಾಡುವ ಹೊಣೆಗಾರಿಕೆಯಿತ್ತು. ಜೊತೆಗೆ ಜನರ ಸಾಮಾಜಿಕ ಸ್ಥಿತಿಗತಿಗಳನ್ನು ಸುಧಾರಿಸುವ ಸವಾಲು ಎದುರಿಗಿತ್ತು. ಅವೆಲ್ಲವೂ ಆಗಿ ಈಗ ಐವತ್ತು ವರ್ಷಗಳು ಕಳೆದು ಹೋಗಿವೆ. ಒಂದು ನಾಡನ್ನು ಕಟ್ಟುವ ಕಾರ್ಯದಲ್ಲಿ ಅದು ಬಹುಮುಖ್ಯ ಕಾಲಘಟ್ಟ. ಇವೆಲ್ಲದರ ಒಟ್ಟರ್ಥವಾಗಿ ಅಂದು ಜನರ ಮನಸ್ಸಿನಲ್ಲಿ ಬಿತ್ತಿದ ಬಣ್ಣ ಬಣ್ಣದ ಕನಸುಗಳು ಏನಾದವು ಎಂಬುದನ್ನು ಅವಲೋಕನ ಮಾಡುವ ಸಮಯ. ಅದಕ್ಕಾಗಿಯೇ ಬಂದಿರುವುದುಕರ್ನಾಟಕ ಸುವರ್ಣ ಮಹೋತ್ಸವಎನ್ನುವ ಸುವರ್ಣವಕಾಶ.

ಮರುನಾಮಕರಣದ ಬಳಿಕ ೧೯೭೪ರಲ್ಲಿ ದೇವರಾಜ ಅರಸು ಸರ್ಕಾರ ಕೈಗೊಂಡ ಒಂದು ಐತಿಹಾಸಿಕ ನಿರ್ಣಯದಿಂದ ಕರ್ನಾಟಕವನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸಿತು ಎಂಬುದು ತಪ್ಪಲ್ಲ. ಅದುಉಳುವವನೇ ಹೊಲದೊಡೆಯಎಂಬ ನಿರ್ಧಾರ. ಅಂತಹ ಒಂದು ಕಾನೂನಿನಿಂದಾಗಿ .೮೫ ಲಕ್ಷ ಗೇಣಿದಾರರು ಭೂಮಿಯ ಮಾಲೀಕರಾದರು. ಅದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭೂಮಿಯನ್ನು ಪಡೆದವರು ದಲಿತರು ಎಂಬುದು ವಿಶೇಷ.

೧೯೭೪ರಲ್ಲಿ ಅಂದಿನ ಸರ್ಕಾರ ಹೊರಡಿಸಿದ ಒಂದು ಮಹತ್ವದ ಆದೇಶ ಕನ್ನಡ ಭಾಷೆಯನ್ನು ಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಮುನ್ನುಡಿ ಬರೆಯಿತು. ಸಕಾರಿ ಕಚೇರಿಗಳಲ್ಲಿ ಎಲ್ಲ ಕಾರ್ಯನಿರ್ವಹಣೆ ಕನ್ನಡದಲ್ಲಿಯೇ ನಡೆಯಬೇಕು ಎಂಬ ಸುತ್ತೋಲೆಯನ್ನು ಎಲ್ಲ ಇಲಾಖೆ ಮುಖ್ಯಸ್ಥರು ಹಾಗೂ ಸಚಿವರ ಕಾರ್ಯಾಲಯಗಳಿಗೆ ಕಳುಹಿಸಲಾಯಿತು. ಅಷ್ಟಾಗಿಯೂ ಇಂಗ್ಲಿಷ್ ಬಳಕೆ ನಿಲ್ಲದೇ ಹೋದಾಗ ೧೯೭೬ರಲ್ಲಿ ಇನ್ನೊಂದು ಆದೇಶ ಹೊರಬಿತ್ತು. ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಆದೇಶಿಸಿ ಕನ್ನಡ ಬೆರಳಚ್ಚು ಯಂತ್ರಗಳನ್ನು ಪೂರೈಸಿತು.

ಇನ್ನೊಂದು ನಿರ್ಣಾಯಕ ಆದೇಶ ಹೊರಬಿದ್ದಿದ್ದು ೧೯೮೧ರಲ್ಲಿ. ರಾಜ್ಯದ ಎಲ್ಲ ಸರ್ಕಾರಿ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವುದು ಆದೇಶದ ಸಾರಾಂಶ. ಜೊತೆಗೆ ಸರ್ಕಾರಿ ಕಡತಗಳ ಮೇಲೆ ಬರೆಯುವ ಟಿಪ್ಪಣಿ, ಸಭಾ ನಡಾವಳಿ, ಪತ್ರ ವ್ಯವಹಾರ, ನೋಟಿಸ್, ಜಾಹೀರಾತು, ರಿಜಿಸ್ಟರ್‌ಗಳು, ಲೆಕ್ಕಪತ್ರಗಳು ಕನ್ನಡದಲ್ಲಿಯೇ ಇರಬೇಕು ಎಂಬ ಆದೇಶ ಹೊರಡಿಸಿದ್ದು ೧೯೮೩ರಲ್ಲಿ.

ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿ ರಚನೆಯಾಗಿದ್ದು ೧೯೮೩ರಲ್ಲಿ. ಅದರ ಮೊದಲ ಅಧ್ಯಕ್ಷರಾದವರು ಸಿದ್ದರಾಮಯ್ಯ. ಸರ್ಕಾರ ಹೊರಡಿಸುವ ನಿಬಂಧನೆಗಳು, ಹೇಳಿಕೆಗಳು, ಶಾಸನಗಳು, ಮಸೂದೆ ಮತ್ತು ಅದರ ತಿದ್ದುಪಡಿಗಳು ಯಾವ ಕಾರಣಕ್ಕೂ ಇಂಗ್ಲಿಷ್‌ನಲ್ಲಿ ಇರಕೂಡದು. ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಎಂಬ ಆದೇಶ ಹೊರಡಿಸಿದ್ದು ೧೯೮೪ರಲ್ಲಿ.

ರಾಜ್ಯದ ನ್ಯಾಯಾಲಯಗಳಲ್ಲಿ ಇಂಗ್ಲಿಷ್‌ನಲ್ಲಿಯೇ ತೀರ್ಪುಗಳು ಹೊರಬೀಳುತ್ತಿದ್ದವು. ಅದನ್ನು ಬದಲಿಸುವ ಆದೇಶಗಳು ಬಂದವು. ೧೯೭೪ರಲ್ಲಿ ಮ್ಯಾಜಿಸ್ಟೆçÃಟ್ ಕೋರ್ಟ್ಗಳಲ್ಲಿ, ೧೯೭೮ರಲ್ಲಿ ಸಿವಿಲ್ ಕೋರ್ಟ್ ಗಳಲ್ಲಿ ಮತ್ತು ೧೯೭೯ರಲ್ಲಿ ಸೆಷೆನ್ಸ್ ನ್ಯಾಯಲಯಗಳಲ್ಲಿ ಕನ್ನಡ ಬಳಕೆಗೆ ಆದೇಶ ಹೊರಡಿಸಲಾಯಿತು.

೧೯೮೪ರಲ್ಲಿ ರಚನೆಯಾದ ಸರೋಜಿನಿ ಮಹಿಷಿ ಸಮಿತಿ ಸರ್ಕಾರದ ಬಹುದೊಡ್ಡ ನಿರ್ಧಾರ. ಕರ್ನಾಟಕದ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎನ್ನುವ ಸಮಿತಿಯ ವರದಿ ಕನ್ನಡಿಗರಿಗೆ ಉದ್ಯೋಗ ದೊರಕಿಸುವಲ್ಲಿ ಮಹತ್ವದ ಮೈಲಿಗಲ್ಲಾಯಿತು.

ಕರ್ನಾಟಕಕ್ಕೆ ಸಂದ ಜ್ಞಾನಪೀಠ, ಭಾರತ ರತ್ನ, ಮ್ಯಾಗ್ಸೇಸೆ ಪ್ರಶಸ್ತಿಗಳು ನಾಡಿನ ಗರಿಮೆಯನ್ನು ಎತ್ತರಕ್ಕೆ ಕೊಂಡೊಯ್ದವು. ಸರ್ಕಾರಗಳು ಜಾರಿಗೆ ತಂದ ಋಣಮುಕ್ತ ಕಾಯ್ದೆ, ಯಶಸ್ವಿನಿ ಆರೋಗ್ಯ ವಿಮೆ, ಮಹಿಳೆಯರ ಆರ್ಥಿಕ-ಸಾಮಾಜಿಕ ಬಲವರ್ಧನೆಗೆ ಸ್ತಿçÃಶಕ್ತಿ ಯೋಜನೆ, ಕರ್ನಾಟಕದ ೪೫ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್, ಭಾಗ್ಯಲಕ್ಷಿö್ಮ ಯೋಜನೆ, ಬಡವರಿಗೆ ಅನ್ನಭಾಗ್ಯ ಯೋಜನೆ, ಆರಾಧನಾ ಯೋಜನೆ... ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಇವೆಲ್ಲವೂ ಕರ್ನಾಟಕದ ಬಹುತ್ವದ ಪರಂಪರೆಯ ದೃಷ್ಟಿಯಿಂದ ಬಹುಮುಖ್ಯ.

ಸರ್ವಜನಾಂಗದ ಶಾಂತಿಯ ತೋಟಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಸುವರ್ಣದ ಹೊಸ್ತಿಲನ್ನು ದಾಟಿಅತ್ಯಾಧುನಿಕ ಕರ್ನಾಟಕವಾಗುವ ಹಂಬಲದಲ್ಲಿ ನಿಂತಿದೆ. ಕನ್ನಡಿಗರು ಆರೋಗ್ಯಕರ ನಾಳೆಗಳ ನಿರೀಕ್ಷೆಯಲ್ಲಿದ್ದಾರೆ. ಇತಿಹಾಸದ ಪುಟದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿರುವ ಕರ್ನಾಟಕದ ಬಹುತ್ವ ಇಡೀ ದೇಶಕ್ಕೆ ಮಾದರಿ.

 

ಕರ್ನಾಟಕದ ದಿಟ್ಟ ಹೆಜ್ಜೆಗಳು

೧೯೭೩ರಲ್ಲಿ ಜಾರಿಗೆ ಬಂದ ಕೂಲಿಗಾಗಿ ಕಾಳು ಯೋಜನೆ.

ಭಾರೀ ವಿರೋಧದ ನಡುವೆಯೇ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಹಾವನೂರು ವರದಿ ಜಾರಿ.

ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರ ವಿಕೇಂದ್ರೀಕರಣ ಜಾರಿಗೆ ತಂದ ಕರ್ನಾಟಕ.

ವೃತ್ತಿ ಶಿಕ್ಷಣ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯ.

ಕನ್ನಡ ಕಾವಲು ಸಮಿತಿಯ ಅಧಿಕಾರ ವ್ಯಾಪ್ತಿಯನ್ನು ಹಿಗ್ಗಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ (೧೯೯೪). ಅದರ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನ್ಯಾಯಾಲಯದಲ್ಲಿ ಕನ್ನಡ ಬಳಕೆ ಉತ್ತೇಜನಕ್ಕೆನ್ಯಾಯಾಂಗದಲ್ಲಿ ಕನ್ನಡಪ್ರಶಸ್ತಿ ಸ್ಥಾಪನೆ.

ಪ್ರೌಢಶಾಲೆ ಹಂತದಲ್ಲಿ ಕನ್ನಡವೇ ಏಕೈಕ ಪ್ರಥಮ ಭಾಷೆ, ರಾಜ್ಯದ ಕನ್ನಡೇತರ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದ ಮೊದಲ ವರ್ಷದಿಂದ ಕನ್ನಡ ಬೋಧನೆ ಕಡ್ಡಾಯ.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ನಂಜುAಡಪ್ಪ ವರದಿ (೨೦೦೧ರಲ್ಲಿ)

ಬಡವರಿಗೆ ಮನೆ ನಿರ್ಮಿಸಿ ಕೊಡುವ ಆಶ್ರಯ ವಸತಿ ಯೋಜನೆಗೆ ಚಾಲನೆ (೧೯೯೨)

ದೆಹಲಿಯ ಬಳಿಕ ದೇಶದ ಎರಡನೇ ಅತಿ ಉದ್ದದ ಮೆಟ್ರೊ ರೈಲು ಜಾಲ ಇರುವುದು ಬೆಂಗಳೂರಿನಲ್ಲಿ. ಅದು ಆರಂಭವಾಗಿದ್ದು ೨೦೧೧ರಲ್ಲಿ

ಚಿತ್ರರಂಗದಲ್ಲಿ ಅತ್ಯಂತ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಡಾ.ರಾಜ್‌ಕುಮಾರ್ (೧೯೯೫) ಮತ್ತು ಛಾಯಾಗ್ರಾಹಕ ವಿ.ಕೆ.ಮೂರ್ತಿ.

 

ದೇಶದ ಹೆಗ್ಗುರುತು ಎಲೆಕ್ಟಾçನಿಕ್ ಸಿಟಿ

ಬೆಂಗಳೂರಿನ ಎಲೆಕ್ಟಾçನಿಕ್ ಸಿಟಿ ಇಂದು ದೇಶದ ಬಹುದೊಡ್ಡ ಐಟಿ ಹಬ್ ಆಗಿ ಹೊರಹೊಮ್ಮಿದೆ. ಆದರೆ ಇಂತಹುದೊAದು ಕಲ್ಪನೆಗೆ ಭಾಷ್ಯ ಬರೆದವರು ದೇವರಾಜು ಅರಸು. ಕೋನಪ್ಪನ ಅಗ್ರಹಾರ ಮತ್ತು ದೊಡ್ಡ ತೇಗೂರಿನ ಸುಮಾರು ೮೦೦ ಎಕರೆ ಪ್ರದೇಶದಲ್ಲಿ ಇಂತಹುದೊAದು ಯೋಜನೆಗೆ ಚಾಲನೆ ಸಿಕ್ಕಿದ್ದು ೧೯೭೮ರಲ್ಲಿ. ಅದು ಅರಸು ಅವರ ದೂರದೃಷ್ಟಿಯ ಫಲ. ಇಂದು ಇನ್ಫೋಸಿಸ್, ಟಿಸಿಎಸ್. ವಿಪ್ರೊ ಮುಂತಾದ ನೂರಾರು ಐಟಿ ಸಂಸ್ಥೆಗಳು ಪ್ರದೇಶದಲ್ಲಿ ಅಸ್ತಿತ್ವ ಪಡೆದುಕೊಂಡಿವೆ. ಕರ್ನಾಟಕದ ಬಹುತ್ವದ ದೃಷ್ಟಿಯಿಂದ ಇವೆಲ್ಲವೂ ಅತ್ಯಂತ ಮಹತ್ವವನ್ನು ಪಡೆಯುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಇಂದು ಎಲೆಕ್ಟಾçನಿಕ್ ಸಿಟಿ ನಮ್ಮ ದೇಶದ ಹೆಗ್ಗುರುತಾಗಿದೆ.

 

ಇತಿಹಾಸದ ಪುಟದಲ್ಲಿ

ಗೋಕಾಕ್ ಚಳುವಳಿ

ಕಳೆದ ಐವತ್ತು ವರ್ಷಗಳ ಕರ್ನಾಟಕವನ್ನು ಹಿಂದಿರುಗಿ ನೋಡಿದಾಗ ಅತ್ಯಂತ ಮಹತ್ವದ ಮೈಲಿಗಲ್ಲುಗಳಲ್ಲಿ ಒಂದು ಗೋಕಾಕ್ ಸಮಿತಿ ರಚನೆ ಮತ್ತು ಗೋಕಾಕ್ ಚಳುವಳಿ. ಅದು ಎಂಭತ್ತರ ದಶಕದ ಬಹಳ ದೊಡ್ಡ ಆಂದೋಲನ. ಪ್ರೌಢಶಾಲೆ ಮಟ್ಟದಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ದೃಷ್ಟಿಯಿಂದ ಪರಿಹಾರ ಕಂಡುಕೊಳ್ಳಲು ೧೯೮೦ರಲ್ಲಿ ರಚನೆಯಾಗಿದ್ದು ವಿ.ಕೃ.ಗೋಕಾಕ್ ನೇತೃತ್ವದ ಸಮಿತಿ. ಸಮಿತಿ ವರದಿ ಸಲ್ಲಿಸಿದ ಬಳಿಕವೂ ಅದರ ಶಿಫಾರಸುಗಳು ಜಾರಿಯಾಗದೇ ಹೋದಾಗ ಕನ್ನಡಿಗರೆಲ್ಲ ನಡೆಸಿದ ಹೋರಾಟವೇ ಗೋಕಾಕ್ ಚಳುವಳಿ. ಡಾ.ರಾಜ್‌ಕುಮಾರ್ ಮುಂದಾಳತ್ವದಲ್ಲಿ ನಡೆದ ಗೋಕಾಕ್ ಚಳುವಳಿ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಅಚ್ಚೊತ್ತಿದೆ.

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ