ಗುಡ್ ಮಾರ್ನಿಂಗ್ ಹೇಳದ ಪತ್ರಿಕೆಗಳು...!
ಈ ಮಂತ್ರಿ ಪದವಿ, ರಾಜಕೀಯದ ನಡುವೆ ನಿಮ್ಜೊತೆ ನೀವೇ ಮಾತಾಡಿಕೊಳ್ಳೋಕೆ ಎಷ್ಟು ಸಮಯ ಸಿಗತ್ತೆ? ನನ್ನ ದಿನಚರಿನೇ ಬೇರೆ. ನಾನು ಬೆಳಿಗ್ಗೆ ನಾಲ್ಕು ಗಂಟೆಗೆ ಏಳ್ತೇನೆ. ಬಹಳ ಜನ ಎದ್ದೇಳೊ ಹೊತ್ತಿಗೆ ನಂದು ಒಂದಷ್ಟು ಕೆಲಸ ಮುಗಿದಿರುತ್ತೆ. ವಾಕಿಂಗ್ ಮುಗ್ಸಿ ಐದೂವರೆಗೆ ವಾಪಾಸ್ ಬರ್ತೇನೆ. ಪ್ರತಿದಿನ 14 ಪೇಪರ್ ಓದ್ತೇನೆ. ಕನ್ನಡ ಪತ್ರಿಕೆಗಳಲ್ಲಿ ಕನ್ನಡ ಟೈಮ್ಸ್ ಆಫ್ ಇಂಡಿಯಾ(ಪತ್ರಿಕೆ ಈಗಿಲ್ಲ)ದಿಂದ ಶುರು. ಉದಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಇಂಗ್ಲಿಷ್ನಲ್ಲಿ MINTನಿಂದ ಶುರು ಮಾಡುತ್ತೇನೆ. ಅದರಲ್ಲಿ ಬಹಳ ಗಂಭೀರ ಲೇಖನ ಬರುತ್ತೆ. ಚಿಲ್ರೆ ರಾಜಕೀಯ ಬರೋದೇ ಇಲ್ಲ. ಇಟಿ, ಡಿಎನ್ಎ, ಕ್ರೋನಿಕಲ್. ಟೈಮ್ಸ್ ಆಫ್ ಇಂಡಿಯಾ, ಎಕ್ಸ್ಪ್ರೆಸ್, ಹೆರಾಲ್ಡ್, ಹಿಂದು. ಅಷ್ಟೊತ್ತಿಗೆ 7 ಗಂಟೆ. ಅಷ್ಟೊತ್ತು ನಂದೇ ಲೋಕ. ಬೆಳಗ್ಗೆ ಎದ್ದ ತಕ್ಷಣ ಜನರ ಸಂಪರ್ಕ, ಫೋನ್ ಅಂತ ಏನೂ ಇಲ್ಲ. ಈಗ ಪತ್ರಿಕೆಯಲ್ಲಿ ಒಂದು ವರದಿ ಬಂದಿರತ್ತೆ, ಹ್ಯುಮನ್ ಇಂಟ್ರೆಸ್ಟ್ ಆಗಿರೋದು... ಅಧಿಕಾರದಲ್ಲಿದ್ದವರು ನೀವು ಆ ಬಗ್ಗೆ ಯಾವ ರೀತಿಯ ಚಿಂತನೆ, ಕ್ರಮಕ್ಕೆ ಮುಂದಾಗ್ತೀರಿ ? ಇದಕ್ಕೆ ನಾನು ನಿಮಗೆ ಒಂದೇ ಒಂದು ಉದಾಹರಣೆ ಕೊಡ್ತೇನೆ. ಟೈಮ್ಸ್ ತುಮಕೂರು ಎಡಿಷನ್ನಲ್ಲಿ ಒಂದು ಸುದ್ದಿ ಬಂದಿತ್ತು. ತುರುವೇಕೆರೆ ಸಂಪಿಗೆಹಳ್ಳಿಯ ಶ್ರುತಿ ಎಂಬ ಹುಡ್ಗೀದು. ಬಲಗೈ ಇಲ್ಲ. ಎಡಗೈಯಲ್ಲಿ ಅಡಿಕೆ ಸುಲಿದು ಸಂಪಾದನೆ ಮಾಡೋದು ಎಲ್ಲ ಮಾಡ್ತಾಳೆ, ಒಂದೇ ಕೈಯಲ್ಲಿ ಸೈಕಲ್...