ಪೋಸ್ಟ್‌ಗಳು

ಅಕ್ಟೋಬರ್ 24, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೇವಲೋಕದ ಬಾಗಿಲಲ್ಲಿ ನಿಂತು…

ಇಮೇಜ್
ನೀವು ಯಾವುದಾದರೂ ಪೌರಾಣಿಕ ಚಿತ್ರಗಳಲ್ಲಿ ಮೋಡಗಳ ರಾಶಿಯ ನಡುವೆ ದೇವರು ಪ್ರತ್ಯಕ್ಷ ಆಗುವುದನ್ನು, ಹಾಗೆ ಪ್ರಯಾಣ ಮಾಡುವುದನ್ನು ನೋಡಿರಬಹುದು. ಹಾಗೊಂದು ಮೋಡಗಳ ರಾಶಿ ಕೈಗೇ ನಿಲುಕಿ ಬಿಟ್ಟರೆ ಹೇಗಿರಬೇಡ? ಇಲ್ಲ, ನನ್ನ ಕೈಗೇನೂ ನಿಲುಕಿಲ್ಲ. ಆದರೆ, ಸಾಲು-ಸಾಲು ಪರ್ವತಗಳ ಮೇಲಿನಿಂದ ಹಿಂಡು-ಹಿಂಡು ಮೋಡಗಳ ರಾಶಿ ತೇಲಿ ತೇಲಿ ಹೋಗುವ ದೃಶ್ಯವನ್ನು ಕಂಡು ಮೂಕವಿಸ್ಮಿತರಾಗುವ ಭಾಗ್ಯ ಲಭಿಸಿದ್ದು ಕಳೆದ ವಾರ (ಅ.20.2010). ಸೆಪ್ಟೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಮಂಗಳೂರಿಂದ ಬೆಂಗಳೂರಿಗೆ ರಸ್ತೆ ಮೂಲಕ ಪ್ರಯಾಣ ಮಾಡಿದಾಗ ಶಿರಾಡಿ ಘಾಟ್ ಸೊಂಟದ ನಡುವೆ ನಿಂತಿದ್ದಾಗ ಬೆಟ್ಟದ ತುದಿಯಲ್ಲಿ ರೈಲು ಹರಿದು ಹೋಗುತ್ತಿದ್ದ ದೃಶ್ಯ ಕಂಡು ಆನಂದಕ್ಕೆ ಪಾರವೇ ಇಲ್ಲದಂತೆ ಕುಣಿದಾಡಿದ್ದನ್ನು ಚಂದ್ರಮುಖಿ ಯಲ್ಲಿ ಬರೆದಿದ್ದೆ. ಇನ್ನೊಂದು ತಿಂಗಳು ಕಳೆಯುವುದರೊಳಗೆ ಅದೇ ರೈಲಿನಲ್ಲಿ ಹಗಲು ಪ್ರಯಾಣ ಮಾಡುವ ಭಾಗ್ಯ….! ಕುಂದಾಪುರದಿಂದಲೇ ಬೆಂಗಳೂರಿಗೆ ಬಸ್ಸು ಹತ್ತಬೇಕಾಗಿತ್ತು ನಮ್ಮ ಸಂಸಾರ. ಆದರೆ, ಊರಿಗೆ ಊರೇ ಬೆಂಗಳೂರಿಗೆ ಹೊರಟು ನಿಂತಂತಿತ್ತು.! ಯಾವ ಬಸ್ಸಿನಲ್ಲೂ ಸೀಟು ನಾಸ್ತಿ. ಸೀಟಿಗೆ ಆರುನೂರು ಕೊಟ್ಟರೂ ಇಲ್ಲ. ಹಾಗೆ ಎಲ್ಲರನ್ನೂ ಶಪಿಸುತ್ತ ನಾವು ಬಂದಿದ್ದು ಮಂಗಳೂರು ಅಕ್ಕನ ಮನೆಗೆ. ಮರುದಿನ ಬೆಳಗಿನ ಜಾವವೇ ಎದ್ದು ನಾವು ಹತ್ತಿದ್ದು ಮಂಗಳೂರು-ಯಶವಂತಪುರ ಟ್ರೈನಿಗೆ. ಎರಡೂವರೆ ಸೀಟು- ನಾವು ಕೊಟ್ಟ ಕಾಸು ಕೇವಲ 254 ರೂಪಾಯಿ. ಎಲ್ಲಕ್ಕಿಂತ ಹೆಚ್ಚಾಗಿ ನಮಗ...