ಸತ್ಯಜಿತ್ ರೇ ಕಥೆ ಬರೆಯಲು ಶುರು ಮಾಡಿದ್ದು....

ದೇಶ ಕಂಡ ಅತ್ಯಂತ ಅಪರೂಪದ ಚಿತ್ರ ಬ್ರಹ ಸತ್ಯಜಿತ್ ರೇ. ಅವರಿಗೊಂದು ಅಂತರ್ದೃಷ್ಟಿ ಇತ್ತು. ಅವರು ಕೊಟ್ಟ ಪಥೇರ್ ಪಾಂಚಾಲಿ, ಅಪುರ್ ಸಂಸಾರ್, ಅಪರಾಜಿತೊ, ಚಾರುಲತಾ ಚಿತ್ರಗಳೆಲ್ಲ ಇದಕ್ಕೆ ಜೀವಂತ ಸಾಕ್ಷಿ. ಶಾಂತಿನಿಕೇತನದ ರಬೀಂದ್ರನಾಥ್ ಠಾಗೋರ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡಿದ ಸತ್ಯಜಿತ್ ಮೊದಲು ಕೆಲಸಕ್ಕೆ ಅಂತ ಸೇರಿದ್ದು ಎಲ್ಲಿ ಗೊತ್ತೇ? ಒಂದು ಜಾಹೀರಾತು ಕಂಪೆನಿಯಲ್ಲಿ. ಅದರ ಹೆಸರು ಬ್ರಿಟಿಷ್ ಅಡ್ವರ್ಟೈಸಿಂಗ್ ಕಂಪೆನಿ. ಅಲ್ಲಿ ಜೂನಿಯರ್ ವಿಶ್ಯುವಲೈಸರ್ ರೇ. ಉದ್ಯೋಗಕ್ಕೆ ಅಂತ ಜಾಹೀರಾತು ಇದ್ದರೂ ಕೂಡ ಅವರ ನಿಜವಾದ ತುಡಿತ ಇದ್ದುದು ಫಿಲಂನಲ್ಲಿ. ಆದರೂ ಅವರು ಈ ವೃತ್ತಿಯಲ್ಲಿ ಮಾಡಿದ್ದು ಬರೋಬ್ಬರಿ ಹನ್ನೆರಡು ವರ್ಷ ಕೆಲಸ. ಮೊದಲ ಚಿತ್ರ ಮಾಡಲು ಹೊರಟ ಸತ್ಯಜಿತ್ ಬಳಿ ಹಣವೇ ಇರಲಿಲ್ಲ. ಅದಕ್ಕಾಗಿ ಅವರು ಪಶ್ಚಿಮ ಬಂಗಾಲ ಸರ್ಕಾರದಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಾರೆ. ಆ ಚಿತ್ರದ ಹೆಸರು; ಪಥೇರ್ ಪಾಂಚಾಲಿ! ಅಬ್ಬಾ ಅದು ಎಬ್ಬಿಸಿದ ಜನಪ್ರಿಯತೆಯ ಅಲೆಗೆ ದುಡ್ಡು ಕೊಟ್ಟ ರಾಜ್ಯ ಸರ್ಕಾರವೇ ಬೆರಗಾಯಿತು. ಇದು ರೇ ಅವರಿಗೆ ಅಂತಾರಾಷ್ಟ್ರೀಯವಾಗಿ ಖ್ಯಾತಿಯನ್ನು ತಂದುಕೊಟ್ಟಿತು. ಇದೆಲ್ಲದರ ನಡುವೆ ಇನ್ನೊಂದು ವಿಷಯ ನಿಮಗೆ ಹೇಳಬೇಕು. ಈ ಫಿಲಂಗಳ ಸಾಮ್ರಾಜ್ಯದಲ್ಲಿ ಮುಳುಗಿದ್ದಾಗಲೇ ಸತ್ಯಜಿತ್ ರೇ ಒಂದು ಪತ್ರಿಕೆಗೆ ಮರುಜೀವ ಕೊಟ್ಟಿದ್ದರು. ಅದರ ಹೆಸರು ಸಂದೇಶ್. ಮಕ್ಕಳ ಪತ್ರಿಕೆಯದು. ಸತ್...