ಕಿಟಕಿ...

ಒಂದು ಆಸ್ಪತ್ರೆಯ ವಿಶಾಲ ಕೊಠಡಿ. ಅಲ್ಲಿ ಇಬ್ಬರು ರೋಗಿಗಳು. ಇಬ್ಬರಿಗೂ ಗಂಭೀರ ಕಾಯಿಲೆ. ಒಬ್ಬನ ಹೆಸರು ಮನಸ್ಸು ಇನ್ನೊಬ್ಬನ ಹೆಸರು ತಮಸ್ಸು ಅಂತಿಟ್ಟುಕೊಳ್ಳೋಣ. ಮನಸ್ಸಿನ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಪ್ರತಿದಿನ ಮಧ್ಯಾಹ್ನ ತಾನಿದ್ದ ಬೆಡ್ ಮೇಲೆ ಆತ ಕುಳಿತುಕೊಳ್ಳುತ್ತಾನೆ. ನರ್ಸ್ ಬರುತ್ತಾಳೆ. ಬಂದು ಅವನ ಪುಪ್ಪುಸದಲ್ಲಿ ಸೇರಿದ್ದ ನೀರಿನ ಅಂಶವನ್ನು ತೆಗೆದು ಹಾಕುತ್ತಾಳೆ. ಈತನ ಹಾಸಿಗೆ ಇರುವುದು ಆ ರೂಮಿನ ಒಂದೇ ಒಂದು ಕಿಟಕಿಯ ಪಕ್ಕದಲ್ಲಿ. ಇನ್ನೊಂದು ತುದಿಯಲ್ಲಿ ಗೋಡೆಯ ಪಕ್ಕದಲ್ಲಿ ಇರುವವನು ತಮಸ್ಸು. ತನ್ನ ಹಾಸಿಗೆಯಲ್ಲಿ ಸದಾ ಕಾಲ ಮಲಗಿದಲ್ಲೇ ಇರಬೇಕು. ಬೆನ್ನು ಮೂಳೆಗೆ ಶಕ್ತಿಯೇ ಇಲ್ಲ. ಪ್ರತಿದಿನ ಮನಸ್ಸು ಮತ್ತು ತಮಸ್ಸು ಇಬ್ಬರೂ ಗಂಟೆಗಟ್ಟಳೆ ಮಾತನಾಡಿಕೊಳ್ಳುತ್ತಾರೆ. ಅವರು ಮಾತನಾಡಿಕೊಳ್ಳದ ವಿಷಯವಿಲ್ಲ. ತಮ್ಮ ಹೆಂಡತಿ, ಮಕ್ಕಳು, ಕುಟುಂಬ, ತಾವು ಮಾಡಿದ ಮನೆ-ಮಾರು, ತಮ್ಮ ಕೆಲಸ, ತಾವು ಕೆಲಸದಲ್ಲಿ ಇದ್ದಾಗ ಕಳೆದ ದಿನಗಳು, ರಜಾ ದಿನಗಳಲ್ಲಿ ತೆರಳಿದ ಪ್ರದೇಶಗಳು... ಹೀಗೆ ಅವರ ಮಾತಿನ ಲಹರಿ ಹರಿಯುತ್ತದೆ. ಅವರದೇ ಪ್ರಪಂಚವದು. ಪ್ರತಿ ಮಧ್ಯಾಹ್ನ ಮನಸ್ಸು ತನ್ನ ಬೆಡ್ ಮೇಲೆ ಕುಳಿತುಕೊಂಡು ಜೀವನ್ಮುಖಿಯಾಗುತ್ತಾನೆ. ತನ್ನ ಕಿಟಕಿಯ ಆಚೆ ನಡೆಯುತ್ತಿರುವ ವಿದ್ಯಮಾನಗಳನ್ನೆಲ್ಲ ಗೋಡೆಯ ಪಕ್ಕ ಮಲಗಿರುವ ತಮಸ್ಸಿಗೆ ಬಣ್ಣಿಸುತ್ತಾ ಹೋಗುತ್ತಾನೆ. ಅಲ್ಲಿ ನಡೆಯುತ್ತಿರುವ ಬದುಕಿನ ಪ್ರತಿಯೊಂದು ಕ್ಷಣವನ್ನೂ ತನ್ನ ರೂಮ್ಮೇಟ್ಗೆ...