ಪೋಸ್ಟ್‌ಗಳು

ಮೇ 10, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಾಜಿ ದಂಡೆಗಳ ಕಟ್ಟಿದವಳು...

ಇಮೇಜ್
ಆವತ್ತು ಅಮ್ಮ ಜಾಜಿ ಹೂವುಗಳನ್ನು ಕೊಯ್ಯಲು ಬೆಳಗಾತವೇ ಎದ್ದಿದ್ದಳು. ಎಂಟು-ಒಂಭತ್ತು ಗುಡ್ಡೆ ಜಾಜಿ ಗಿಡಗಳಲ್ಲಿ ವಿಪರೀತ ಹೂವು ಬಿಟ್ಟಿದ್ದವು. ಅಷ್ಟನ್ನೂ ಕೊಯ್ಯಲು ತಾಸುಗಟ್ಟಳೆ ಸಮಯ ಬೇಕಿತ್ತು. ರಾತ್ರಿಯೆಲ್ಲ ಪಿರಪಿರ ಅಂತ ಬರುತ್ತಿದ್ದ ಮಳೆ ಬೆಳಗಾತಾದರೂ ಅದೇ ಆಲಾಪನೆಯನ್ನು ಮುಂದುವರಿಸಿತ್ತು. ಬೆಳಕು ಹರಿಯುವುದಕ್ಕೂ ಮುಂಚೆಗೇ ಹೂವು ಕೊಯ್ಯುವುದಕ್ಕೆಂದು ಪೈಪೋಟಿ ಮಾಡುವಂತಿರಲಿಲ್ಲ. ತಾಸು ಎರಡು ಕಳೆದಮೇಲೇ ಮಿಟ್ಟಿಗಳು ಬಲಿತುಕೊಳ್ಳುತ್ತಿದ್ದವು. ಅದಕ್ಕೂ ಮುಂಚೆ ಕೊಯ್ಯಲು ಹೊಂಟರೆ ಮಿಟ್ಟಿಮಿಟ್ಟಿಮಿಟ್ಟಿ. ಪುಟ್ಪುಟಾಣಿ ಎಲೆಗಳ ನಡುವೆ ಅವಿತುಕೊಂಡು ಅಣಕಿಸುತ್ತಿದ್ದವು. ಅದಕ್ಕೆಂದೇ ಅಮ್ಮ ಬೆಳಗಿನ ತಿಂಡಿ-ಚಾ ಎಲ್ಲ ಮುಗಿಸಿಬಿಟ್ಟಿದ್ದಳು. ಮಳೆ ನೀರಿನಲ್ಲೇ ಕೂತ್ಕಂಡು, ಬೂದಿಗಳನ್ನು ಉಜ್ಜಿ ಉಜ್ಜಿ ಪಾತ್ರೆಗಳನ್ನೆಲ್ಲ ತೊಳೆದು ಹಾಕಿದ್ದಳು. ನಾ ಕಾಲೇಜಿಗೆ ಹೋಗೋದ್ರೊಳಗೆ ಒಂದಿಷ್ಟು ಜಾಜಿ ಹೂ ಕೊಯ್ದು ಅವನ್ನು ಕಟ್ಟಿನೂ ಕೊಡೋದು ಅವಳ ದಿನನಿತ್ಯದ ಕೆಲಸವಾಗಿತ್ತು. ಒಂಭತ್ತು ಗಂಟೆಗಳೊಳಗೆ ಎರಡು ಮೂರು ಸಾವಿರ ಹೂಗಳನ್ನು ಕೊಯ್ದು ಅವನ್ನು ಬಾಳೆಬಳ್ಳಿಯಲ್ಲಿ ಪೋಣಿಸಿ ಪೋಣಿಸಿ ಒಪ್ಪ ಮಾಡಿ ಕೊಟ್ಟರೆ ಅದನ್ನು ಲ್ಯಾಸ್ ನಾಯ್ಕರ ಅಂಗಡಿಯಲ್ಲಿಟ್ಟು ಕಾಲೇಜಿಗೆ ಹೋಗ್ತಿದ್ದೆ.  with marimaga ಉದ್ದನೆಯ ಕೊಡೆಯನ್ನು ಕತ್ತಿನ ಮಧ್ಯೆ ಇಟ್ಟುಕೊಂಡು ಒಂದು ಕೈಯಲ್ಲಿ ಬಿಂದಿಗೆ ಇಟ್ಟುಕೊಂಡು ಸುಮಾರು ಎರಡು ಸಾವಿರ ಜಾಜಿಗಳನ್ನು ಆವತ್ತವಳ...