ಪೋಸ್ಟ್‌ಗಳು

2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗುರುಗೆ ಅಮ್ಮನೇ ಲಾಸ್ಟ್ ವರ್ಡ್...

ಇಮೇಜ್
(ವಿ.ಕೆ.ಮೂರ್ತಿ ಸಂದರ್ಶನದ ಕೊನೆಯ ಕಂತು) ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಬೇಕು ಎಂಬ ಮಹದಾಸೆ ನನಗಿತ್ತು. ಆದರೆ ಯಾವ ನಿರ್ದೇಶಕರೂ ಆಸಕ್ತಿ ವಹಿಸಲಿಲ್ಲ. ಕೊನೆಯಲ್ಲಿ ನನಗೊಂದು ಪಾತ್ರ ಅಂತ ಕೊಟ್ಟವರು ರಾಜೇಂದ್ರ ಸಿಂಗ್ ಬಾಬು ಅವರು. ಅವರ 'ಹೂವು ಹಣ್ಣು' ಚಿತ್ರದಲ್ಲಿ ಅಭಿನಯ ಮಾಡಿದೆ. ಅದನ್ನು ಬಿಟ್ಟರೆ ಬೇರೆ ಯಾರೂ ನನ್ನನ್ನು ಕರೆಯಲಿಲ್ಲ. ನನ್ನ ಸಂದರ್ಶನಕ್ಕೆ ಬಂದ ಅನೇಕರು ಇಂತಹ ಪ್ರಶ್ನೆಗಳನ್ನೇ ಕೇಳಿದ್ದಾರೆ. ನೀವು ಈ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿ ಅಂತ ಹೇಳುತ್ತಿದ್ದೆ. ನೀವೆ ಒಂದು ಸಿನೆಮಾ ನಿರ್ದೇಶನ ಮಾಡಿ ಎಂದು ಕೆಲವರು ನನಗೆ ಆಫರ್ ಕೊಟ್ಟಿದ್ದಿದೆ. ಆದರೆ, ನಾನು ಆ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ. ಕ್ಯಾಮರಾಮನ್ ಹೆಚ್ಚು ಕ್ರಿಯೇಟಿವ್... ಒಂದು ವಿಷಯ ನಿಮಗೆ ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ಒಬ್ಬ ನಿರ್ದೇಶಕನಿಗಿಂತ ಒಬ್ಬ ಕ್ಯಾಮೆರಾಮನ್ ಹೆಚ್ಚು ಕ್ರಿಯೇಟಿವ್ ಆಗಿರುತ್ತಾನೆ. ಆತ ಶೂಟಿಂಗ್ ಮಾಡುವಾಗ ಅತ್ಯಂತ ಡೆಡಿಕೇಟ್ ಆಗಿ, ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ 9.30ಕ್ಕೆ ಸ್ಟುಡಿಯೋಗೆ ಶೂಟಿಂಗ್ ಮಾಡೋಕೆ ಅಂತ ಎಂಟರ್ ಆದ್ರೆ ಸಂಜೆ 6.30 ತನಕ ಅವನ ಮನಸ್ಸು, ದೇಹ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಒಂದು ನಿಮಿಷವೂ ಪುರುಸೊತ್ತು ಇರುವುದಿಲ್ಲ. ಮೋಸ್ಟ್ ಹಾರ್ಡ್ ವರ್ಕಿಂಗ್ ಪರ್ಸನ್ ಅಂದ್ರೆ ಕ್ಯಾಮರಾಮನ್. ಇದೆಲ್ಲರ ಜೊತೆಗೆ ಕ್ಯಾಮರಾಮನ್ ಒಂದು ಸನ್ನಿವೇಶದ ಬಗೆಗಿನ ನಿರ್ಧಾರವನ್ನು...

ಗುರುದತ್-ಮೂರ್ತಿ ಸೂಪರ್ ಜೋಡಿ

ಇಮೇಜ್
ಐ ವಾಂಟು ವರ್ಕ್ ವಿದ್ ಯು ಸರ್! ಆಗ ಒಂದೊಂದು ಫಿಲ್ಮ್ ಶೂಟಿಂಗ್ ಮುಗಿದ ಮೇಲೂ ಒಂದು ಎರಡು ತಿಂಗಳು ಬ್ರೇಕ್ ಇರುತ್ತಿತ್ತು. ಈ ಬಿಡುವಿನ ಸಂದರ್ಭದಲ್ಲಿ ನಾನೊಂದು ಫಿಲ್ಮ್ ನೊಡಿದ್ದೆ; ಅಮ್ರಪಾಲಿ ಅಂತ. ಅದರ ಫೋಟೋಗ್ರಫಿ ಬ್ಯುಟಿಫುಲ್. ಇಂಗ್ಲಿಷ್ ಪಿಕ್ಚರ್ಗೆ ಫೋಟೊಗ್ರಫಿ ಮಾಡಿದಂತಿತ್ತು. ಪಾಲಿ ಮಿಶ್ರಿ ಅಂತ ಅದರ ಫೋಟೋಗ್ರಾಫರ್. ಪ್ರಕಾಶ್ ಸ್ಟುಡಿಯೋದಲ್ಲಿ ನೂರು ರೂ. ಸಂಭಾವನೆ ಪಡೆಯಲು ಹೋಗಿದ್ದಾಗ, ನನ್ನ ಜೂನಿಯರ್ ಕರೆದು, "ಪಾಲಿ ಮಿಶ್ರಿ ತುಮ್ಕೊ ಬುಲಾರಹೇ ಜಾವೋ' ಎಂದ. ನನಗೆ ಭಾರೀ ಅಚ್ಚರಿ. "ಮಜಾಕ್ ಕರ್ ರಹೇ ಹೋ' ಅಂತ ಅವನನ್ನೇ ಬೈದೆ. ಆದರೆ, ಅದು ನಿಜವಾಗಿತ್ತು. ಇನ್ನೊಂದು ಸ್ಟುಡಿಯೊದಲ್ಲಿ ಅವರಿಗಾಗಿ ನಾನು ಕಾದೆ. ವೈಟ್ ಶರ್ಟ್, ವೈಟ್ ಪ್ಯಾಂಟು ಹಾಕ್ಕೊಂಡ ಸ್ಮಾರ್ಟ್ ಆಜಾನುಬಾಹು ಪಾರ್ಸಿ ಬಂದು ಕಾರಿನಿಂದ ಇಳಿದರು. ನನ್ನನ್ನು ನೋಡಿ "ಆರ್ ಯೂ ಕೃಷ್ಣಮೂರ್ತಿ?' ಅಂತ ಕೇಳಿದರು. ನನಗೋ ಆಶ್ಚರ್ಯ. "ಐ ಹರ್ಡ್ ಯು ವಾಂಟು ವರ್ಕ್ ವಿದ್ ಮೀ?'' ಎಂದು ಕೇಳಿದರು. "ಯೆಸ್ ಸರ್! ಇಟ್ಸ್ ಮೈ ambition ಸರ್'' ಅಂದೆ. ಕಮಾನ್ ಅಂತ ಒಳಗಡೆ ಕರ್ಕೊಂಡು ಹೋದರು. ನನಗೆ ಮಾತೇ ಬಂದಾಗಿ ಹೋಗಿತ್ತು. ಆವತ್ತು ಬೆಳಗಿಂದ ಸಂಜೆ ತಂಕ ಅವರ ಜೊತೆ ಕೆಲಸ ಮಾಡಿದೆ. ಸಂಜೆ ನನ್ನ ಕರೆದು ಹೇಳಿದರು, "ನನ್ನ ಜೊತೆ ಇಲ್ಲಿ ತನಕ 23 ಜನ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರು, ನೀನು 24ನೇಯವನು. ಯು ಆರ...

ಫೋಟೋಗ್ರಫಿ ಕಲಿಸಲು ಅಡ್ವೋಕೇಟ್...!!

ಇಮೇಜ್
(ವಿ.ಕೆ.ಮೂರ್ತಿ ಅಂದ ಕೂಡಲೇ ಕಾಗಜ್ ಕೆ ಫೂಲ್, ಪ್ಯಾಸಾ, ಪಾಕೀಜಾ... ಇವರ ಕಟ್ಟಾ ದೋಸ್ತ್ ಗುರುದತ್... ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಡೀ ಇಂಡಿಯಾಕ್ಕೆ ಮೊಟ್ಟಮೊದಲ ಸಿನೆಮಾಸ್ಕೋಪ್ ಸಿನೆಮಾ (ಕಾಗಜ್ ಕೆ ಫೂಲ್) ಕೊಟ್ಟವರು, ಕಪ್ಪು-ಬಿಳುಪು ಫೋಟೋಗ್ರಫಿಗೆ ಹೊಸ ಭಾಷ್ಯ ಬರೆದವರು, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾದವರು... ವೆಂಕಟರಾಮ ಕೃಷ್ಣಮೂರ್ತಿ ಅವರೊಂದಿಗೆ ಕೆಲ ಕಾಲ ಕಳೆದರೆ ಹೇಗೆ? ತುಂಬ ಭಯದಿಂದಲೇ ನಮ್ ಟೀಮ್ ಅವರ ಮನೆಗೆ ಭೇಟಿ ಕೊಟ್ಟಿತು. ನಮಗೆ ನಿಜಕ್ಕೂ ಅಚ್ಚರಿ. ಯಾವ ಗತ್ತು-ಗೈರತ್ತೂ ಇಲ್ಲದೇ ಚಿಕ್ಕ ಮಗುವಿನಂತೆ ನಮ್ಮ ಅವರು ಮಾತನಾಡಿದ್ದು ಬರೋಬ್ಬರಿ ಒಂದೂವರೆ ತಾಸು...! ವಾಯಲಿನ್ ಕಲಿತದ್ದು, ನಟನಾಗಬೇಕು ಅಂದುಕೊಂಡಿದ್ದು, ಫೋಟೋಗ್ರಫಿ ಶುರು ಮಾಡಿದ್ದು, ಮುಂಬೈ ಸಿನೆಮಾ ಜಗತ್ತಿನ ಬಾಗಿಲು ತಟ್ಟಿದ್ದು, ಗುರುದತ್ ಜೊತೆ ಸೇರ್ಕೊಂಡು ಮಾಸ್ಟರ್ ಪೀಸ್ ಗಳನ್ನು ಕೊಟ್ಟಿದ್ದು... ಎಲ್ಲವನ್ನೂ ಅವರು ಮಾತನಾಡಿದರು. ಇಷ್ಷಾದರೂ ಅವರ ಜೊತೆ ಇನ್ನೂ ಮಾತನಾಡಬೇಕು ಎಂಬ ಆಸೆ ನಮಗೆ. ಕೊನೆಗೆ ಅವರೇ ನಮ್ಮನ್ನೆಲ್ಲ ನಿಲ್ಲಿಸಿ ಫೋಟೋ ತೆಗಿದಿದ್ದು... ಹೀಗೆ ಕಳೆದ ಕೆಲ ಆಪ್ತ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಈ ಅಂತರಂಗದ ಮಾತುಕತೆಯ ಮೊದಲ ಭಾಗ ಇದು...) ಆ್ಯಕ್ಟರ್ ಆಗಲು ಹೊರಟು... ನನಗೆ ನಾಟಕವೆಂದರೆ ಬಹಳ ಇಷ್ಟ. ಆಗಿನ ಕಾಲಕ್ಕೆ ನಾನು ವೃತ್ತಿಪರ ನಾಟಕ ಕಂಪೆನಿಗೆ ಹೊರಟು ಹೋಗಿದ್ದೆ. ಆಗಿನ...

ದೇವಲೋಕದ ಬಾಗಿಲಲ್ಲಿ ನಿಂತು…

ಇಮೇಜ್
ನೀವು ಯಾವುದಾದರೂ ಪೌರಾಣಿಕ ಚಿತ್ರಗಳಲ್ಲಿ ಮೋಡಗಳ ರಾಶಿಯ ನಡುವೆ ದೇವರು ಪ್ರತ್ಯಕ್ಷ ಆಗುವುದನ್ನು, ಹಾಗೆ ಪ್ರಯಾಣ ಮಾಡುವುದನ್ನು ನೋಡಿರಬಹುದು. ಹಾಗೊಂದು ಮೋಡಗಳ ರಾಶಿ ಕೈಗೇ ನಿಲುಕಿ ಬಿಟ್ಟರೆ ಹೇಗಿರಬೇಡ? ಇಲ್ಲ, ನನ್ನ ಕೈಗೇನೂ ನಿಲುಕಿಲ್ಲ. ಆದರೆ, ಸಾಲು-ಸಾಲು ಪರ್ವತಗಳ ಮೇಲಿನಿಂದ ಹಿಂಡು-ಹಿಂಡು ಮೋಡಗಳ ರಾಶಿ ತೇಲಿ ತೇಲಿ ಹೋಗುವ ದೃಶ್ಯವನ್ನು ಕಂಡು ಮೂಕವಿಸ್ಮಿತರಾಗುವ ಭಾಗ್ಯ ಲಭಿಸಿದ್ದು ಕಳೆದ ವಾರ (ಅ.20.2010). ಸೆಪ್ಟೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಮಂಗಳೂರಿಂದ ಬೆಂಗಳೂರಿಗೆ ರಸ್ತೆ ಮೂಲಕ ಪ್ರಯಾಣ ಮಾಡಿದಾಗ ಶಿರಾಡಿ ಘಾಟ್ ಸೊಂಟದ ನಡುವೆ ನಿಂತಿದ್ದಾಗ ಬೆಟ್ಟದ ತುದಿಯಲ್ಲಿ ರೈಲು ಹರಿದು ಹೋಗುತ್ತಿದ್ದ ದೃಶ್ಯ ಕಂಡು ಆನಂದಕ್ಕೆ ಪಾರವೇ ಇಲ್ಲದಂತೆ ಕುಣಿದಾಡಿದ್ದನ್ನು ಚಂದ್ರಮುಖಿ ಯಲ್ಲಿ ಬರೆದಿದ್ದೆ. ಇನ್ನೊಂದು ತಿಂಗಳು ಕಳೆಯುವುದರೊಳಗೆ ಅದೇ ರೈಲಿನಲ್ಲಿ ಹಗಲು ಪ್ರಯಾಣ ಮಾಡುವ ಭಾಗ್ಯ….! ಕುಂದಾಪುರದಿಂದಲೇ ಬೆಂಗಳೂರಿಗೆ ಬಸ್ಸು ಹತ್ತಬೇಕಾಗಿತ್ತು ನಮ್ಮ ಸಂಸಾರ. ಆದರೆ, ಊರಿಗೆ ಊರೇ ಬೆಂಗಳೂರಿಗೆ ಹೊರಟು ನಿಂತಂತಿತ್ತು.! ಯಾವ ಬಸ್ಸಿನಲ್ಲೂ ಸೀಟು ನಾಸ್ತಿ. ಸೀಟಿಗೆ ಆರುನೂರು ಕೊಟ್ಟರೂ ಇಲ್ಲ. ಹಾಗೆ ಎಲ್ಲರನ್ನೂ ಶಪಿಸುತ್ತ ನಾವು ಬಂದಿದ್ದು ಮಂಗಳೂರು ಅಕ್ಕನ ಮನೆಗೆ. ಮರುದಿನ ಬೆಳಗಿನ ಜಾವವೇ ಎದ್ದು ನಾವು ಹತ್ತಿದ್ದು ಮಂಗಳೂರು-ಯಶವಂತಪುರ ಟ್ರೈನಿಗೆ. ಎರಡೂವರೆ ಸೀಟು- ನಾವು ಕೊಟ್ಟ ಕಾಸು ಕೇವಲ 254 ರೂಪಾಯಿ. ಎಲ್ಲಕ್ಕಿಂತ ಹೆಚ್ಚಾಗಿ ನಮಗ...

ಇದೆಂಥಾ ಬದುಕು?

ಇಮೇಜ್
ಆ ಮಗುವಿನ ಮೃತದೇಹದ ಮುಂದೆ ನಿಂತವನಿಗೆ ಇಡೀ ಜೀವವೇ ಜಗ್ಗಿದಂತಾಯಿತು. ಅದರ ಪಕ್ಕದಲ್ಲಿಯೇ ಅಪ್ಪ-ಅಮ್ಮ ತಲೆ ತಗ್ಗಿಸಿಕೊಂಡು ಕಣ್ಣೀರಾಗಿದ್ದರು. ಐದು ನಿಮಿಷ ಹಾಗೇ ನಿಂತು ಬಿಟ್ಟೆ. ಇಡೀ ದೇಹಕ್ಕೆ ಬಿಳಿ ಬಟ್ಟೆ ಸುತ್ತಿದ್ದ ಆ ಮಗು ಎರಡು ಮೊಳದಷ್ಟೂ ಉದ್ದವಿಲ್ಲ. ಮುಖದ ಚರ್ಮ ಎಷ್ಟು ತೆಳ್ಗಗಿದೆ ಎಂದರೆ ಅದು ರೇಷಿಮೆ ನೂಲಿನಂತೆ ಮುಖದ ಮೂಳೆಗಳಿಗೆ ಅಂಟಿಕೊಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬಹಳ ಹೊತ್ತು ನಿಲ್ಲಲಾಗಲಿಲ್ಲ. ಆ ಮನೆಯ ಹಾಲ್ ನಿಂದ ಈಚೆಗೆ ಬಂದು ಮಿತ್ರರ ಜೊತೆ ನಿಂತವನಿಗೆ ಮನಸ್ಸಿನ ತುಂಬಾ ವೇದನೆ-ಸಂಕಟ. ಬದುಕಿನ ತಕ್ಕಡಿಯಲ್ಲಿ ಎಲ್ಲರಿಗೂ ಸಮಪಾಲು ಇದ್ದಿದ್ದರೆ ಏನಾಗುತ್ತದೆ? ಒಬ್ಬರ ಜೀವನದಲ್ಲಿ ಅತೀವ ಯಾತನೆ, ಇನ್ನೊಬ್ಬರಿಗೆ ಮೆರೆಯುವಷ್ಟು ಸುಖ, ಉಲ್ಲಾಸ. ಜೀವನ ಎಲ್ಲರಿಗೂ ಸಹನೀಯವಾಗಿ ಯಾಕಿರುವುದಿಲ್ಲ? ಆವಾಗ ಜೀವನವೇ ಪರಿಪೂರ್ಣವಾಗುವುದಿಲ್ಲವೇ? ಗೊತ್ತಿಲ್ಲ. ನಾನು ನೋಡಿದ್ದು ನಿಜಕ್ಕೂ ಮಗುವಿನ ಮೃತ ದೇಹ ಅಲ್ಲ! ಮಗುವಿನ ಹಾಗೆ ಇದ್ದವಳು ಅವಳು. ಆಕೆಗೆ ಸುಮಾರು ಹತ್ತು ವರ್ಷ. ಆದರೆ ಇಡೀ ದೇಹದಲ್ಲಿ ಯಾವುದೇ ಬೆಳವಣಿಗೆ ಇಲ್ಲ. ಬೆನ್ನುಮೂಳೆ, ಮೆದುಳು, ಶ್ವಾಸಕೋಶ.... ಯಾವುದರಲ್ಲೂ ಬೆಳವಣಿಗೆ ಕಾಣಲೇ ಇಲ್ಲ. ಡಾಕ್ಟರು ಆರಂಭದಲ್ಲೇ ಹೇಳಿದ್ದರು ಈ ಮಾತುಗಳನ್ನು. ಮಗು ಬದುಕಿದರೆ ಹತ್ತು ವರ್ಷ ಬದುಕಬಹುದು ಎಂದ್ದಿದ್ದರು. ಹಾಗಂತ ಕರುಳ ಕುಡಿಯಲ್ಲವೇ ಅದು? ಅಂದಿನಿಂದ ಶುರುವಾಯಿತು ಅಪ್ಪ ಅಮ್ಮನ ಬದುಕಿನ ಹೊಸ ತಿರುವು. ಅಪ್ಪ...

ನಿತ್ಯವೂ ಓಡುವುದು ಮಂಗಳೂರು ರೈಲು...!

ಇಮೇಜ್
ಸೆಪ್ಟೆಂಬರ್ ತಿಂಗಳ ಮೂರನೇ ವಾರ. ಶಿರಾಡಿ ಘಾಟ್ ಹತ್ತಿ ಮಂಗಳೂರಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ಸಾಹಸಕ್ಕೆ ಕೈ ಹಾಕಿದೆವು ನಾವು ಮೂವರು ಸ್ನೇಹಿತರು. ಸುಮಾರು ಇಪ್ಪತ್ಮೂರು ಕಿ.ಮೀ. ಘಾಟ್! ಅಬ್ಬಾ! ದೇವರೇ ಗತಿ ಅಲ್ಲೇನಿದೆ ರಸ್ತೆ? ಪಕ್ಕದಲ್ಲೇ ಮೈಮೇಲೆ ಬರುವಂತೆ ಹಾದು ಹೋಗುವ ಟ್ಯಾಂಕರ್... ಒಂದೇ ಉಸಿರಿಗೆ ಮುಕ್ಕಾಲು ಭಾಗ ಘಾಟ್ ಏರಿದಾಗ ಬೆಟ್ಟದ ಹಸಿರು ಸಾಲಿನಲ್ಲಿ ಮಂಜಿನ ಹೊದಿಕೆ! ಕೆಳಗೆ ರಭಸದಿಂದ ಹರಿಯುತ್ತಿದೆ ನದಿ. ನಿಜಕ್ಕೂ ಮನಸ್ಸು ಒಮ್ಮೆಗೇ ಕುಣಿದಾಡಿತು. ಮೈ ತುಂಬ ತುಂಬಿಕೊಂಡಿದ್ದ ಆಯಾಸ ಮಾಯವಾಯಿತು. ಬೆಂಗಳೂರು-ಮಂಗಳೂರು ರೈಲು ಇಲ್ಲೇ ಬೆಟ್ಟದ ಮೇಲೆ ಹಾದು ಹೋಗುತ್ತದಲ್ಲವೇ? ನಮ್ಮೊಳಗೇ ಚರ್ಚೆಗೆ ತೊಡಗಿದೆವು. ಈಗ ರೈಲು ಬಂದಿದ್ದರೆ ಎಷ್ಟು ಚೆಂದ ಅಂದುಕೊಳ್ಳುತ್ತಾ ಕಣ್ಣು ಅಗಲಗೊಳಿಸಿ ನೋಡೇ ನೋಡಿದೆವು... ಹತ್ತೇ ನಿಮಿಷ! ಅಕೋ ಬಂದೇ ಬಿಟ್ಟಿತು ರೈಲು! ಬೆಟ್ಟದ ಇನ್ನೊಂದು ಹಾಸಿನಲ್ಲಿ ನಿಂತ ನಮಗೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ. ಸತ್ತೇ ಹೋಗುವಷ್ಟು ಖುಷಿ ಅಂತಾರಲ್ಲ? ಹಾಗೆ. ಅದೊಂದು ನಿಜಕ್ಕೂ ಅಪರೂಪದ ಕ್ಷಣ. ರೈಲು ಬರುವ ಹೊತ್ತಿಗೇ ನಾವಲ್ಲಿ ಇರಬೇಕೇ? ಹಸಿರು... ಹಸಿರು... ಪರ್ವತ ಶ್ರೇಣಿ ಅದರ ಮೇಲೆ ಮಂಜಿನ ಹೊದಿಕೆ... ಕೆಳಗೆ ನದಿಯ ರಭಸ... ರಸ್ತೆಯ ಈ ಕಡೆಯಲ್ಲೂ ಸಣ್ಣಗೆ ಇಳಿದಿದೆ ಬೆಳ್ನೊರೆಯಂಥ ಜಲಝರಿ! ಎಲ್ಲಿ ಹೋಯಿತು ರೈಲು? ಹಸಿರ ಸಂಪತ್ತಿನ ನಡುವೆ ಸಣ್ಣಗೆ ಸದ್ದ...

ಗುಡ್ ಮಾರ್ನಿಂಗ್ ಹೇಳದ ಪತ್ರಿಕೆಗಳು...!

ಇಮೇಜ್
ಈ ಮಂತ್ರಿ ಪದವಿ, ರಾಜಕೀಯದ ನಡುವೆ ನಿಮ್ಜೊತೆ ನೀವೇ ಮಾತಾಡಿಕೊಳ್ಳೋಕೆ ಎಷ್ಟು ಸಮಯ ಸಿಗತ್ತೆ? ನನ್ನ ದಿನಚರಿನೇ ಬೇರೆ. ನಾನು ಬೆಳಿಗ್ಗೆ ನಾಲ್ಕು ಗಂಟೆಗೆ ಏಳ್ತೇನೆ. ಬಹಳ ಜನ ಎದ್ದೇಳೊ ಹೊತ್ತಿಗೆ ನಂದು ಒಂದಷ್ಟು ಕೆಲಸ ಮುಗಿದಿರುತ್ತೆ. ವಾಕಿಂಗ್ ಮುಗ್ಸಿ ಐದೂವರೆಗೆ ವಾಪಾಸ್ ಬರ್ತೇನೆ. ಪ್ರತಿದಿನ 14 ಪೇಪರ್ ಓದ್ತೇನೆ. ಕನ್ನಡ ಪತ್ರಿಕೆಗಳಲ್ಲಿ ಕನ್ನಡ ಟೈಮ್ಸ್ ಆಫ್ ಇಂಡಿಯಾ(ಪತ್ರಿಕೆ ಈಗಿಲ್ಲ)ದಿಂದ ಶುರು. ಉದಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಇಂಗ್ಲಿಷ್ನಲ್ಲಿ MINTನಿಂದ ಶುರು ಮಾಡುತ್ತೇನೆ. ಅದರಲ್ಲಿ ಬಹಳ ಗಂಭೀರ ಲೇಖನ ಬರುತ್ತೆ. ಚಿಲ್ರೆ ರಾಜಕೀಯ ಬರೋದೇ ಇಲ್ಲ. ಇಟಿ, ಡಿಎನ್ಎ, ಕ್ರೋನಿಕಲ್. ಟೈಮ್ಸ್ ಆಫ್ ಇಂಡಿಯಾ, ಎಕ್ಸ್ಪ್ರೆಸ್, ಹೆರಾಲ್ಡ್, ಹಿಂದು. ಅಷ್ಟೊತ್ತಿಗೆ 7 ಗಂಟೆ. ಅಷ್ಟೊತ್ತು ನಂದೇ ಲೋಕ. ಬೆಳಗ್ಗೆ ಎದ್ದ ತಕ್ಷಣ ಜನರ ಸಂಪರ್ಕ, ಫೋನ್ ಅಂತ ಏನೂ ಇಲ್ಲ. ಈಗ ಪತ್ರಿಕೆಯಲ್ಲಿ ಒಂದು ವರದಿ ಬಂದಿರತ್ತೆ, ಹ್ಯುಮನ್ ಇಂಟ್ರೆಸ್ಟ್ ಆಗಿರೋದು... ಅಧಿಕಾರದಲ್ಲಿದ್ದವರು ನೀವು ಆ ಬಗ್ಗೆ ಯಾವ ರೀತಿಯ ಚಿಂತನೆ, ಕ್ರಮಕ್ಕೆ ಮುಂದಾಗ್ತೀರಿ ? ಇದಕ್ಕೆ ನಾನು ನಿಮಗೆ ಒಂದೇ ಒಂದು ಉದಾಹರಣೆ ಕೊಡ್ತೇನೆ. ಟೈಮ್ಸ್ ತುಮಕೂರು ಎಡಿಷನ್ನಲ್ಲಿ ಒಂದು ಸುದ್ದಿ ಬಂದಿತ್ತು. ತುರುವೇಕೆರೆ ಸಂಪಿಗೆಹಳ್ಳಿಯ ಶ್ರುತಿ ಎಂಬ ಹುಡ್ಗೀದು. ಬಲಗೈ ಇಲ್ಲ. ಎಡಗೈಯಲ್ಲಿ ಅಡಿಕೆ ಸುಲಿದು ಸಂಪಾದನೆ ಮಾಡೋದು ಎಲ್ಲ ಮಾಡ್ತಾಳೆ, ಒಂದೇ ಕೈಯಲ್ಲಿ ಸೈಕಲ್...

TRANSFER ಎಂದೂ ನೀಗದ ಬಾಯಾರಿಕೆ...

ಇಮೇಜ್
ವೈಯಕ್ತಿಕ ಮಟ್ಟದ ಚಾರಿತ್ರ್ಯ ಕಾಯ್ದುಕೊಂಡು ಬಂದಿದ್ದೀರಿ, ಅದರಿಂದಷ್ಟೇನೇ ಪ್ರಭಾವ ಬಳಸಲು ಸಾಧ್ಯವೇ? ಸಂಪುಟ ಮಟ್ಟದಲ್ಲಿ ಪ್ರಭಾವ ಬೀರುವುದು ಅಂದರೆ ಯಾವ ಮಟ್ಟದಲ್ಲಿ ಅಂತ. ಯಾಕಂದರೆ ಇರೋರೆಲ್ಲ ಉಸ್ತಾದ್ಗಳೇ ಆಗಿರೋವಾಗ ನಾನು ಯಾವ ರೀತಿ ಪ್ರಭಾವ ಬೀರೋಕೆ ಸಾಧ್ಯ? ಒಂದು ಕಥೆ ಹೇಳ್ತೀನಿ ನಿಮಗೆ ಕೇಳಿ; ಬಿಹಾರದಲ್ಲಿ ದರ್ಭಾಂಗ್ ಅಂತ ಒಂದು ಜಿಲ್ಲೆ ಇದೆ, ಬಹಳ ಕರ್ಮಠ ಹಿಂದುಗಳಿರುವ ಜಾಗ. ಅಲ್ಲಿಗೆ ಒಬ್ಬರು ಕ್ರಿಶ್ಚಿಯನ್ ಪಾದ್ರಿಯನ್ನು ಕಳಿಸಿದರು. ಹತ್ತು ವರ್ಷ, 15 ವರ್ಷ ಆದರೂ ಒಂದೇ ಒಂದು ಕನ್ವರ್ಶನ್ ರಿಪೋರ್ಟ್ ಬರ್ಲಿಲ್ಲ. ಪಾದ್ರಿ ಅವರಿಗೆ ಕಾರಣ ಕೇಳಿ ಪತ್ರ ಹೋಯಿತು. ಪುಣ್ಯ ನಾನಿನ್ನೂ ಹಿಂದೂ ಆಗಿಲ್ವಲ್ಲ ಅಂತ ಪಾದ್ರಿ ಉತ್ತರಿಸಿದರು. ಸೋ, ನಾನು ಪ್ರಭಾವ ಬೀರ್ತೀನೋ ಗೊತ್ತಿಲ್ಲ. ನಾನು ಅವರ ಪ್ರಭಾವಕ್ಕೊಳಗಾಗಿಲ್ವಲ್ಲ, ಅದು ಗ್ರೇಟೆಸ್ಟ್ ಥಿಂಗ್ ಅಂದ್ಕೋತೀನಿ. ಕೆಲವು ನೀತಿಗಳ ಮಟ್ಟದಲ್ಲಿ ನಿಮ್ಮ ಸರ್ಕಾರ ಚೇಂಜಸ್ ತರಬೋದಿತ್ತಲ್ಲವಾ? ಉದಾಹರಣೆಗೆ ಲೋಕಾಯುಕ್ತ... ಹಿಂದೆ ಲೋಕಾಯುಕ್ತಕ್ಕೆ ರಾಮಕೃಷ್ಣ ಹೆಗಡೆ ಸರ್ಕಾರ ಹೆಚ್ಚಿನ ಅಧಿಕಾರ ಕೊಟ್ಟಿತ್ತು. ಆದರೆ 6 ತಿಂಗಳೊಳಗೆ ಸೈಲೆಂಟ್ ಆಗಿ ಅದನ್ನು ವಾಪಸ್ ತಗೊಂಡ್ರು. ಅಂತಹುದೊಂದು ಪ್ರೆಷರ್ ಇತ್ತು. ಯಾವುದೇ ಅಧಿಕಾರಯುಕ್ತ ರಾಜಕಾರಣಿ ವೇದಿಕೆಯ ಮೇಲೆ ಮಾತು ಚೆನ್ನಾಗಿ ಆಡ್ತಾನೆ. ಆದ್ರೆ ಅಧಿಕಾರ ಕೊಡುವ ಪ್ರಸಂಗ ಬಂದಾಗ ಅದಕ್ಕೆ ಒಪ್ಪೋದಿಲ್ಲ ಎನ್ನೋದು ಇವತ್ತಿನ ಸ್ಥಿತಿ. ಬಿಜೆಪಿ ಅಧಿಕಾರಕ್...

ಕೋತಿಗೆ ಹೆಂಡ ಕುಡಿಸಿ, ಚೇಳಿನಿಂದ ಕುಟುಕಿದಂತೆ ರಾಜಕೀಯ.....

ಇಮೇಜ್
(ಇದು ಕೆಲ ತಿಂಗಳ ಹಿಂದೆ ಹುಟ್ಟಿಕೊಂಡ ಚಿಂತನೆ. ನಾವು ಕೆಲವು ಮಿತ್ರರು, ಪತ್ರಕರ್ತರು ನಮ್ಮ ನಡುವಿನ ಅಪರೂಪದ ವ್ಯಕ್ತಿಗಳನ್ನು, ಹಿರಿಯರನ್ನು ಆಗಾಗ ಭೇಟಿ ಮಾಡಿ ಅವರ ಅನುಭವಗಳಲ್ಲಿ, ಅವರ ಅರಿವಿನಲ್ಲಿ ನಾವು ಮಿಂದರೆ ಹೇಗೆ ಎಂಬ ಯೋಚನೆ ಮಾಡಿದೆವು. ಹಾಗೆ ಕೆಲವರನ್ನು ಪಟ್ಟಿ ಮಾಡಿಕೊಂಡು ಮೊದಲು ಭೇಟಿ ಮಾಡಿದ್ದು ಬಿಜೆಪಿ ಸರ್ಕಾರದಲ್ಲಿ 'ಭಿನ್ನರು' (ಭಿನ್ನಮತೀಯರಲ್ಲ!) ಎಂದೇ ಗುರುತಿಸಿಕೊಂಡ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಸುರೇಶ್ ಕುಮಾರ್ ಅವರನ್ನು. ಒಂದು ಬೆಳಿಗ್ಗೆ ಅವರ ಸರ್ಕಾರಿ ನಿವಾಸಕ್ಕೇ ನಮ್ಮ ಲಗ್ಗೆ. ಅವರ ಸಹಾಯಕರು ನಮ್ಮನ್ನು ಅನುಮಾನದಿಂದಲೇ ''ನಿಮಗೆ ನಿಜಕ್ಕೂ ಏನು ಕೆಲಸ ಆಗಬೇಕು'' ಅಂತಲೇ ಕೇಳುತ್ತಿದ್ದರು. ನಮಗೆ ಬೇಕಿದ್ದು ಸಚಿವರ ಸಮಯ ಅಷ್ಟೆ! ತಮ್ಮೆಲ್ಲ ಕೆಲಸಗಳ ನಡುವೆ ಸುರೇಶ್ ಕುಮಾರ್ ಅವರ ಜೊತೆ ನಾವು ಕಳೆದಿದ್ದು ಸುಮಾರು ಒಂದು ತಾಸು. ಯಾವುದೇ ಭಿಡೆ ಇಲ್ಲದೇ ರಾಜಕಾರಣ, ರಾಜಕಾರಣಿಗಳ ಏಕಾಂಗಿತನ, ಮನೆ-ಸಂಸಾರ, ಓದು-ಬರಹ, ಅನುಭವ.... ಹೀಗೆ ಸಾಗಿತ್ತು ಮಾತು... ಅದನ್ನಿಲ್ಲಿ ಸಂಕ್ಷಿಪ್ತವಾಗಿ ಕೊಟ್ಟರೂ ಮೂರು ಕಂತು ಬೇಕು. ಮೊದಲ ಕಂತು ಇಲ್ಲಿದೆ..) ರಾಜಕಾರಣಿಗಳಿಗೆ ಏಕಾಂಗಿತನ ಅನ್ನೋದು ಇರತ್ತಾ? ಅವರ ಖಾಸಗಿ ಬದುಕು ಹೇಗಿರತ್ತೆ? ಅವರು ತಮ್ಮ ಮನಸ್ಸಿನ ಮಾತನ್ನು ಯಾರ ಬಳಿ ಹೇಳಿಕೊಳ್ತಾರೆ ? ಹೋದವಾರ ಟೈಮ್ಸ್ ಆಫ್ ಇಂಡಿಯಾ ಸಪ್ಲಿಮೆಂಟ್ ಓದ್ತಾ ಇದ್ದೆ. ಪ್ರತಿಯೊಬ್ಬ ರಾಜಕಾರಣಿ ಕೂಡ ...

ಕಿಟಕಿ...

ಇಮೇಜ್
ಒಂದು ಆಸ್ಪತ್ರೆಯ ವಿಶಾಲ ಕೊಠಡಿ. ಅಲ್ಲಿ ಇಬ್ಬರು ರೋಗಿಗಳು. ಇಬ್ಬರಿಗೂ ಗಂಭೀರ ಕಾಯಿಲೆ. ಒಬ್ಬನ ಹೆಸರು ಮನಸ್ಸು ಇನ್ನೊಬ್ಬನ ಹೆಸರು ತಮಸ್ಸು ಅಂತಿಟ್ಟುಕೊಳ್ಳೋಣ. ಮನಸ್ಸಿನ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಪ್ರತಿದಿನ ಮಧ್ಯಾಹ್ನ ತಾನಿದ್ದ ಬೆಡ್ ಮೇಲೆ ಆತ ಕುಳಿತುಕೊಳ್ಳುತ್ತಾನೆ. ನರ್ಸ್ ಬರುತ್ತಾಳೆ. ಬಂದು ಅವನ ಪುಪ್ಪುಸದಲ್ಲಿ ಸೇರಿದ್ದ ನೀರಿನ ಅಂಶವನ್ನು ತೆಗೆದು ಹಾಕುತ್ತಾಳೆ. ಈತನ ಹಾಸಿಗೆ ಇರುವುದು ಆ ರೂಮಿನ ಒಂದೇ ಒಂದು ಕಿಟಕಿಯ ಪಕ್ಕದಲ್ಲಿ. ಇನ್ನೊಂದು ತುದಿಯಲ್ಲಿ ಗೋಡೆಯ ಪಕ್ಕದಲ್ಲಿ ಇರುವವನು ತಮಸ್ಸು. ತನ್ನ ಹಾಸಿಗೆಯಲ್ಲಿ ಸದಾ ಕಾಲ ಮಲಗಿದಲ್ಲೇ ಇರಬೇಕು. ಬೆನ್ನು ಮೂಳೆಗೆ ಶಕ್ತಿಯೇ ಇಲ್ಲ. ಪ್ರತಿದಿನ ಮನಸ್ಸು ಮತ್ತು ತಮಸ್ಸು ಇಬ್ಬರೂ ಗಂಟೆಗಟ್ಟಳೆ ಮಾತನಾಡಿಕೊಳ್ಳುತ್ತಾರೆ. ಅವರು ಮಾತನಾಡಿಕೊಳ್ಳದ ವಿಷಯವಿಲ್ಲ. ತಮ್ಮ ಹೆಂಡತಿ, ಮಕ್ಕಳು, ಕುಟುಂಬ, ತಾವು ಮಾಡಿದ ಮನೆ-ಮಾರು, ತಮ್ಮ ಕೆಲಸ, ತಾವು ಕೆಲಸದಲ್ಲಿ ಇದ್ದಾಗ ಕಳೆದ ದಿನಗಳು, ರಜಾ ದಿನಗಳಲ್ಲಿ ತೆರಳಿದ ಪ್ರದೇಶಗಳು... ಹೀಗೆ ಅವರ ಮಾತಿನ ಲಹರಿ ಹರಿಯುತ್ತದೆ. ಅವರದೇ ಪ್ರಪಂಚವದು. ಪ್ರತಿ ಮಧ್ಯಾಹ್ನ ಮನಸ್ಸು ತನ್ನ ಬೆಡ್ ಮೇಲೆ ಕುಳಿತುಕೊಂಡು ಜೀವನ್ಮುಖಿಯಾಗುತ್ತಾನೆ. ತನ್ನ ಕಿಟಕಿಯ ಆಚೆ ನಡೆಯುತ್ತಿರುವ ವಿದ್ಯಮಾನಗಳನ್ನೆಲ್ಲ ಗೋಡೆಯ ಪಕ್ಕ ಮಲಗಿರುವ ತಮಸ್ಸಿಗೆ ಬಣ್ಣಿಸುತ್ತಾ ಹೋಗುತ್ತಾನೆ. ಅಲ್ಲಿ ನಡೆಯುತ್ತಿರುವ ಬದುಕಿನ ಪ್ರತಿಯೊಂದು ಕ್ಷಣವನ್ನೂ ತನ್ನ ರೂಮ್ಮೇಟ್ಗೆ...

ಕಡಲ ಹುಡುಗಿಯ ನೆನಪು

ಇಮೇಜ್
ನರನಾಡಿ ಯಲ್ಲೆಲ್ಲ ಸುಡುಮದ್ದು ತುಂಬಿಕೊಂಡ, ಪ್ರೀತಿ ಗೊತ್ತಿಲ್ಲದೆ ಅವುಡುಗಚ್ಚಿ ಕುಳಿತ ನಗರದಲ್ಲಿ ನನ್ನೂರ ಕಡಲ ಹುಡುಗಿ ಚಿರಯೌವನೆ ಕದನದಂಥ ಕಡಲ ಮುಂದೆ ಕೃಷ್ಣ ಸುಂದರಿ ಅಂತರ್ಮುಖಿ ಮೌನವೇ ಮತಾಪು ಕಿಬ್ಬೊಟ್ಟೆಗೆ ಒದ್ದು ಮಾತಾಗುತ್ತವೆ ಅವಳೊಡಲ ಬೇನೆ ಎರಡಕ್ಷರ ಕಲಿಯದವಳು ಭಾರವನ್ನೆಲ್ಲ ಎದೆಯೊಳಗಿಟ್ಟು ಸೆರಗ ಬಿಗಿದೆತ್ತಿ ಕಟ್ಟಿ ಕಡಲ ಹೂಗಳ ಹೊತ್ತು ದಂಡೇರಿ ಬರುವ ನಾಯಕಿ ರಕ್ತ ಮಾಂಸಗಳ ಮಾರ್ಕೆಟ್ಟಲ್ಲಿ ಮಾತು ಯುದ್ಧವಾಗಿ ಹಸಿಬಿಸಿ ಕನಸುಗಳು ಗಿರಕಿ ಹೊಡೆಯುತ್ತವೆ ಪ್ರೀತಿ ಕೊಂದು ಮಾತಾಡದ ಕಡಲ ಹುಡುಗಿ ಪ್ರಶ್ನೆಗಳಿಗೆ ಕ್ರಯಕಟ್ಟದ ಜೀವಿ ಮದಿರೆ ಹೀರಿ ನಂಜೇರಿದ ಈ ನಗರದ ಹುಡುಗರು ಇವಕ್ಕೆಲ್ಲಿ ಅರ್ಥವಾಗುತ್ತದೆ ನನ್ನೂರ ಕಡಲು ಅವಳ ಕಣ್ಣ ಉಗ್ರಾಣದೊಳಗೆ ಗೂಡು ಕಟ್ಟಿದ ನೋವು