ಗುಡ್ ಮಾರ್ನಿಂಗ್ ಹೇಳದ ಪತ್ರಿಕೆಗಳು...!



ಈ ಮಂತ್ರಿ ಪದವಿ, ರಾಜಕೀಯದ ನಡುವೆ ನಿಮ್ಜೊತೆ ನೀವೇ ಮಾತಾಡಿಕೊಳ್ಳೋಕೆ ಎಷ್ಟು ಸಮಯ ಸಿಗತ್ತೆ?
ನನ್ನ ದಿನಚರಿನೇ ಬೇರೆ. ನಾನು ಬೆಳಿಗ್ಗೆ ನಾಲ್ಕು ಗಂಟೆಗೆ ಏಳ್ತೇನೆ. ಬಹಳ ಜನ ಎದ್ದೇಳೊ ಹೊತ್ತಿಗೆ ನಂದು ಒಂದಷ್ಟು ಕೆಲಸ ಮುಗಿದಿರುತ್ತೆ. ವಾಕಿಂಗ್ ಮುಗ್ಸಿ ಐದೂವರೆಗೆ ವಾಪಾಸ್ ಬರ್ತೇನೆ. ಪ್ರತಿದಿನ 14 ಪೇಪರ್ ಓದ್ತೇನೆ. ಕನ್ನಡ ಪತ್ರಿಕೆಗಳಲ್ಲಿ ಕನ್ನಡ ಟೈಮ್ಸ್ ಆಫ್ ಇಂಡಿಯಾ(ಪತ್ರಿಕೆ ಈಗಿಲ್ಲ)ದಿಂದ ಶುರು. ಉದಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಇಂಗ್ಲಿಷ್ನಲ್ಲಿ MINTನಿಂದ ಶುರು ಮಾಡುತ್ತೇನೆ. ಅದರಲ್ಲಿ ಬಹಳ ಗಂಭೀರ ಲೇಖನ ಬರುತ್ತೆ. ಚಿಲ್ರೆ ರಾಜಕೀಯ ಬರೋದೇ ಇಲ್ಲ. ಇಟಿ, ಡಿಎನ್ಎ, ಕ್ರೋನಿಕಲ್. ಟೈಮ್ಸ್ ಆಫ್ ಇಂಡಿಯಾ, ಎಕ್ಸ್ಪ್ರೆಸ್, ಹೆರಾಲ್ಡ್, ಹಿಂದು. ಅಷ್ಟೊತ್ತಿಗೆ 7 ಗಂಟೆ. ಅಷ್ಟೊತ್ತು ನಂದೇ ಲೋಕ. ಬೆಳಗ್ಗೆ ಎದ್ದ ತಕ್ಷಣ ಜನರ ಸಂಪರ್ಕ, ಫೋನ್ ಅಂತ ಏನೂ ಇಲ್ಲ.

ಈಗ ಪತ್ರಿಕೆಯಲ್ಲಿ ಒಂದು ವರದಿ ಬಂದಿರತ್ತೆ, ಹ್ಯುಮನ್ ಇಂಟ್ರೆಸ್ಟ್ ಆಗಿರೋದು... ಅಧಿಕಾರದಲ್ಲಿದ್ದವರು ನೀವು ಆ ಬಗ್ಗೆ ಯಾವ ರೀತಿಯ ಚಿಂತನೆ, ಕ್ರಮಕ್ಕೆ ಮುಂದಾಗ್ತೀರಿ?
ಇದಕ್ಕೆ ನಾನು ನಿಮಗೆ ಒಂದೇ ಒಂದು ಉದಾಹರಣೆ ಕೊಡ್ತೇನೆ. ಟೈಮ್ಸ್ ತುಮಕೂರು ಎಡಿಷನ್ನಲ್ಲಿ ಒಂದು ಸುದ್ದಿ ಬಂದಿತ್ತು. ತುರುವೇಕೆರೆ ಸಂಪಿಗೆಹಳ್ಳಿಯ ಶ್ರುತಿ ಎಂಬ ಹುಡ್ಗೀದು. ಬಲಗೈ ಇಲ್ಲ. ಎಡಗೈಯಲ್ಲಿ ಅಡಿಕೆ ಸುಲಿದು ಸಂಪಾದನೆ ಮಾಡೋದು ಎಲ್ಲ ಮಾಡ್ತಾಳೆ, ಒಂದೇ ಕೈಯಲ್ಲಿ ಸೈಕಲ್ ಓಡಿಸಿಕೊಂಡು ಶಾಲೆಗೆ ಹೋಗ್ತಾಳೆ.... ಎಸ್ಎಲ್ಸಿ ಓದ್ತಾಳೆ ಅವಳಿಗೆ ಲೆಕ್ಚರ್ ಆಗ್ಬೇಕು ಅನ್ನೋಆಸೆ. ಈ ನ್ಯೂಸನ್ನ ಪೇಪರ್ನಲ್ಲಿ ಓದಿದವನೇ ಅವಳಿಗೆ ಫೋನ್ ಮಾಡಿಸಿ, ನಾನು ನಿನಗೆ ಓದಿಸ್ತೇನೆ, ನೀನು ಎಲ್ಲಿವರೆಗೆ ಓದ್ತಿಯೋ ಓದು ಅಂದೆ. ಮುಂದೆ ಸಂಪಿಗೆಗೆ ಹೋದಾಗ ಅವಳ ಮನೆಗೂ ಹೋದೆ. ಅದಕ್ಕೆ ಬೇಕಾದ ಅರೇಂಜ್ಮೆಂಟ್ ಕೂಡ ಮಾಡಿದ್ದೆ. ಈ ರೀತಿ ಸಣ್ಣ-ಪುಟ್ಟದಿಂದ ಆರಂಭಿಸಿ ಉಪಯೋಗ ಆಗುವಂತಹ ಕೆಲ್ಸ ಮಾಡಿದ್ದೇನೆ. ಪ್ರತಿದಿನ ಪೇಪರ್ ಓದೋವಾಗ ನೋಟ್ ಮಾಡ್ಕೋತೇನೆ, ಮತ್ತೆ ಕೆಲವು ಮುಖ್ಯ ಲೇಖನಗಳನ್ನ ಕಟ್ ಮಾಡಿ ಕಾರಲ್ಲಿ ಇಡ್ತೇನೆ. ಫ್ರೀಯಾಗಿ ಎಲ್ಲಾದರೂ ಹೋಗೋವಾಗ ಓದ್ತೇನೆ.

ಕನ್ನಡ ಮೀಡಿಯಾ ಕವರೇಜ್, ಅವು ಕೊಡುತ್ತಿರುವ ಫೋಕಸ್... ಇದೆಲ್ಲ ಹೇಗಿದ್ದರೆ ಚೆನ್ನ?
ಇನ್ನೂ ಕೂಡ ಗಂಭೀರ ವಿಚಾರವನ್ನು ಗಂಭೀರವಾಗಿ ಬರೀಬೇಕು. ಅಂತ ಗಂಭೀರ ವಿಚಾರಗಳಿಗೆ ಸ್ಪೇಸ್ ಇರಬೇಕು. ಇನ್ಫ್ಯಾಕ್ಟ್ ಪ್ರಜಾವಾಣಿಯವರು ಬಂದು ನನ್ನ ಸಂದರ್ಶನ ಮಾಡಿದ್ರು. ಏನ್ ಅನಿಸತ್ತೆ ನಮ್ಮ ಪೇಪರ್ ಬಗ್ಗೆ ಅಂತ ಕೇಳಿದ್ರು, ಇದು ಬಹಳ ಹಿಂದೆ. ಅವರ ಏಜೆಂಟ್ಗಳು ಬಂದಿದ್ದರು, ಬೇರೆ ಪೇಪರ್ಗೂ ನಮ್ಮ ಪೇಪರ್ಗೂ ಏನಿದೆ ವ್ಯತ್ಯಾಸ ಅಂತ. ನಾನು ಕೆಲವು ಸಲಹೆಗಳನ್ನೂ ಕೊಟ್ಟಿದ್ದೆ. ಆಬಳಿಕ ಕೆಲ ಬದಲಾವಣೆಗಳನ್ನೂ ಮಾಡ್ಕೊಂಡ್ರು. ನೀವು ಓದುಗರಿಗೆ ಏನು ಬೇಕೋ ಎಂಬುದನ್ನ ಯೋಚನೆ ಮಾಡಿ ಕೊಡಬೇಕು ಎಂಬುದು ನನ್ನ ನಿಲುವು. ದಿನಾ 14 ಪೇಪರ್ ಓದ್ತೇನೆ. ಒಂದೇ ಒಂದು ಪೇಪರ್ ಕೂಡ GOOD MORNING ಹೇಳಲ್ಲ. ಕಾಸು ಕೊಟ್ಟು ದುಃಖನೇ ತಂದ್ಕೋತೇನೆ. ಎಲ್ಲ ಪೇಪರ್ ಗಳಲ್ಲಿ ಇರೋದು GOOD MOURNING. ಆರೀತಿಯ ಶೀರ್ಷಿಕೆಗಳು, ಖುಷಿ ಕೋಡೋದಿಲ್ಲ. ಒಂದು ರೀತಿಯಲ್ಲಿ ಚೀತ್ಕಾರ. ಇವತ್ತು ಪತ್ರಿಕೆಯಲ್ಲಿ ನೋಡಿದೆ. ಕಿದ್ವಾಯಿಯಲ್ಲಿ ಐಸಿಯು ರೋಗಿ ಮೇಲೆ ಅತ್ಯಾಚಾರ. ಓದಿ ಶಾಕ್ ಆಯ್ತು. ಅದನ್ನೆಲ್ಲ ಪೇಪರ್ ಗಳದ್ದೇ ತಪ್ಪು ಅನ್ನೋಕೆ ಬರೋದಿಲ್ಲ. ಏನಾಗತ್ತೆ... ಬೆಳಿಗ್ಗೆ ಬೆಳಿಗ್ಗೇನೆ ಇಂತ ನ್ಯೂಸ್ ನೋಡಿದಾಗ ನಮ್ಮ ಇಡೀ ದಿನ ಹಾಳಾಗಿ ಹೋಗ್ತದೆ....ಅಬ್ದುಲ್ ಕಲಾಂ ಇಸ್ರೇಲ್ಗೆ ಹೋದ ದಿನ ಟೆಲ್ಅವೀವ್ ಸುತ್ತ ಬಾಂಬ್ ಸ್ಫೋಟ ಘಟನೆಗಳು ನಡೆದವು. ಆದ್ರೆ ಮಾರನೇ ದಿನ ಇವರು ನೋಡ್ತಾರಂತೆ ಪೇಪರ್ ಮುಖಪುಟದಲ್ಲಿ ಅದರ ಸುದ್ದಿನೇ ಇಲ್ಲ. ನಾಲ್ಕೋ ಐದನೇ ಪುಟದಲ್ಲಿ ನ್ಯೂಸ್ ಹುದುಗಿತ್ತು. ಫ್ರಂಟ್ ಪೇಜ್ನಲ್ಲಿ ಮರುಭೂಮಿಯನ್ನು ಗ್ರೀನ್ಲ್ಯಾಂಡ್ ಆಗಿ ಮಾಡಿದ ರೈತನ ಸಾಹಸಗಾಥೆ ಇತ್ತು. ಇದರ ಅರ್ಥ ಏನಂದ್ರೆ ನಮ್ಮಿಂದ ಯಾವತ್ತೂ ಒಂದು ಪಾಸಿಟಿವ್ ಮೆಸೇಜ್ ಕೊಡ್ಲಿಕ್ಕೆ ಸಾಧ್ಯ ಎಂಬುದು. ಮುಂಚೆ ಥರ್ಡ್ ಪೇಜ್ನಲ್ಲಿ ಬರ್ತಿದ್ದು ಈಗ ಫ್ರಂಟ್ ಪೇಜ್ ನಲ್ಲೇ ಇದೆ. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ನ್ಯೂಸ್ ಕೂಡ ಸೀರಿಯಲ್ ಆಗಿದೆ. ಎಲೆಕ್ಟ್ರಾನಿಕ್ ಮೀಡಿಯಾ ನೋಡೋದೇ ಕಮ್ಮಿಯಾಗಿಬಿಟ್ಟಿದೆ.


ಕನ್ನಡ ಮೀಡಿಯಾಕ್ಕೂ ಇಂಗ್ಲಿಷ್ ಮೀಡಿಯಾಕ್ಕೂ ಏನು ವ್ಯತ್ಯಾಸ ಅನಿಸತ್ತೆ?
ಇಂಗ್ಲಿಷ್ನಲ್ಲಿರುವ ವಿಸ್ತಾರ ಕನ್ನಡದಲ್ಲಿ ಇಲ್ಲ. ಸ್ಪರ್ಧೆ ಎಲ್ಲ ಕಡೆ ಇದೆ. ಇದಕ್ಕೆ ಒಂದು ಎಗ್ಸಾಂಪಲ್ ತಕಳ್ಳೋಣ; ನಾನು ಕನ್ನಡಪ್ರಭ ಓದ್ತೇನೆ. ಮುಂಚೆ ಸೆಂಟರ್ ಪೇಜ್ ಫೀಚರ್ ಆರ್ಟಿಕಲ್ ಇದ್ವು. ಈವಾಗ ಅಂತಾದ್ದು ಸಿಗೋದಿಲ್ಲ... ಪ್ರಜಾವಾಣಿಯಲ್ಲಿ ನೋಡಿ ಒಂದು 'ಸಂಗತ' ಅಂತ ಕಾಲಂ, ಗುಡ್ ಕಾಲಂ. ಕನ್ನಡಪ್ರಭ ಸತ್ಯ ಅವರನ್ನೇ ನೋಡ್ತೀನಿ, ಅವರು ವಾರದ ವ್ಯಕ್ತಿ ಅಂತ ಸಾಪ್ತಾಹಿಕದಲ್ಲಿ ಬರೀತಾರೆ. ಅದು ಚೇಂಜೇ ಆಗಿಲ್ಲ. ಮತ್ತ ಮತ್ತ ಅದೇ ವ್ಯಕ್ತಿಗಳು ಬರ್ತಾನೇ ಇದ್ದಾರೆ. ಹೊಸ ವ್ಯಕ್ತಿಯನ್ನು ತಿಳಿಯುವ ಪ್ರಯತ್ನ ಕಾಣುತ್ತಿಲ್ಲ. ಈಗ ಟೈಮ್ಸ್ ಆಫ್ ಇಂಡಿಯಾದವರದ್ದು, ರಾಜಕಾರಣಿಗಳಿಗೆ ಏಕಾಂತತೆ ಹೇಗೆ ಕಾಡತ್ತೆ? ಅದೊಂದು ಉತ್ತಮ ಅಧ್ಯಯನ. ಈ ರೀತಿ ಅಧ್ಯಯನಗಳು ಬೇಕು. ಸಾಪ್ತಾಹಿಕಗಳಂತೂ ಯಾವುದೂ ಚೆನ್ನಾಗಿಲ್ಲ. ಉದಯವಾಣಿ ಒಂದು ಕಾಲಕ್ಕೆ ಚೆನ್ನಾಗಿತ್ತು, ಎಚ್.ಎಸ್.ವೆಂಕಟೇಶ್ ಮೂರ್ತಿ ಕಾಲಮ್ಮು, ಅನಂತಮೂರ್ತಿ ಕಾಲಮ್ಮು... ಈಗ ಅದೂ ಇಲ್ಲ. ಹೇಳಿಕೊಳ್ಳುವ ಒಂದು ಒಳ್ಳೆ ಸಾಪ್ತಾಹಿಕ ಇಲ್ಲ. ಇಂಗ್ಲಿಷ್ನಲ್ಲಿ ಹಿಂದು ಮ್ಯಾಗಜಿನ್ ಚೆನ್ನಾಗಿವೆ. INDIAN EXPRESS ನಲ್ಲಿ ಎರಡು ಸಪ್ಲಿಮೆಂಟ್ ಬರತ್ತೆ, ಬಹಳ ಚೆನ್ನಾಗಿವೆ ಅವು. DNA ಸಾಪ್ತಾಹಿಕ ಚೆನ್ನಾಗಿಲ್ಲ. Deccan Herald, Deccan Chronicle ಓಕೆ. ಜೊತೆಗೆ ನಮಗೆ ಇನ್ನೊಂದು ಸಂಗತಿ ಗೊತ್ತಾಗಿ ಬಿಟ್ಟಿದೆ, ಜನ ಓದೋದಿಲ್ಲ ಎಂಬುದು, ಅವರ ಓದುವ ಪೀರಿಯಡ್ ಕಡಿಮೆಯಾಗಿ ಪತ್ರಿಕೆಯವರೂ ಕಡಿಮೆ ಮಾಡಿಬಿಟ್ಟಿದ್ದಾರೆ.

ಪತ್ರಿಕೆಗಳ ಆದ್ಯತೆ ಕೂಡ ಜಾಸ್ತಿಯಾಗಿದೆ...
ಚಿಲ್ರೆ ವಿಷ್ಯಗಳಿಗೆ ಪ್ರಾಧಾನ್ಯತೆ ಜಾಸ್ತಿಯಾಗಿದೆ. ಇದು ಬಲವಂತವಾಗಿ ನಾವೇ ಕಷ್ಟ ತಂದುಕೊಂಡಿರೋದು. ಒಳ್ಳೆ ಪೇಪರ್ ಇವೆಲ್ಲ ಯಾವುದೂ ಇಲ್ಲದೆ ನಡೀತಾ ಇರಬಹುದು.

ಸರಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಬುಲೆಟಿನ್ ತರೋಕಾಗಲ್ವ? ಸತ್ವಪೂರ್ಣವಾಗಿ?
ಸಮಗ್ರವಾಗಿ ತರಬೇಕು ನಿಜ. ಒಳ್ಳೆ ಐಡಿಯಾನೇ. ಆದರೆ ಈಗ ಸರಕಾರದ ಮ್ಯಾಗಸೀನ್ ಗಳಲ್ಲಿ ಯಾವುದೇ ಸೃಜನಶೀಲತೆ ಇಲ್ಲ. ನಾವು ಎಷ್ಟೋ ಬಾರಿ ಹೌಸ್ ಮುಂದೆ ವಾಷರ್ಿಕ ವರದಿ ಇಡ್ತೇವೆ. ಉಪ್ಪು-ಹುಳಿ-ಖಾರ ಇಲ್ಲದ ನಿಸ್ಸಾರವದು. ಯಾರೋ ಹೇಳ್ತಾರೆ, ಯಾರೋ ಬರೀತಾರೆ... ಅದಕ್ಕೊಂದು ಗುರಿಯೆಂಬುದಿಲ್ಲ.

ನಿಮ್ಮ ಬರವಣಿಗೆ ಬಗ್ಗೆ ಹೇಳಿ...
ಸಮಯ ಸಿಕ್ಕಾಗ, ವಾರಕ್ಕೊಂದು ಅಂಕಣ ಬರೀತಾ ಇದ್ದೇನೆ. ಅಂಕಣ ಸಂಕಲನ ಮಾಡಬೇಕು ಅಂತ ಸ್ನೇಹಿತರು ಪ್ರಯತ್ನ ಪಡ್ತಾ ಇದ್ದಾರೆ. ಆದರೆ ನಂಗೆ ಅಳುಕು. ಅದು ಪುಸ್ತಕ ಆಗೋದಕ್ಕೆ ಅರ್ಹತೆ ಇದ್ಯಾ ಇಲ್ವಾ ಅಂತ. ಪುಸ್ತಕ ಬರೆಯುವ ಯೋಚನೆ ಸದ್ಯಕ್ಕೆ ಇಲ್ಲ. ಆತ್ಮಕತೆನೂ ಇಲ್ಲ, ಆತ್ಮ ಪ್ರಲಾಪನೂ ಇಲ್ಲ.

ಸರ್, ಮತ್ತೆ ಮನೆ, ಮಕ್ಕಳು, ಫ್ಯಾಮಿಲಿ...ಅವರಿಗೆ ಈ ರಾಜಕಾರಣ ಖುಷಿಯೋ, ಬೇಸರವೋ...?
ಅವರಿಗೆ ಏನು ಮನಸ್ಸಿನಲ್ಲಿ ಇದ್ಯೋ ಗೊತ್ತಿಲ್ಲ. ಬೇಸರವಂತೂ ಇದೆ... ನನ್ನ ಮಗಳಿಗಂತೂ (ದಿಶಾ) ಒಂದುಕಾಲದಲ್ಲಿ ಬಹಳ ಬೇಸರ ಇತ್ತು. ಈಗ ಸ್ವಲ್ಪ ಕಡಿಮೆಯಾಗಿದೆ. ಅವಳೀಗ ಥರ್ಡ್ ಇಯರ್ ಮೆಡಿಸಿನ್ ಓದ್ತಾ ಇದ್ದಾಳೆ... ನನ್ನ ವೈಫೂ (ಸಾವಿತ್ರಿ-ಪತ್ರಕರ್ತರು) ಬೇರೆ ಫೀಲ್ಡ್ಲ್ ನಲ್ಲಿ ಇರೋದ್ರಿಂದ ಅಷ್ಟಾಗಿ ಅನಿಸಲ್ಲ. ಆದ್ರೆ ಇರೋಷ್ಟು ಕಾಲ ಬಹಳ ಸರಳವಾಗಿ ಚೆನ್ನಾಗಿದ್ದೇವೆ. ಊಟ ಒಟ್ಟಿಗೆ ಮಾಡ್ತೀವಿ. ವರ್ಷಕ್ಕೆ ಒಮ್ಮೆ ಹೊರಗೆ ಹೋಗ್ತೇವೆ..

ಅವರಿಗೆ ನಿಮ್ಮ ಬಗ್ಗೆ ಹೇಗೆ ಒಪೀನಿಯನ್? ನೀವು ಸರಳವಾಗಿದ್ದೀರಿ ಸರಿ, ಅವರು ಬೇರೆ ಮಿನಿಸ್ಟರ್ಗೆ ಹೋಲಿಸೋದು... ಅವರ ಜೊತೆ ಬೆರೆಯೋದು.... ಹೀಗೆ..
ನಮ್ಮ ಮನೆಯಲ್ಲಿ ಮಹಿಳೆಯರದ್ದೇ ಪ್ರಾಬಲ್ಯ. ತಾಯಿ, ಹೆಂಡ್ತ್ತಿ, ಮಗಳು..ಎಲ್ಲ ಹೆಣ್ಮಕ್ಕಳು. ಅಮ್ಮ ಸ್ಕೂಲ್ ಟೀಚರ್. 38 ವರ್ಷ ಟೀಚರ್ ಆಗಿದ್ರು. ಆಕೆನೇ ನನ್ನನ್ನೇ ಈ ಮಟ್ಟಕ್ಕೆ ತಂದಿದ್ದು. ನನ್ನ ಹೆಂಡ್ತಿ ಕೂಡ ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತೆಯಾಗಿದ್ದವರು. ಆಕೆಗೂ ಒಂದಷ್ಟು ವಿಷ್ಯ ಮೈಗೂಡಿತ್ತು. ಇದಲ್ಲದೆ ಎಲ್ಲ ಮಿನಿಸ್ಟರ್ ಒಟ್ಟಿಗೆ ಸೇರೋದೂ ಇಲ್ಲ. ಹೋಲಿಸೋದೂ ಇಲ್ಲ. ಆ ಪ್ರಮೇಯಗಳೂ ಬಂದಿಲ್ಲ. ಆ ವಿಷ್ಯದಲ್ಲಿ ನಾನು ವೆರಿ ಲಕ್ಕಿ.

ರಾಜಕಾರಣಿಗಳು ಮಾತಾಡೋವಾಗ ಇನ್ನಷ್ಟು ಡಿಪ್ಲಾಮೆಟಿಕ್ ಆಗಬೇಕು ಅನಿಸಲ್ವಾ... ಯಡಿಯೂರಪ್ಪನವರನ್ನೂ ಸೇರಿಸಿ...?
ರಾಜಕೀಯದ ಪರಿಭಾಷೆ ಬದಲಾಗಬೇಕು. ಇದು ಒಳ್ಳೆದಲ್ಲ. ಮೊದಲೇ ರಾಜಕಾರಣಕ್ಕೆ ಒಳ್ಳೆ ವ್ಯಕ್ತಿಗಳು ಬರ್ತಾ ಇಲ್ಲ. ಅವರು ಬರಬೇಕಿದ್ದರೆ ನಾವು ಮಾತಾಡುವ ರೀತಿ ಬದಲಾಯಿಸಬೇಕು. ಒಳ್ಳೆ ಭಾಷೆ ಉಪಯೋಗಿಸಬೇಕು. ಇದು ಖಂಡಿತ ಸಾಧ್ಯವಿದೆ. ನೆಹರು ಒಮ್ಮೆ ಸಿಮ್ಲಾದಲ್ಲಿ RSS ಧ್ವಜ ನೋಡಿ,I WILL CRUSH THIS rss ಅಂತ ಹೇಳಿದ್ರು. ಅದಕ್ಕೆ ನಮ್ಮ ಜನಸಂಘದ ಶ್ಯಾಮಪ್ರಸಾದ್ ಮುಖರ್ಜಿ ಉತ್ತರಿಸಿದ್ದು; We will crush this crushing mentality! ಅಂತಹ ಸ್ಟಾಂಡರ್ಡ್ ಬೇಕು. ಇವತ್ತು ಕೈಕಡಿ, ಕಾಲ್ಕಡಿ, ತಲೆತೆಗಿ... ಹೀಗೆ ಬೆಳೆದಿದೆ ಮಾತಿನ ವೈಖರಿ..



ಇಂಥ ಪದಗಳನ್ನು ಬಳಸೋದಕ್ಕಿಂತ ಸುಮ್ಮನಿರೋದೇ ಡಿಪ್ಲಾಮೆಟಿಕ್ ಅಲ್ವಾ? ಹೆಗಡೆಯವರು ವಾರಕ್ಕೊಂದು ದಿನ ಮೌನಾಚರಣೆ ಮಾಡ್ತಾ ಇದ್ರು...
ಖಂಡಿತ ಖಂಡಿತ. ಮೌನಕ್ಕೆ ಅದರದ್ದೇ ಆದ ಒಂದು ಸ್ಪೇಸ್ ಇದೆ. ಮೌನದಿಂದ ಬಹಳಷ್ಟು ಸಾಧಿಸಬಹುದು. ಬಹಳಷ್ಟು ಸಲ ನಗುವೇ ಉತ್ತರ ಆಗಬಹುದು. ಆರ್ಎಸ್ಎಸ್ ಮುಖ್ಯಸ್ಥರೊಬ್ಬರು 1984ಲ್ಲಿ ಒಂದು ಮಾತು ಹೇಳಿದ್ದರು.Freedom of speech includes freedom not to speak... ಎಷ್ಟು ನಿಜ ಅಲ್ವಾ?


(ಸಚಿವ ಸುರೇಶ್ ಕುಮಾರ್ ಅವರ ಅಂತರಂಗದ ಮಾತನ್ನು ಹೊರ ಹಾಕುವ ನಮ್ಮ ತಂಡದ ಪ್ರಯತ್ನದಲ್ಲಿ ಭಾಗಿಯಾದ ಕೆ.ವೆಂಕಟೇಶ್, ಬಿ.ಕೆ.ಗಣೇಶ್, ಸೋಮಶೇಖರ ಕಿಲಾರಿ ಮತ್ತು ರಾಜಲಕ್ಷ್ಮಿ ಕೋಡಿಬೆಟ್ಟು ಅವರಿಗೆ ಕೃತಜ್ಞತೆ- ಚಾಂದ್)

ಕಾಮೆಂಟ್‌ಗಳು

BKG ಹೇಳಿದ್ದಾರೆ…
ಸುರೇಶ್ ಕುಮಾರ್ ಜತೆಗಿನ ಮಾತುಕತೆ ಚೆನ್ನಾಗಿ ಮೂಡಿ ಬಂದಿದೆ. ಇಂಥ ಪ್ರಯತ್ನ ಮುಂದುವರೆಯಲಿ.
BKGANESH
chand ಹೇಳಿದ್ದಾರೆ…
ಥ್ಯಾಂಕ್ಯೂ ಬಿಕೆಜಿ... ಇಂಥ ಪ್ರಯತ್ನಗಳಿಗೆ ನಿಮ್ಮ ಬೆಂಬಲವೂ ಇರಲಿ. ಚಾವಡಿಯ ನಿರೀಕ್ಷೆಯಲ್ಲಿ..!

@ಥ್ಯಾಂಕ್ಯೂ ಉಮೇಶ್
ಸೂರ್ಯ ವಜ್ರಾಂಗಿ ಹೇಳಿದ್ದಾರೆ…
ಚೆನ್ನಾಗಿದೆ ಸರ್‌...ಇಂಥ ಹಲವು ಲೇಖನಗಳು ಬರಲಿ....

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ