ಕಡಲ ಹುಡುಗಿಯ ನೆನಪು




ನರನಾಡಿಯಲ್ಲೆಲ್ಲ ಸುಡುಮದ್ದು
ತುಂಬಿಕೊಂಡ, ಪ್ರೀತಿ ಗೊತ್ತಿಲ್ಲದೆ
ಅವುಡುಗಚ್ಚಿ ಕುಳಿತ ನಗರದಲ್ಲಿ
ನನ್ನೂರ ಕಡಲ ಹುಡುಗಿ ಚಿರಯೌವನೆ

ಕದನದಂಥ ಕಡಲ ಮುಂದೆ
ಕೃಷ್ಣ ಸುಂದರಿ ಅಂತರ್ಮುಖಿ
ಮೌನವೇ ಮತಾಪು
ಕಿಬ್ಬೊಟ್ಟೆಗೆ ಒದ್ದು
ಮಾತಾಗುತ್ತವೆ ಅವಳೊಡಲ ಬೇನೆ

ಎರಡಕ್ಷರ ಕಲಿಯದವಳು
ಭಾರವನ್ನೆಲ್ಲ ಎದೆಯೊಳಗಿಟ್ಟು
ಸೆರಗ ಬಿಗಿದೆತ್ತಿ ಕಟ್ಟಿ
ಕಡಲ ಹೂಗಳ ಹೊತ್ತು
ದಂಡೇರಿ ಬರುವ ನಾಯಕಿ

ರಕ್ತ ಮಾಂಸಗಳ ಮಾರ್ಕೆಟ್ಟಲ್ಲಿ
ಮಾತು ಯುದ್ಧವಾಗಿ
ಹಸಿಬಿಸಿ ಕನಸುಗಳು
ಗಿರಕಿ ಹೊಡೆಯುತ್ತವೆ
ಪ್ರೀತಿ ಕೊಂದು ಮಾತಾಡದ
ಕಡಲ ಹುಡುಗಿ
ಪ್ರಶ್ನೆಗಳಿಗೆ ಕ್ರಯಕಟ್ಟದ ಜೀವಿ

ಮದಿರೆ ಹೀರಿ ನಂಜೇರಿದ
ಈ ನಗರದ ಹುಡುಗರು
ಇವಕ್ಕೆಲ್ಲಿ ಅರ್ಥವಾಗುತ್ತದೆ
ನನ್ನೂರ ಕಡಲು
ಅವಳ ಕಣ್ಣ ಉಗ್ರಾಣದೊಳಗೆ
ಗೂಡು ಕಟ್ಟಿದ ನೋವು

ಕಾಮೆಂಟ್‌ಗಳು

suresh kota ಹೇಳಿದ್ದಾರೆ…
ಚೆನ್ನಾಗಿದೆ. ತುಂಬ ಇಷ್ಟ ಆಯ್ತು.
chand ಹೇಳಿದ್ದಾರೆ…
ಥ್ಯಾಂಕ್ಸ್ ಸುರೇಶ್ ನಿಮ್ಮ ದನಿಗೆ.... ಭೇಟಿ ಕೊಡುತ್ತಿರಿ
Dileep Hegde ಹೇಳಿದ್ದಾರೆ…
ತುಂಬಾ ಚೆನ್ನಾಗಿದೆ ಮಂಜುನಾಥ್ ಸರ್
chand ಹೇಳಿದ್ದಾರೆ…
ಥ್ಯಾಂಕ್ಯು ದಿಲೀಪ್...
Karnataka Best ಹೇಳಿದ್ದಾರೆ…
ಮದಿರೆ ಹೀರಿ ನಂಜೇರಿದ ಈ ನಗರದ ಹುಡುಗರು ಇವಕ್ಕೆಲ್ಲಿ ಅರ್ಥವಾಗುತ್ತದೆ

super
ಪ್ರಗತಿ ಹೆಗಡೆ ಹೇಳಿದ್ದಾರೆ…
ಚೆನ್ನಾಗಿದೆ ,ಇಷ್ಟ ಆಯ್ತು ಸರ್.
satya ಹೇಳಿದ್ದಾರೆ…
ಚಾಂದ್ ,ಪದ್ಯ ಸೊಗಸಾಗಿದೆ ಮಾರಾಯ ...ಹೀಗೆ ಮುಂದುವರಿಲಿ ...
Unknown ಹೇಳಿದ್ದಾರೆ…
Hi,Chand,UR BLOG IS Very attractive, Meaningful,Keep it up.BE IN TOUCH.



NAGARAJ JAMAKHANDI,
Media Co-Ordinator to Minister for Industries
chand ಹೇಳಿದ್ದಾರೆ…
Oh nice Jamakhandi, thank you keep coming
chand ಹೇಳಿದ್ದಾರೆ…
@ಪ್ರಗತಿ, ಧನ್ಯವಾದ ನಿಮ್ಮ ಮಾತಿಗೆ, ಮತ್ತೆ ಬರುತ್ತಿರಿ, ಸಲಹೆ ಕೊಡುತ್ತಿರಿ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ