ಕರ್ನಾಟಕದ ಸುವರ್ಣ ಘಳಿಗೆ ಸವೆದ ಹಾದಿಯ ನೆನೆದು...

ದೇಶಕ್ಕೆ ಮಾದರಿಯಾದ ಕರ್ನಾಟಕದ ಬಹುತ್ವ - ಚಂದ್ರಮುಖಿ ೧೮೫೮ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಒಂದು ಮಹತ್ವದ ಚರ್ಚೆ ನಡೆಯುತ್ತದೆ . ಕಂಪನಿ ಸರ್ಕಾರವನ್ನು ಕೊನೆಗೊಳಿಸುವುದು ಹೇಗೆ , ಅದಕ್ಕೆ ಪರ್ಯಾಯ ಮಾರ್ಗಗಳು ಯಾವುವು ? ಎಂಬ ಪ್ರಶ್ನೆಗಳು ಆ ಚರ್ಚೆಯ ಕೇಂದ್ರ ಬಿಂದುವಾಗಿದ್ದವು . ಭಾರತದಲ್ಲಿ ಎಂಥಾ ಸರ್ಕಾರ ರಚನೆಯಾಗಬೇಕು ಎಂಬ ವಿಚಾರವನ್ನು ಮುಂದಿಟ್ಟುಕೊ A ಡು ಮಸೂದೆ ಮಂಡನೆಯಾಗಿತ್ತು . ಆಗ ಅಂದಿನ ವಾಣಿಜ್ಯ ಮಂಡಳಿಯ ಅಧ್ಯಕ್ಷ ಹಾಗೂ ವಾಗ್ಮಿ ಜಾನ್ ರೈಟ್ ಅವರು ಒಂದು ಮಹತ್ವದ ಪ್ರಸ್ತಾಪವನ್ನು ಮುಂದಿಡುತ್ತಾರೆ ; ‘ ಭಾರತದ ಪ್ರಾಂತ್ಯಗಳನ್ನು ರಚನೆ ಮಾಡುವುದಿದ್ದರೆ ಅದಕ್ಕೆ ಭಾಷೆಯೇ ಆಧಾರವಾಗಬೇಕು . ಅದೇ ಸರಿಯಾದ ಕ್ರಮ . ಮುಂದಿನ ದಿನಗಳಲ್ಲಿ ಹಾಗೆ ಮಾಡುವುದಾದರೆ ಇಂಡಿಯಾದಲ್ಲಿ ಐದು ಪ್ರಾಂತ್ಯಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ !’ ಪ್ರಾಕೃತಿಕವಾಗಿ , ರಾಜಕೀಯವಾಗಿ , ಸಾಂಸ್ಕೃತಿಕವಾಗಿ ಅಖಂಡವಾಗಿದ್ದ ಭಾರತದಲ್ಲಿ ಭಾಷೆಗೆ ಎಷ್ಟು ಮಹತ್ವವಿದೆ ಎಂಬುದನ್ನು ಬ್ರಿಟಿಷರು ಅಂದೇ ಮನಗಂಡಿದ್ದರು ಎಂಬುದಕ್ಕೆ ಇದು ಬಹುದೊಡ್ಡ ಸಾಕ್ಷಿ . ಬ್ರೆ öÊ ಟ್ ಅಂದು ಆಡಿದ ಸ್ಪಷ್ಟ ನುಡಿಯಿಂದಾಗಿ ಬ್ರಿಟಿಷರ ನಿಲುವಿನಲ್ಲಿಯೂ ಬದಲಾವಣೆಯಾಯಿತು . ೧೯ನೇ ಶತಮಾನದ ಕೊನೆಯ ಭಾಗದಲ್ಲಿ ಬ್ರಿಟಿಷರು ಪ್ರಾಂತ್ಯಗಳನ್ನು ಪುನಾರಚಿಸುವ ಯೋಚನೆ ಮಾಡಿದ...