ಬದುಕು ಗೆಲ್ಲಿಸುವ ಸಿಮರೂಬ....

ಧರೆಗಿಳಿದ ಸ್ವರ್ಗಸೀಮೆಯ ಸಸ್ಯ.... ಕ್ಯಾನ್ಸರ್ ಮುಕ್ತ ನಾಡು ಕಟ್ಟುವ-ಡಾ.ಜೋಷಿ ದಂಪತಿ ಕನಸು ಆತನ ಹೆಸರು ನಚಿಕೇತ್. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿಗೆ ಸೇರ್ಪಡೆಯಾಗಿದ್ದ. ಆಗ ಆತನಿಗೆ ಕಾಣಿಸಿಕೊಂಡಿದ್ದು ಮಾರಕ ಕಾಯಿಲೆ. `ಇದು ಬ್ಲಡ್ ಕ್ಯಾನ್ಸರ್, ತಕ್ಷಣ ಚಿಕಿತ್ಸೆ ಆರಂಭಿಸಿ' ಎಂದು ವೈದ್ಯರು ಸಲಹೆ ಮಾಡುತ್ತಾರೆ. ಕುಟುಂಬ ಕಣ್ಣೀರಾಗುತ್ತದೆ, ಬೆಳೆದು ನಿಂತ ಮಗನ ಭವಿಷ್ಯವೇ ಮುಗಿದು ಹೋದಂತೆ ಕುಸಿದು ಕುಳಿತು ಬಿಡುತ್ತದೆ. ಧೃತಿಗೆಡದ ಅಪ್ಪ-ಅಮ್ಮ ಮೊದಲ ಕಿಮೋಥೆರಪಿಯನ್ನೂ ಮಾಡಿಸುತ್ತಾರೆ. ಆ ಸಮಯದಲ್ಲೇ ಅವರಿಗೆ ಸಿಕ್ಕ ಮಾಹಿತಿ-ಸಿಮರೂಬಚಿಕಿತ್ಸೆ. ಬೇರೇನನ್ನೂ ಯೋಚಿಸದೇ ಚಿಕಿತ್ಸೆ ಶುರು ಮಾಡಿಕೊಳ್ಳುತ್ತಾರೆ. ಆರು ತಿಂಗಳು ನಿರಂತರ ಚಿಕಿತ್ಸೆ. ಬಳಿಕ ಕ್ಲಿನಿಕಲ್ ಟೆಸ್ಟ್; ಕ್ಯಾನ್ಸರ್ ಇರುವ ಸಣ್ಣ ಕುರುಹೂ ಕಾಣಿಸುವುದಿಲ್ಲ! ಸಿಮರೂಬ ಗಿಡ (ಲಕ್ಷ್ಮೀತರು)ದೊಂದಿಗೆ ಡಾ. ಜೋಷಿ ದಂಪತಿ ಆಕೆಯ ಹೆಸರು ಸುಲೇಖಾ. ಇಬ್ಬರು ಮಕ್ಕಳ ತಾಯಿ. ಆಕೆಗೆ ಕಾಣಿಸಿಕೊಂಡಿದ್ದು ಮೆಲನೋಮಾ. ಇದೊಂದು ಚರ್ಮರೋಗ. ಕ್ಯಾನ್ಸರ್ ನಲ್ಲಿಯೇ ಅತ್ಯಂತ ಮಾರಕವಿದು ಎನ್ನುತ್ತಾರೆ ವೈದ್ಯರು. ಸುಲೇಖಾ ಪತ್ನಿಗೆ ತಜ್ಞ ವೈದ್ಯರು ಹೇಳಿದ್ದು ಇಷ್ಟು; ಬದುಕಿದ್ದರೆ ಮೂರು ಅಥವಾ ನಾಲ್ಕು ತಿಂಗಳು ಮಾತ್ರ! ಆದರೆ ಕಿದ್ವಾಯಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು ಸುಲೇಖಾಗೆ ಮಾಡಿದ ಸಲಹೆ- ಸಿಮರೂಬ...