ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೈಲಿಗೆ ಕೊಡಪಾನದಲ್ಲಿ ಪಾಯಸ ಕೊಂಡೊಯ್ಯುತ್ತಿದ್ದೆ...

ಇಮೇಜ್
ದೊರೆಯ ಬದುಕಿನ ಲಲಿತಗಾನ ಒಂದು ಶತಮಾನ ಕಂಡ ಹಿರಿಯ ಜೀವ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಈಗಲೂ ಹೋರಾಟವೆಂದರೆ ಸಾಕು ಹೊರಟುಬಿಡುವ ಜೀವ. ಅಂದಿನ ಸ್ವಾತಂತ್ರ್ಯ ಹೋರಾಟ ಮತ್ತು ಪ್ರಭುತ್ವದ ನಡುವೆ ಸಾಕ್ಷಿಯಾಗಿರುವ ದೊರೆ ನಮ್ಮ ನಡುವಿನ ಸ್ಪೂರ್ತಿಯ ಚಿಲುಮೆ. ಒಂದು ಪ್ರತಿಭಟನೆ, ಆಂದೋಲನ, ಜನಪರ ಕಾರ್ಯಕ್ರಮಗಳಲ್ಲಿ ದೊರೆಯದೊಂದು ದನಿ ಇದ್ದೇ ಇರುತ್ತದೆ. ಈ ಎಲ್ಲ ಜೀಕಾಟದ ನಡುವೆ ದಂಪತಿ ಹೇಗೆ ಜೀವನ ನಡೆಸಿದರು?  ಅದಕ್ಕೆ ಉತ್ತರ ಕೊಟ್ಟವರು ದೊರೆಸ್ವಾಮಿ ಮತ್ತು ಲಲಿತಮ್ಮ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕಾರ್ಯಕರ್ತನಿಗೆ ಬಡತನ ಇಚ್ಛಾಪೂರ್ವಕವಾಗಿರಬೇಕು ಎಂಬ ಗಾಂಧೀಜಿ ಮಾತಿಗೆ ಈ ದಂಪತಿಗಿಂಥ ಉದಾಹರಣೆ ಬೇರೆ ಬೇಕಿಲ್ಲ. ಹೋರಾಟ, ಚಳವಳಿ ಎಂದರೆ ಎಲ್ಲಿದ್ದರೂ ಹಾಜರಾಗುತ್ತಿದ್ದ ನೀವು ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದು ಯಾವಾಗ? ದೊರೆ : ನಾವು ಮದುವೆಯಾಗಿದ್ದೇ ವಿಚಿತ್ರ ಸನ್ನಿವೇಶದಲ್ಲಿ. ಬೆಂಗಳೂರಿನ ಚಾಮರಾಜಪೇಟೆಯವರಾದ ಲಲಿತಮ್ಮ ತಮ್ಮ ನಾಲ್ವರು ಸಹೋದರರ ಜತೆ ಬೆಳೆದವರು. ಕನ್ನಡ ಲೋವರ್ ಸೆಕೆಂಡರಿ ಓದಿ ಮನೆಯಲ್ಲಿ ಅಮ್ಮನಿಗೆ ನೆರವಾಗಿಕೊಂಡು ಇದ್ದಾಕೆ. ಇವರ ಕುಟುಂಬದ ಸ್ನೇಹಿತ ರಾಘವೇಂದ್ರ ಆಚಾರ್ ಮನೆಗೆ ಒಂದು ದಿನ ಸಂಜೆ ಹೋಗಿದ್ದೆ. ಆಗ ಅಲ್ಲಿ ಆಚಾರ್ ಪತ್ನಿ, ಲಲಿತಮ್ಮ ಮತ್ತವರ ತಾಯಿ ಜತೆ ಪಗಡೆ ಆಡುತ್ತಿದ್ದರು. ನಾನು ಹೋಗಿ ಜೊತೆಯಾದೆ. ಮೂರು ಆಟಗಳನ್ನು ಆಡಿದರೂ ಲಲತೆಯ ಜತೆ ಗೆಲ್ಲಲಾಗಲಿಲ್ಲ...

ತಿಂಗಳ ಬೆಳಕಿನಲ್ಲಿ ಅಮ್ಮ ಕೊಟ್ಟ ಜಾಜಿದಂಡೆ ಘಮಘಮ

ಇಮೇಜ್
- ಕೋ . ಶಿವಾನಂದ ಕಾರಂತ ( ನನ್ನ ಗುರುಗಳಾದ ಶಿವಾನಂದ ಕಾರಂತರು ಸಾಹಿತಿಗಳು, ಕಥೆಗಾರರು. ಒಳ್ಳೆಯ ಮಾತುಗಾರರು. ಅವರ ನೆನಪಿನ ಶಕ್ತಿ ಅಪಾರ. ನನ್ನ ಎಸ್.ಎಸ್.ಎಲ್,ಸಿ ವರೆಗಿನ ಓದಿನಲ್ಲಿ ಕಾರಂತರು ನನಗೆ ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದರು. ಅವರು ಪಾಠ ಮಾಡುವ ಶೈಲಿ ಭಿನ್ನ. ಪ್ರತಿ ಕ್ಲಾಸಿನಲ್ಲಿ ಕಥೆಗಳನ್ನೇ ಹೇಳುತ್ತ ಮನಸ್ಸಿಗೆ ಮುಟ್ಟುವ ಹಾಗೆ ಹೇಳುತ್ತಿದ್ದರು. ಅವರು ಕೊಟ್ಟ ನೋಟ್ಸ್ ಬರೆದುಕೊಳ್ಳುವುದೆಂದರೆ ನನಗೆ ಇನ್ನಿಲ್ಲದ ಹುಚ್ಚು. ಅದು ಅತ್ಯಂತ ಸ್ವಾರಸ್ಯಕರವಾಗಿರುತ್ತಿತ್ತು. ಅದು ಕೇವಲ ಪುಸ್ತಕದ ಬದನೆಕಾಯಿ ಆಗಿರುತ್ತಿರಲಿಲ್ಲ. ಪಾಠಗಳನ್ನು ಅವರು ತಮ್ಮದೇ ಶೈಲಿಯಲ್ಲಿ ಬರೆದಿರುತ್ತಿದ್ದರು. ಅಂತಹ ನೋಟ್ಸ್ ನಾನು ಆಗಾಗ ಓದುತ್ತ ಕೂತಿರುತ್ತಿದ್ದುದೇ ಹೆಚ್ಚು. ಅವರು ಕೊಟ್ಟ ನೋಟ್ಸ್ ಅನ್ನು ಬಹಳ ವರ್ಷ ಇಟ್ಟುಕೊಳ್ಳುತ್ತಿದ್ದೆ. ಅಲ್ಲಿಂದದ ಮಗ್ಗುಲು ಬದಲಿಸಿ ನಾನು ಪತ್ರಿಕೋದ್ಯಮದ ದಾರಿ ಹಿಡಿದೆ. ನನಗೆ ಅಕ್ಷರದ ಮೋಹ ಹತ್ತಿಕೊಂಡಿದ್ದರೆ ಅದರಲ್ಲಿ ಮೊದಲ ಪಾಲು ಕಾರಂತ ಮೇಷ್ಟರಿಗೆ ಸಲ್ಲಬೇಕು. ನಾನೇನಾದರೂ ಒಂದು ಪುಸ್ತಕ ಬಿಡುಗಡೆ ಮಾಡಿದರೆ ಅದರ ಒಂದು ಪ್ರತಿಯನ್ನು ಮೇಷ್ಟ್ರರಿಗೆ ಹೋಗಿ ಕೊಡದೇ ಇದ್ದರೆ ನೆಮ್ಮದಿ ಇಲ್ಲ. ಈ ಬಾರಿ ನಾನು ಆ ಕೆಲಸವನ್ನು ತಡವಾಗಿ ಮಾಡಿದೆ. ಆದರೆ ಅಮ್ಮ ಕೊಟ್ಟ ಜಾಜಿ ದಂಡೆ ಯನ್ನು ಅವರ ಮಡಿಲಿಗಿಟ್ಟ ಕೆಲವೇ ದಿನಗಳಲ್ಲಿ ಅದರ ವಿಮರ್ಶೆಯನ್ನೂ ಕುಂದಾಪುರ ಸ್ಥಳೀಯ ಹಾಗೂ ಜನಪ್ರಿಯ ಪತ್ರಿಕೆ ಕುಂದಪ್ರಭ...