ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್

ಕದ ತೆರೆದ ಆಕಾಶ

ಇಮೇಜ್
ಕದ ತೆರೆದ ಆಕಾಶ  "ಒಂದು  ಕಮಿಟ್ ಮೆಂಟಿನ   ಭಾರ ಇಳಿಸಿಕೊಂಡು ಇನ್ನೊಂದಕ್ಕೆ ಜಿಗಿಯುವ ಹೊತ್ತಿಗೆ ಎಷ್ಟೊಂದು ಮುಖವಾಡಗಳು ಕಳಚಿ ಬಿದ್ದಿರುತ್ತವೆ. ಇವೆಲ್ಲ ನಿನಗೆ ಅರ್ಥವಾಗುವ ವಿಷಯವಲ್ಲ'' ಹಾಗೆ ಹೇಳುತ್ತ ಒಂದು ನಿಟ್ಟುಸಿರು ಬಿಟ್ಟ ಆಕೆ ಡ್ರೈವರ್ ಸೀಟಿನಲ್ಲಿದ್ದ ನನ್ನನ್ನೊಮ್ಮೆ ಕಡೆಗಣ್ಣಿನಲ್ಲಿ ನೋಡಿದಳು. ಮಾತನ್ನು ಕೇಳಿಸಿಕೊಂಡನೇನೋ ಎಂಬ ಅನುಮಾನ ಆ ದೃಷ್ಟಿಯಲ್ಲಿತ್ತು. ನನ್ನ ಕಣ್ಣು ಮಾತ್ರ ಆಕೆಯ ತೋಳಿನ ಮೇಲಿತ್ತು. ಕಣ್ಣಂಚಿನ ನೋಟ ರೆಪ್ಪೆ ಬಾಗಿ ಮೇಲೇಳುವ ಹೊತ್ತಿಗೆ ಮಾಯವಾಗಿ ತನ್ನ ಸ್ಲೀವ್ಲೆಸ್ ತೋಳಿನ ತುಂಬಾ ವೇಲ್ ಹರಡಿಕೊಂಡಳು. ಹೊನ್ನ ಬಣ್ಣದ ತಿಳಿತಿಳಿ ಲೇಪನದಂತೆ ಇದ್ದ ಆ ಹೊದಿಕೆಗೆ ಅಲ್ಲಿನ ಅಕ್ಷರಗಳನ್ನು ಮುಚ್ಚಲು ಅಂಜಿಕೆ. ಆಕೆಯ ಗೋಧಿ ಬಣ್ಣದ ತೋಳು ಆ ಹಚ್ಚೆಯ ಬರಹಕ್ಕೆ ಇನ್ನಷ್ಟು ಹೊಳಪನ್ನು ಕೊಟ್ಟಿತ್ತು. ಅಲ್ಲಿದ್ದುದು 'ತಪಸ್ವಿ' ಎನ್ನುವ ಒಂದೇ ಒಂದು ಪುಟ್ಪುಟಾಣಿ ಪದ. ಮುದ್ದು ಮುದ್ದಾದ ಅಕ್ಷರ. ಕೆಲವು ಕಮಿಟ್.ಮೆಂಟುಗಳು  ಮುಖವಾಡ ಹೊದ್ದುಕೊಳ್ಳಲೂ ಸಾಧ್ಯವಿರದಷ್ಟು ವೈಬ್ರೆಂಟ್ ಆಗಿರುತ್ತವಾ ಎಂದು ಕೇಳಬೇಕು ಅನಿಸಿತು. ಆಕೆ ಮತ್ತೆ ಇಷ್ಟುದ್ದದ ಬಿಳಿಯ ಫೋನಿಗೆ ಕಿವಿಯಿಟ್ಟು ಕಾರಿನ ವಿಂಡೋ ಗ್ಲಾಸ್ ಇಳಿಸಿ ತೀರಾ ಸ್ಲೋ ಮೋಷನ್ನಲ್ಲಿ ಕತ್ತನ್ನು ಆಚೆಗೆ ತಿರುಗಿಸಿದಳು. ಆಕೆಯ ಕಿರುದನಿಯ ಮಾತುಗಳು ಹೊರಗಿನ ಸದ್ದಿನೊಂದಿಗೆ ಲೀನವಾದವು. ಆಕೆ ತನ್ನ ಉದ್ದಾನುದ್ದ ಮುಂಗುರುಳುಗಳನ್ನು ಒಂದೊಂ...