- ಮಂಜುನಾಥ್ ಚಾಂದ್ ಕರ್ನಾಟಕದ ರಾಜಕೀಯ ಕ್ಷಿತಿಜದಿಂದ ‘ ಜಂಟಲ್ ಮನ್ ’ ರಾಜಕಾರಣಿಯೊಬ್ಬರು ಮರೆಯಾಗಿದ್ದಾರೆ . ರಾಜಕಾರಣಿ ಎಂದರೆ ಅವರಿಗೊಂದು ಹಣೆಪಟ್ಟಿ ಹಚ್ಚುವ , ಮೂಗುಮುರಿದು ದೂರ ಸರಿಯುವ , ಅನುಮಾನದ ಕಣ್ಣಿನಿಂದಲೇ ನೋಡುವ , ಕಟಕಿಯಾಡುವ ಕಾಲದಲ್ಲಿ ರಾಜಕಾರಣವನ್ನು , ಅಧಿಕಾರವನ್ನು ಅತ್ಯಂತ ಗೌರವ ಮೂಡಿಸುವ ರೀತಿಯಲ್ಲಿ , ಡಿಮ್ಲಾಮೆಟಿಕ್ ಆಗಿ ನಿಭಾಯಿಸಿದ ಒಬ್ಬ ಮುತ್ಸದ್ಧಿ ಇದ್ದರೆ ಅದು ಎಸ್ . ಎಂ . ಕೃಷ್ಣ . ಅವರು ಯಾವತ್ತೂ ಸಂಯಮ ಮೀರಿ ನಡೆದವರಲ್ಲ , ಯಾವ ಅಬದ್ಧ ಮಾತೂ ಅವರ ಮತಿಯ ಮಂಟಪವನ್ನು ದಾಟಿ ಹೊರಬಂದ ಉದಾಹರಣೆಯಿಲ್ಲ . ರಾಜಕೀಯದಲ್ಲಿ ಎಂತಹ ವಿರೋಧಿಗಳಿದ್ದರೂ ಹದ್ದುಮೀರಿ ವರ್ತಿಸಿದವರಲ್ಲ . ಮೌನದ ಮೂಲಕವೇ ಅವರನ್ನು ಕಟ್ಟಿಹಾಕಿದವರು . ಎಂದೆ A ದಿಗೂ ಕೆಟ್ಟ ಭಾಷೆ ಬಳಸಿದವರಲ್ಲ . ಸೇಡಿನ ರಾಜಕಾರಣ ಅವರ ಪಟ್ಟಿಯಲ್ಲೇ ಇರಲಿಲ್ಲ . ತಮ್ಮ ಪ್ರಬುದ್ಧ ಮಾತು , ನಡೆ , ಎದುರಿದ್ದವರನ್ನೂ ಗೌರವಿಸುವ ಹೆಚ್ಚುಗಾರಿಕೆಯ ಮೂಲಕ ಎಸ್ . ಎಂ . ಕೃಷ್ಣ ಅವರು ಸಾರ್ವಜನಿಕ ಬದುಕಿಗೆ ಹೊಸ ಭಾಷ್ಯವನ್ನು ಬರೆದವರು . ಐವತ್ತೊಂದು ವರ್ಷಗಳಷ್ಟು ಸುದೀರ್ಘ ಕಾಲ ಸಾರ್ವಜನಿಕ ಬದುಕಿನ ಎಲ್ಲ ಮಜಲುಗಳನ್ನು ನೋಡಿದ ಅವರನ್ನು ಒಬ್ಬ ‘ ರಾಜಕಾರಣಿ ’ ಎಂದು ಕರೆಯಲಾಗದ ರೀತಿಯಲ್ಲಿ ಎಲ್ಲವನ್ನೂ ನಿಭಾಯಿಸಿದರು . ರಾಜಕಾರಣವೆಂದರೆ ಕೇವಲ ‘ ...
ಕಾಮೆಂಟ್ಗಳು