ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೇಷ್ಟ್ರು ಮೆಚ್ಚಿದ ಕಥೆಗಳು...

ಇಮೇಜ್
ಗಂಧವತೀ ಪೃಥವಿ.. ಅಂದಹಾಗೆ ಚಂದವತೀ ಚಾಂದ್ ಕಥೆಗಳು.....ಅನುಭವಗಳನ್ನು ತಿಕ್ಕಿ, ತೀಡುವ ರಚನಾತ್ಮಕ ಗುಣ ನಿನ್ನ ಬರವಣಿಗೆಯಲ್ಲಿದೆ..ನೀನೊಬ್ಬಉತ್ತಮ ಕಥೆಗಾರ ಅನ್ನಲು "ಕದ ತೆರೆದ ಆಕಾಶ" ಕೃತಿಯೊಂದು ಸಾಕು... ಹೀಗೆ ಬರೆದಿದ್ದಾರೆ ನನ್ನ ಪ್ರೌಢಶಾಲಾ ದಿನಗಳ ಪ್ರೀತಿಯ ಮೇಷ್ಟ್ರು ಕೋ.ಶಿವಾನಂದ ಕಾರಂತ್ ಅವರು. ನನ್ನೂರು ಕುಂದಾಪುರದ ಜನಪ್ರಿಯ ಸಾಪ್ತಾಹಿಕ "ಕುಂದಪ್ರಭ''ದಲ್ಲಿ ಈ ವಾರ ಅವರ ಆತ್ಮೀಯ ಮಾತುಗಳು ಪ್ರಕಟವಾಗಿವೆ...ಬಹು ವರ್ಷಗಳ ಬಳಿಕ ಶಿಷ್ಯನ ಬೆಳವಣಿಗೆ ಕಂಡು ಗುರು ಬರೆದಿರುವ ಮೆಚ್ಚಿಗೆ ಮಾತುಗಳಿಂದ ಖುಷಿಯಾಗಿದೆ... ಗುರುವಿಗೆ ಶಿಷ್ಯನ ಪ್ರೀತಿಯ ವಂದೇ.

ಕದ ತೆರೆದ ಆಕಾಶ -ಎರಡು ಪ್ರಮುಖ ವಿಮರ್ಶೆಗಳು...

ಇಮೇಜ್
ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾದ ನನ್ನ ಕಥಾ ಸಂಕಲನ "ಕದ ತೆರೆದ ಆಕಾಶ" ಕೃತಿಯ ಬಗ್ಗೆ ಪತ್ರಕರ್ತ ಹಾಗೂ ಕಥೆಗಾರರೂ ಆದ ಡಾ. ಜಗದೀಶ್ ಕೊಪ್ಪ ಮತ್ತು ಡಾ.ವೆಂಕಟರಮಣ ಗೌಡ ಅವರು ಬರೆದಿರುವ ಎರಡು ಪ್ರಮುಖ ವಿಮರ್ಶೆಗಳು ಇಲ್ಲಿವೆ..... ಮಂಜುನಾಥ್ ಚಾಂದ್ ರವರ ಚಂದನೆಯ ಕಥೆಗಳು.... -ಡಾ.ಜಗದೀಶ್ ಕೊಪ್ಪ, ಹುಬ್ಬಳ್ಳಿ ನಮ್ಮ   ನಡುವಿನ   ಸೂಕ್ಷ್ಮ   ಸಂವೇದನೆಯ   ಪತ್ರಕರ್ತ   ಹಾಗೂ   ಕಥೆಗಾರ   ಮಂಜುನಾಥ್   ಚಾಂದ್   ರವರ   ಪ್ರಥಮ   ಕಥಾ   ಸಂಕಲನವಾದ  “  ಕದ   ತೆರೆದ   ಆಕಾಶ ”  ಕೃತಿಯು   ಹಲವು ಕಾರಣಕ್ಕಾಗಿ   ವಿಶಿಷ್ಟ   ಕಥಾ   ಸಂಕಲನವಾಗಿದೆ .  ಕುದುರೆಗಿಂತ   ಅದರ   ಲದ್ದಿ   ಬಿರುಸು   ಎನ್ನುವ   ಗಾದೆಯಂತೆ   ಇವೊತ್ತಿನ   ಪತ್ರಿಕೋದ್ಯಮದಲ್ಲಿ   ಸುದ್ದಿಗಿಂತ   ಸದ್ದು   ಮಾಡಿದ   ಮತ್ತು ಮಾಡುತ್ತಿರುವ   ಪತ್ರಕರ್ತರೆ   ಹೆಚ್ಚು .  ಆದರೆ ,  ಕಳೆದ   ಇಪ್ಪತ್ತೈದು   ವರ್ಷಗಳಿಂದ   ಕನ್ನಡದ   ಪ್ರಮುಖ   ದಿನಪತ್ರಿಕೆಗಳಲ್ಲಿ   ಮತ್ತು   ದೃಶ್ಯ   ಮಾಧ್ಯಮದಲ್ಲಿ   ಸೇವೆ   ಸಲ್ಲಿಸಿರುವ   ಚಾಂದ್...