ಹರಳುಗಟ್ಟಿದ ನೀಲಾಕಾಶ


ಬೆಳಕಿನ ಬಳ್ಳಿಯ ಹಿಡಿದು
ಜಂಬ ಪಡುವ
ಶಂಖಪುಷ್ಪದ ಹೂವು
ಕತ್ತಲ ಕಿಬ್ಬೊಟ್ಟೆಯೊಳಗೆ
ಕರಗುವ ಬಣ್ಣಗಳಿಗೆ
ಜೀವ ತುಂಬಲಾಗದೆ
ಚಿಪ್ಪಿನೊಳಗೆ ನೆರಿಗೆಯಾಗುತ್ತದೆ
ಹೊಸ ಮೊಳಕೆಗೆ ಶಾಖವಾಗುತ್ತದೆ



ಇಲ್ಲೇ ತೀರದಲ್ಲಿ ಮನೆ ಇವಳದು
ಕಡಲ ಗರ್ಭದಿಂದ ಉಕ್ಕಿ ಬಂದ
ಅಲೆಗಳ ಸದ್ದಿಗೆ
ಬಹು ಬಿನ್ನಾಣಗಿತ್ತಿಯ ಬೈಗಿಗೆ
ಕಾವಳದ ಹಂಗಿಗೆ
ಬಯಕೆಯು ಬೆಂಕಿಯಾಗಿ
ಮತ್ತೆ ಬಸಿರಾಗುತ್ತಾಳೆ




ನಾಳೆ ಮತ್ತೊಂದು ಬೆಳಗು
ಮೊಳಕೆಯೊಡೆದರೆ
ಅದರೊಳಗೊಂದು ಬೆರಗು
ನೀಲಾಕಾಶವೇ ಹರಳುಗಟ್ಟಿ
ಕಾಂಬ ಕಣ್ಣಿಗೆ
ಈಕಿ ಜಂಬದ ಹೂವು...!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ