ಕೊನೆಯ ನಿಲ್ದಾಣ ತಲುಪಿದ ಅಪರ್ಣಾ ! • ಮಂಜು ತಾಸುಗಟ್ಟಲೆ ಹೊತ್ತಿನಿಂದ ಕಾಯುತ್ತ ನಿಂತವರನ್ನು ಸರಿಯಾದ ಫ್ಲಾಟ್ ಫಾರ್ಮ್ ತಲುಪಿಸಿ , ಪ್ರಯಾಣದ ನಡುವೆ ಮೈಮರೆತು ಕುಂತವರನ್ನು ಸರಿಯಾದ ನಿಲ್ದಾಣದಲ್ಲಿ ಇಳಿಸಿ ಅಪರ್ಣಾ ನಿರ್ಗಮಿಸಿದ್ದಾರೆ . ಆದರೆ ಅವರ ಸುಮಧುರ ಕಂಠ ಇಲ್ಲಿ ಚಿರಸ್ಥಾಯಿಯಾಗಿದೆ . ಕನ್ನಡಿಗರ ಕಿವಿಗಳಿಗೆ ಅದು ಸದಾ ಕೇಳಿಸುತ್ತಿರುತ್ತದೆ . ‘ ಪ್ರಯಾಣಿಕರ ಗಮನಕ್ಕೆ , ಹುಬ್ಬಳ್ಳಿ - ಧಾರವಾಡ - ಮಂಗಳೂರು ನಡುವೆ ಸಂಚರಿಸುವ ಬಸ್ಸು ಇನ್ನು ಕೆಲವೇ ನಿಮಿಷಗಳಲ್ಲಿ ಫ್ಲಾಟ್ ಫಾರ್ಮ್ ಸಂಖ್ಯೆ ಆರರಲ್ಲಿ ಬಂದು ನಿಲ್ಲಲಿದೆ ’ ಎನ್ನುವ ಸಂದೇಶದಿ A ದ ಮೊದಲ್ಗೊಂಡು , ‘ ರೈಲು ಈಗ ಮಹಾತ್ಮಾ ಗಾಂಧಿ ರಸ್ತೆಗೆ ತಲುಪಲಿದೆ . ಬಾಗಿಲುಗಳು ಬಲಕ್ಕೆ ತೆರೆಯಲಿದೆ . ಇಳಿಯುವ ಮುನ್ನ ಅಂತರದ ಬಗ್ಗೆ ಗಮನವಿರಲಿ ’ ಎಂಬ ಮೆಟ್ರೊ ರೈಲಿನ ಧ್ವನಿಯ ತನಕ ಅಪರ್ಣಾ ಎಲ್ಲರಿಗೂ ಚಿರಪರಿಚಿತ . ಅಪರ್ಣಾ ವಸ್ತಾರೆ ಅವರ ಧ್ವನಿ ಇಷ್ಟಕ್ಕೆ ಮಾತ್ರ ಸೀಮಿತವಾಗಿರಲಿಲ್ಲ . ರಾಜ್ಯದ ಉದ್ದಗಲಕ್ಕೂ ನಡೆಯುವ ಕಾರ್ಯಕ್ರಮಗಳಲ್ಲಿ , ಉತ್ಸವಗಳಲ್ಲಿ ಅವರು ನಿರೂಪಣೆಗೆಂದು ನಿಂತುಬಿಟ್ಟರೆ ಕಾರ್ಯಕ್ರಮದ ಸಂಘಟಕರು ನಿರಾತಂಕವಾಗಿ ಇದ್ದುಬಿಡಬಹುದಿತ್ತು . ಯಾವ ಅವ್ಯವಸ್ಥೆ , ಅಪಸವ್ಯಗಳು ನಡೆಯದ ಹಾಗೆ ಕಾರ್ಯಕ್ರಮಗಳನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಅಪ...
ಕಾಮೆಂಟ್ಗಳು