ಸೋಜಿಗ

ಕಡಲ ತಡಿಯಲ್ಲಿ ಹೂವಿನ

ಪಕಳೆಗಳನ್ನು ಸುರಿದು

ಕಡಲು ಪನ್ನೀರಾಗುವ

ಸೋಜಿಗಕ್ಕಾಗಿ ಕಾದಿದ್ದೇನೆ

ಮಳೆಸುಖ

ಮುಂಗಾರು ಮೋಡದ ಉಯ್ಯಾಲೆ ಕಟ್ಟಿ

ಮಳೆಗಾಗಿ ಕಾತರಿಸಿದ್ದೇನೆ

ಮಲ್ಲಿಗೆ ದಂಡೆಯ ಚಿಂತೆ ಬಿಡು

ಮಣ್ಣಿನ ಘಮಲಿನ ಮಣಿ ಪೋಣಿಸುವೆ





ದಾಹ

ಹಾಲಿನಂತ ನೊರೆಯ ಬಿಟ್ಟು ಹೋಗಿವೆ

ಕಡಲ ಅಲೆಗಳು ಆದರೂ

ತೀರಕ್ಕೆ ಅದೆಂಥ ದಾಹ

ಕೆನ್ನೆಯ ಮೇಲೆ ಒಡೆದ ಬೆವರ

ಹನಿಗಳನ್ನೆಲ್ಲ ನಿನ್ನ ಬೆರಳ ತುದಿ

ಹೀರಿಕೊಂಡಂತೆ!


ಚಂದ್ರಮನಿಗೆ..



ಹಾಲಲ್ಲಿ ಕರಗಲಾರೆ ಎನ್ನುವ ಸಿಹಿ ಜೇನೇ
ನೀರಲ್ಲಿ ಬೆರೆಯಲಾರೆ ಎನ್ನುವ ಸಕ್ಕರೆಯೇ
ನನ್ನದೆಯ ಆಕಾಶದಲ್ಲೇ ಬಚ್ಚಿಟ್ಟುಕೊಂಡು
ಕಣ್ತಪ್ಪಿಸುವ ಚಂದ್ರಮನೇ..
.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ