ಹನಿಗಳ ಹಂಗಿನಲ್ಲಿ...

ಚಿಗುರೆಲೆಯ ಕೊನೆಯಲ್ಲಿ ನಿಂತ
ಹನಿಗೆ ಶಿಲೆಯಾಗುವ ತಪಸ್ಸು
ಹನಿಗಾಗಿ ಕಾದಿರುವ ಭುವಿಗೆ
ಬಂಧವಾಗುವ ಸಂಭ್ರಮ
#####

ಹಾಲು ತುಂಬಿದ ಬಟ್ಟಲಲ್ಲಿ
ಚಂದಿರನ ಬಿಂಬಕ್ಕಾಗಿ ಕಾದ
ಚೆಲುವಿಗೆ ತಾನೊಂದು
ನಕ್ಷತ್ರವೆಂಬ ಬಿಂಕವಿರಲಿಲ್ಲ
ಮೆರವಣಿಗೆ ಹೊರಟ
ಸಾಲಿಗ್ರಾಮದ ಶಿಲೆಗೆ
ಮೂರ್ತರೂಪದ ಹಂಗಿರಲಿಲ್ಲ
#####

ನದಿಯ ಲಹರಿ ನೋಡಿದ್ದಿಯಾ
ಇಳಿಬಿಟ್ಟ ಕಾಲಿನ ಬೆರಳು
ಚುಂಬಿಸಿ ಹೋದ ಅಲೆಯ ಕೇಳಿದೆ
ನೆನಪು ಮಾಡಿಕೊಂಡಳೆ ಗೆಳತಿ
ನಸುನಕ್ಕು ಮತ್ತೊಮ್ಮೆ ಕಲರವವಾಯ್ತು
#####
ಕಾಮೆಂಟ್‌ಗಳು
chiTukugaLige sarihonduva phoTogaLu....