ಪೋಸ್ಟ್‌ಗಳು

ಕದ ತೆರೆದ ಆಕಾಶ

ಇಮೇಜ್
ಕದ ತೆರೆದ ಆಕಾಶ  "ಒಂದು  ಕಮಿಟ್ ಮೆಂಟಿನ   ಭಾರ ಇಳಿಸಿಕೊಂಡು ಇನ್ನೊಂದಕ್ಕೆ ಜಿಗಿಯುವ ಹೊತ್ತಿಗೆ ಎಷ್ಟೊಂದು ಮುಖವಾಡಗಳು ಕಳಚಿ ಬಿದ್ದಿರುತ್ತವೆ. ಇವೆಲ್ಲ ನಿನಗೆ ಅರ್ಥವಾಗುವ ವಿಷಯವಲ್ಲ'' ಹಾಗೆ ಹೇಳುತ್ತ ಒಂದು ನಿಟ್ಟುಸಿರು ಬಿಟ್ಟ ಆಕೆ ಡ್ರೈವರ್ ಸೀಟಿನಲ್ಲಿದ್ದ ನನ್ನನ್ನೊಮ್ಮೆ ಕಡೆಗಣ್ಣಿನಲ್ಲಿ ನೋಡಿದಳು. ಮಾತನ್ನು ಕೇಳಿಸಿಕೊಂಡನೇನೋ ಎಂಬ ಅನುಮಾನ ಆ ದೃಷ್ಟಿಯಲ್ಲಿತ್ತು. ನನ್ನ ಕಣ್ಣು ಮಾತ್ರ ಆಕೆಯ ತೋಳಿನ ಮೇಲಿತ್ತು. ಕಣ್ಣಂಚಿನ ನೋಟ ರೆಪ್ಪೆ ಬಾಗಿ ಮೇಲೇಳುವ ಹೊತ್ತಿಗೆ ಮಾಯವಾಗಿ ತನ್ನ ಸ್ಲೀವ್ಲೆಸ್ ತೋಳಿನ ತುಂಬಾ ವೇಲ್ ಹರಡಿಕೊಂಡಳು. ಹೊನ್ನ ಬಣ್ಣದ ತಿಳಿತಿಳಿ ಲೇಪನದಂತೆ ಇದ್ದ ಆ ಹೊದಿಕೆಗೆ ಅಲ್ಲಿನ ಅಕ್ಷರಗಳನ್ನು ಮುಚ್ಚಲು ಅಂಜಿಕೆ. ಆಕೆಯ ಗೋಧಿ ಬಣ್ಣದ ತೋಳು ಆ ಹಚ್ಚೆಯ ಬರಹಕ್ಕೆ ಇನ್ನಷ್ಟು ಹೊಳಪನ್ನು ಕೊಟ್ಟಿತ್ತು. ಅಲ್ಲಿದ್ದುದು 'ತಪಸ್ವಿ' ಎನ್ನುವ ಒಂದೇ ಒಂದು ಪುಟ್ಪುಟಾಣಿ ಪದ. ಮುದ್ದು ಮುದ್ದಾದ ಅಕ್ಷರ. ಕೆಲವು ಕಮಿಟ್.ಮೆಂಟುಗಳು  ಮುಖವಾಡ ಹೊದ್ದುಕೊಳ್ಳಲೂ ಸಾಧ್ಯವಿರದಷ್ಟು ವೈಬ್ರೆಂಟ್ ಆಗಿರುತ್ತವಾ ಎಂದು ಕೇಳಬೇಕು ಅನಿಸಿತು. ಆಕೆ ಮತ್ತೆ ಇಷ್ಟುದ್ದದ ಬಿಳಿಯ ಫೋನಿಗೆ ಕಿವಿಯಿಟ್ಟು ಕಾರಿನ ವಿಂಡೋ ಗ್ಲಾಸ್ ಇಳಿಸಿ ತೀರಾ ಸ್ಲೋ ಮೋಷನ್ನಲ್ಲಿ ಕತ್ತನ್ನು ಆಚೆಗೆ ತಿರುಗಿಸಿದಳು. ಆಕೆಯ ಕಿರುದನಿಯ ಮಾತುಗಳು ಹೊರಗಿನ ಸದ್ದಿನೊಂದಿಗೆ ಲೀನವಾದವು. ಆಕೆ ತನ್ನ ಉದ್ದಾನುದ್ದ ಮುಂಗುರುಳುಗಳನ್ನು ಒಂದೊಂ...

ಮೇಷ್ಟ್ರು ಮೆಚ್ಚಿದ ಕಥೆಗಳು...

ಇಮೇಜ್
ಗಂಧವತೀ ಪೃಥವಿ.. ಅಂದಹಾಗೆ ಚಂದವತೀ ಚಾಂದ್ ಕಥೆಗಳು.....ಅನುಭವಗಳನ್ನು ತಿಕ್ಕಿ, ತೀಡುವ ರಚನಾತ್ಮಕ ಗುಣ ನಿನ್ನ ಬರವಣಿಗೆಯಲ್ಲಿದೆ..ನೀನೊಬ್ಬಉತ್ತಮ ಕಥೆಗಾರ ಅನ್ನಲು "ಕದ ತೆರೆದ ಆಕಾಶ" ಕೃತಿಯೊಂದು ಸಾಕು... ಹೀಗೆ ಬರೆದಿದ್ದಾರೆ ನನ್ನ ಪ್ರೌಢಶಾಲಾ ದಿನಗಳ ಪ್ರೀತಿಯ ಮೇಷ್ಟ್ರು ಕೋ.ಶಿವಾನಂದ ಕಾರಂತ್ ಅವರು. ನನ್ನೂರು ಕುಂದಾಪುರದ ಜನಪ್ರಿಯ ಸಾಪ್ತಾಹಿಕ "ಕುಂದಪ್ರಭ''ದಲ್ಲಿ ಈ ವಾರ ಅವರ ಆತ್ಮೀಯ ಮಾತುಗಳು ಪ್ರಕಟವಾಗಿವೆ...ಬಹು ವರ್ಷಗಳ ಬಳಿಕ ಶಿಷ್ಯನ ಬೆಳವಣಿಗೆ ಕಂಡು ಗುರು ಬರೆದಿರುವ ಮೆಚ್ಚಿಗೆ ಮಾತುಗಳಿಂದ ಖುಷಿಯಾಗಿದೆ... ಗುರುವಿಗೆ ಶಿಷ್ಯನ ಪ್ರೀತಿಯ ವಂದೇ.

ಕದ ತೆರೆದ ಆಕಾಶ -ಎರಡು ಪ್ರಮುಖ ವಿಮರ್ಶೆಗಳು...

ಇಮೇಜ್
ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾದ ನನ್ನ ಕಥಾ ಸಂಕಲನ "ಕದ ತೆರೆದ ಆಕಾಶ" ಕೃತಿಯ ಬಗ್ಗೆ ಪತ್ರಕರ್ತ ಹಾಗೂ ಕಥೆಗಾರರೂ ಆದ ಡಾ. ಜಗದೀಶ್ ಕೊಪ್ಪ ಮತ್ತು ಡಾ.ವೆಂಕಟರಮಣ ಗೌಡ ಅವರು ಬರೆದಿರುವ ಎರಡು ಪ್ರಮುಖ ವಿಮರ್ಶೆಗಳು ಇಲ್ಲಿವೆ..... ಮಂಜುನಾಥ್ ಚಾಂದ್ ರವರ ಚಂದನೆಯ ಕಥೆಗಳು.... -ಡಾ.ಜಗದೀಶ್ ಕೊಪ್ಪ, ಹುಬ್ಬಳ್ಳಿ ನಮ್ಮ   ನಡುವಿನ   ಸೂಕ್ಷ್ಮ   ಸಂವೇದನೆಯ   ಪತ್ರಕರ್ತ   ಹಾಗೂ   ಕಥೆಗಾರ   ಮಂಜುನಾಥ್   ಚಾಂದ್   ರವರ   ಪ್ರಥಮ   ಕಥಾ   ಸಂಕಲನವಾದ  “  ಕದ   ತೆರೆದ   ಆಕಾಶ ”  ಕೃತಿಯು   ಹಲವು ಕಾರಣಕ್ಕಾಗಿ   ವಿಶಿಷ್ಟ   ಕಥಾ   ಸಂಕಲನವಾಗಿದೆ .  ಕುದುರೆಗಿಂತ   ಅದರ   ಲದ್ದಿ   ಬಿರುಸು   ಎನ್ನುವ   ಗಾದೆಯಂತೆ   ಇವೊತ್ತಿನ   ಪತ್ರಿಕೋದ್ಯಮದಲ್ಲಿ   ಸುದ್ದಿಗಿಂತ   ಸದ್ದು   ಮಾಡಿದ   ಮತ್ತು ಮಾಡುತ್ತಿರುವ   ಪತ್ರಕರ್ತರೆ   ಹೆಚ್ಚು .  ಆದರೆ ,  ಕಳೆದ   ಇಪ್ಪತ್ತೈದು   ವರ್ಷಗಳಿಂದ   ಕನ್ನಡದ   ಪ್ರಮುಖ   ದಿನಪತ್ರಿಕೆಗಳಲ್ಲಿ   ಮತ್ತು   ದೃಶ್ಯ   ಮಾಧ್ಯಮದಲ್ಲಿ   ಸೇವೆ   ಸಲ್ಲಿಸಿರುವ   ಚಾಂದ್...

ಬದುಕು ಗೆಲ್ಲಿಸುವ ಸಿಮರೂಬ....

ಇಮೇಜ್
ಧರೆಗಿಳಿದ ಸ್ವರ್ಗಸೀಮೆಯ ಸಸ್ಯ....  ಕ್ಯಾನ್ಸರ್ ಮುಕ್ತ ನಾಡು ಕಟ್ಟುವ-ಡಾ.ಜೋಷಿ ದಂಪತಿ ಕನಸು  ಆತನ ಹೆಸರು ನಚಿಕೇತ್. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿಗೆ ಸೇರ್ಪಡೆಯಾಗಿದ್ದ. ಆಗ ಆತನಿಗೆ ಕಾಣಿಸಿಕೊಂಡಿದ್ದು ಮಾರಕ ಕಾಯಿಲೆ. `ಇದು ಬ್ಲಡ್ ಕ್ಯಾನ್ಸರ್, ತಕ್ಷಣ ಚಿಕಿತ್ಸೆ ಆರಂಭಿಸಿ' ಎಂದು ವೈದ್ಯರು ಸಲಹೆ ಮಾಡುತ್ತಾರೆ. ಕುಟುಂಬ ಕಣ್ಣೀರಾಗುತ್ತದೆ, ಬೆಳೆದು ನಿಂತ ಮಗನ ಭವಿಷ್ಯವೇ ಮುಗಿದು ಹೋದಂತೆ ಕುಸಿದು ಕುಳಿತು ಬಿಡುತ್ತದೆ. ಧೃತಿಗೆಡದ ಅಪ್ಪ-ಅಮ್ಮ ಮೊದಲ ಕಿಮೋಥೆರಪಿಯನ್ನೂ ಮಾಡಿಸುತ್ತಾರೆ. ಆ ಸಮಯದಲ್ಲೇ ಅವರಿಗೆ ಸಿಕ್ಕ ಮಾಹಿತಿ-ಸಿಮರೂಬಚಿಕಿತ್ಸೆ. ಬೇರೇನನ್ನೂ ಯೋಚಿಸದೇ ಚಿಕಿತ್ಸೆ ಶುರು ಮಾಡಿಕೊಳ್ಳುತ್ತಾರೆ. ಆರು ತಿಂಗಳು ನಿರಂತರ ಚಿಕಿತ್ಸೆ. ಬಳಿಕ ಕ್ಲಿನಿಕಲ್ ಟೆಸ್ಟ್; ಕ್ಯಾನ್ಸರ್ ಇರುವ ಸಣ್ಣ ಕುರುಹೂ ಕಾಣಿಸುವುದಿಲ್ಲ! ಸಿಮರೂಬ ಗಿಡ (ಲಕ್ಷ್ಮೀತರು)ದೊಂದಿಗೆ ಡಾ. ಜೋಷಿ ದಂಪತಿ   ಆಕೆಯ ಹೆಸರು ಸುಲೇಖಾ. ಇಬ್ಬರು ಮಕ್ಕಳ ತಾಯಿ. ಆಕೆಗೆ ಕಾಣಿಸಿಕೊಂಡಿದ್ದು ಮೆಲನೋಮಾ. ಇದೊಂದು ಚರ್ಮರೋಗ. ಕ್ಯಾನ್ಸರ್ ನಲ್ಲಿಯೇ ಅತ್ಯಂತ ಮಾರಕವಿದು ಎನ್ನುತ್ತಾರೆ ವೈದ್ಯರು. ಸುಲೇಖಾ ಪತ್ನಿಗೆ ತಜ್ಞ ವೈದ್ಯರು ಹೇಳಿದ್ದು ಇಷ್ಟು; ಬದುಕಿದ್ದರೆ ಮೂರು ಅಥವಾ ನಾಲ್ಕು ತಿಂಗಳು ಮಾತ್ರ! ಆದರೆ ಕಿದ್ವಾಯಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು ಸುಲೇಖಾಗೆ ಮಾಡಿದ ಸಲಹೆ- ಸಿಮರೂಬ...