ಬ್ರಾಂಡ್ ಬೆಂಗಳೂರಿಗೆ ನವಚೈತನ್ಯ: ದಕ್ಷಿಣ ಭಾರತದ ಮೊದಲ ಡಬ್ಬಲ್ ಡೆಕ್ಕರ್ ರಸ್ತೆ
-ಚಂದ್ರಮುಖಿ ವಿಶ್ವದ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ . ಇದು ಸಿಲಿಕಾನ್ ಸಿಟಿ , ಗಾರ್ಡನ್ ನಗರಿ , ಮಾಹಿತಿ ತಂತ್ರಜ್ಞಾನದ ತೊಟ್ಟಿಲು . ವರ್ಷದ ಬಹುತೇಕ ತಿಂಗಳು ಇಲ್ಲಿರುವುದು ಸಹನೀಯ ಹವಾಮಾನ . ಅರ್ಧಕ್ಕರ್ಧ ನಗರವನ್ನು ಸುತ್ತುವರಿದಿರುವ ಮೆಟ್ರೊ ರೈಲು , ವರ್ತುಲ ರಸ್ತೆಗಳು , ಎಕ್ಸಪ್ರೆಸ್ ಹೈವೆ , ವಿಶ್ವದರ್ಜೆಯ ಅಂತಾರಾಷ್ಟಿ çà ಯ ವಿಮಾನ ನಿಲ್ದಾಣ ... ಹೀಗೆ ಇಲ್ಲಿ ಜಗತ್ತಿನ ಅನೇಕ ನಗರಿಗಳಿಗೆ ಹೆಗಲೆಣೆಯಾಗಿ ನಿಲ್ಲುವ ಮೂಲಸೌಕರ್ಯಗಳು . ಬಹುಷಃ ಬೆಂಗಳೂರೆ A ಬ ಸುಂದರಿಯನ್ನು ಇಷ್ಟಪಡದೇ ಇರಲು ಕಾರಣಗಳು ವಿರಳ ! ನಮ್ಮ ದೇಶದ ಅನೇಕ ನಗರಗಳ ಜೊತೆಗೆ ಪೈಪೆ Çà ಟಿಗೆ ನಿಲ್ಲುವ ಇಂತಹ ವಿಶ್ವಮಟ್ಟದ ಶಹರಿಗೆ ಇನ್ನೊಂದು ಸೌಲಭ್ಯ ಈಗ ಸೇರ್ಪಡೆಯಾಗುತ್ತಿದೆ . ಅದು ಡಬ್ಬಲ್ ಡೆಕ್ಕರ್ ರಸ್ತೆ . ಅರ್ಥಾತ್ ರೋಡ್ ಕಮ್ ರೈಲು ರಸ್ತೆ . ಮೇಲ್ಭಾಗದಲ್ಲಿ ಮೆಟ್ರೋ ಹಳದಿ ರೈಲು ಮಾರ್ಗ . ಕೆಳಗೆ ಇಕ್ಕೆಲೆಗಳಲ್ಲಿ ಎಲವೇಟೆಡ್ ರಸ್ತೆಗಳು . ನೆಲಮಟ್ಟದಲ್ಲಿಯೂ ಎಡ - ಬಲ ಭಾಗಗಳಲ್ಲಿ ಎರಡು ರಸ್ತೆಗಳು . ಯಾವುದೇ ಅಡೆ - ತಡೆಗಳಿಲ್ಲದೆ ಸುಗಮ ಸಂಚಾರ . ಇದು ಸಾಧ್ಯವಾಗಿರುವುದು ದಕ್ಷಿಣ ಬೆಂಗಳೂರಿನ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ . ಇದರ ಒಟ್ಟು ಉದ್ದ ೩ . ೬ ಕಿ . ಮೀ . ರೈಲು ಮತ್ತು...