ಪೋಸ್ಟ್‌ಗಳು

ಹೊಸ ನಿರೀಕ್ಷೆ...

ಇಮೇಜ್
ನಿರೀಕ್ಷೆ ಎಂಬೋದು ಕಣ್ಣ ಕೊಳದೊಳಗಿನ ಕಮಲದಳವೋ ಕಂಕುಳ ಕೆಳಗಿನ ರೋಮದ ಕಚಕುಳಿಯೋ ಎಂಬ ಸೋಜಿಗವ ಬಲ್ಲವನು ನನ್ನ ಇನಿಯ ಮಾತ್ರ...!!

ಹರಳುಗಟ್ಟಿದ ನೀಲಾಕಾಶ

ಇಮೇಜ್
ಬೆಳಕಿನ ಬಳ್ಳಿಯ ಹಿಡಿದು ಜಂಬ ಪಡುವ ಶಂಖಪುಷ್ಪದ ಹೂವು ಕತ್ತಲ ಕಿಬ್ಬೊಟ್ಟೆಯೊಳಗೆ ಕರಗುವ ಬಣ್ಣಗಳಿಗೆ ಜೀವ ತುಂಬಲಾಗದೆ ಚಿಪ್ಪಿನೊಳಗೆ ನೆರಿಗೆಯಾಗುತ್ತದೆ ಹೊಸ ಮೊಳಕೆಗೆ ಶಾಖವಾಗುತ್ತದೆ ಇಲ್ಲೇ ತೀರದಲ್ಲಿ ಮನೆ ಇವಳದು ಕಡಲ ಗರ್ಭದಿಂದ ಉಕ್ಕಿ ಬಂದ ಅಲೆಗಳ ಸದ್ದಿಗೆ ಬಹು ಬಿನ್ನಾಣಗಿತ್ತಿಯ ಬೈಗಿಗೆ ಕಾವಳದ ಹಂಗಿಗೆ ಬಯಕೆಯು ಬೆಂಕಿಯಾಗಿ ಮತ್ತೆ ಬಸಿರಾಗುತ್ತಾಳೆ ನಾಳೆ ಮತ್ತೊಂದು ಬೆಳಗು ಮೊಳಕೆಯೊಡೆದರೆ ಅದರೊಳಗೊಂದು ಬೆರಗು ನೀಲಾಕಾಶವೇ ಹರಳುಗಟ್ಟಿ ಕಾಂಬ ಕಣ್ಣಿಗೆ ಈಕಿ ಜಂಬದ ಹೂವು...!

ನಕ್ಷತ್ರಗಳನ್ನು ಹಾಸಿದವಳು...

ಇಮೇಜ್
ಮಿಕ್ಸಿ ಇರಲಿಲ್ಲ, ಹಿಟ್ಟಿನ ಗಿರಣಿಯೂ ಇಲ್ಲ ರಾತ್ರಿ ನೆನೆ ಹಾಕಿದ ಅಕ್ಕಿ ಬೆಳ್ಳಿ ಮೂಡುವ ಹೊತ್ತಿಗೆ ಸೆರಗು ಸೊಂಟಕ್ಕೆ ಸಿಕ್ಕಿ ರೊಟ್ಟಿಯ ಹಿಟ್ಟು ಕಟ್ಟಿದ್ದಾಯಿತು ಕೆಂಡದ ಮೇಲೆ ಸುಡುವ ರೊಟ್ಟಿ ಅಮ್ಮನ ಕಣ್ಣಲ್ಲಿ ನೀರು ಅಡುಗೆಮನೆ ಮೆಟ್ಟಿಲ ಮೇಲೆ ಹಸಿದು ಕೂತವನು ನಾನು ಸೆಗಣಿ ಅಂಟಿದ ಕೆಚ್ಚಲು ಸಾಕಾಗದು ಒಂದೇ ತಂಬಿಗೆ ನೀರು ಇನ್ನೊಂದು ಬಿಂದಿಗೆ ತಾ ಅಂದವಳು ಕೆಂಪಗಿನ ಕೆಚ್ಚಲಿಂದ ನೊರೆ ನೊರೆಯ ಹಾಲು ಅಂಡು ಊರಿಸಿ ಕತ್ತು ಇಣುಕಿಸಿ ಕಣ್ಣು ಪಿಳಿ ಪಿಳಿ ಹೀಗೆ ಕಾದವನು ನಾನು ಸೀಳಿದ್ದ ಒದ್ದೆ ನೆಲದೊಳಗೆ ಗೊಬ್ಬರ ಸಿಬರು ಸಿಬರಿನಂತೆ ಪುಷ್ಯಮಳೆ ಹಾಳೆಯ ಮೇಲೊಂದು ಗೊರಬು ಬಿತ್ತಿದ್ದು ನೆಲಗಡಲೆ ಬೀಜ ಓಲಿ ಕೊಡೆಯೊಳಗೆ ಕುಂತು ಮಣ್ಣಿನ ಘಮಲನು ಕುಡಿದು ಅಮ್ಮ ಇರಿಸಿದ ಜೀವವು ಇನ್ನು ಮೊಳಕೆಯೊಡೆಯದೇ ಹೇಗೆ ಉಳಿದೀತೆಂದು ಬಿಮ್ಮನೆ ಸಂಭ್ರಮಿಸಿದವನು ನಾನು (ನಾ ತೆಗೆದ ಅಮ್ಮನ ಫೋಟೊಗಳು..) ಬಾವಿಕಟ್ಟೆಯ ಮಗ್ಗುಲಲಿ ಪಾರಿಜಾತದ ಗಿಡವಿತ್ತು ಬೈಗು ಹರಿದರೆ ಸಾಕು ಕಸುಬನ್ನೆಲ್ಲ ಬಿಸಾಕಿ ಸೆರಗ ತುಂಬಿಕೊಳ್ಳುತ್ತಿದ್ದಳು ಕೆಂಪು ನತ್ತಿನ ಸುಂದರಿಯರ ಜಗಲಿಯ ತುಂಬ ನಕ್ಷತ್ರ ರಾಶಿ ಮನೆಯ ಮೂಲೆ ಮೂಲೆಗೂ ಜೀವಸೆಲೆ ಘಮದ ನೆಯ್ಗೆ ಕಟ್ಟಿದವನು ನಾನು ಕತ್ತಲ ಕಳೆವ ತತ್ವಮಸಿ ಇವಳಲ್ಲ ಮಸಿ ಕಚ್ಚಿದ ಲಾಟೀನು ಬೂದಿಯ ಸೆಳಕಿಗೆ ಸಿಕ್ಕು ಹೊಳಪು ಕೊಟ್ಟವಳಿವಳು ಬೆಳಕ ಕಣ್ಣಿಗೆ ಕಣ್ಣು ನಿರುಕಿಸಿ ಅವಳ ನಿಟಿಲ ಗೆರೆಗಳನು ಓದದೆ ಮರೆತುಬಿಟ್ಟವನು ನಾನು (ಇವತ್ತು -ಮೇ 8- ಅಮ್ಮನ ...

ಹನಿಗಳ ಹಂಗಿನಲ್ಲಿ...

ಇಮೇಜ್
ಚಿಗುರೆಲೆಯ ಕೊನೆಯಲ್ಲಿ ನಿಂತ ಹನಿಗೆ ಶಿಲೆಯಾಗುವ ತಪಸ್ಸು ಹನಿಗಾಗಿ ಕಾದಿರುವ ಭುವಿಗೆ ಬಂಧವಾಗುವ ಸಂಭ್ರಮ ##### ಹಾಲು ತುಂಬಿದ ಬಟ್ಟಲಲ್ಲಿ ಚಂದಿರನ ಬಿಂಬಕ್ಕಾಗಿ ಕಾದ ಚೆಲುವಿಗೆ ತಾನೊಂದು ನಕ್ಷತ್ರವೆಂಬ ಬಿಂಕವಿರಲಿಲ್ಲ ಮೆರವಣಿಗೆ ಹೊರಟ ಸಾಲಿಗ್ರಾಮದ ಶಿಲೆಗೆ ಮೂರ್ತರೂಪದ ಹಂಗಿರಲಿಲ್ಲ ##### ನದಿಯ ಲಹರಿ ನೋಡಿದ್ದಿಯಾ ಇಳಿಬಿಟ್ಟ ಕಾಲಿನ ಬೆರಳು ಚುಂಬಿಸಿ ಹೋದ ಅಲೆಯ ಕೇಳಿದೆ ನೆನಪು ಮಾಡಿಕೊಂಡಳೆ ಗೆಳತಿ ನಸುನಕ್ಕು ಮತ್ತೊಮ್ಮೆ ಕಲರವವಾಯ್ತು #####

ಕನ್ನಡದ ಒಂದು ಸುಮಧುರ ಹಾಡು... ಒಮ್ಮೆ ಕೇಳಿ..ನೋಡಿ...

ಇಮೇಜ್

ಎಲ್ಲ ಬ್ಲಾಗ್ ಸ್ನೇಹಿಗಳಿಗೆ ಯುಗಾದಿ ಶುಭ ಹಾರೈಕೆ...!

ಇಮೇಜ್

ತಿಳಿ ತಿಳಿ ಬಣ್ಣ...

ಇಮೇಜ್